ಸಿಡ್ನಿ ಟೆಸ್ಟ್: ರಾಹುಲ್, ಕೊಹ್ಲಿ ಶತಕ, ಇಂಡಿಯಾ ಫೈಟಿಂಗ್
ಸಿಡ್ನಿ, ಜ.7: ಕನ್ನಡಿಗ ಕೆಎಲ್ ರಾಹುಲ್ ಚೊಚ್ಚಲ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ನಲ್ಲಿ ಉತ್ತಮ ಹೋರಾಟ ತೋರುತ್ತಿದೆ. ಮೂರನೇ ದಿನ ಚಹಾ ವಿರಾಮದ ವೇಳೆಗೆ ಭಾರತ 234/2 ಸ್ಕೋರ್ ಮಾಡಿತ್ತು.
ಹಲವು ದಾಖಲೆಗಳನ್ನು ಮುರಿದಿರುವ ನಾಯಕ ವಿರಾಟ್ ಕೊಹ್ಲಿ 140ರನ್ ಗಳಿಸಿ ನಾಟೌಟ್ ಆಗಿದ್ದಾರೆ. ಅಜಿಂಕ್ಯ ರಹಾನೆ 13, ಸುರೇಶ್ ರೈನಾ 0 ಗಳಿಸಿ ಔಟಾದರು. ವೃದ್ಧಿಮನ್ ಸಹಾ 14 ಔಟಾಗದೆ ಉಳಿದಿದ್ದಾರೆ. ಅಸೀಸ್ ಮೊತ್ತಕ್ಕಿಂತ ಟೀಂ ಇಂಡಿಯಾ 230 ರನ್ ಗಳಿಂದ ಹಿಂದಿದೆ.
2ನೇದಿನದ ಅಂತ್ಯಕ್ಕೆ ಚೇತರಿಕೆ ಕಂಡು 71/1 ಸ್ಕೋರ್ ಮಾಡಿದೆ. ಕೆಎಲ್ ರಾಹುಲ್ 31 ರನ್ ಹಾಗೂ ರೋಹಿತ್ ಶರ್ಮ 40 ರನ್ ಸ್ಕೋರ್ ಮಾಡಿ ವಿಕೆಟ್ ಕಾಯ್ದುಕೊಂಡಿದ್ದರು. ಆದರೆ, ತಂಡದ ಮೊತ್ತ 97 ಆಗಿದ್ದಾಗ 53 ರನ್ ಗಳಿಸಿದ್ದ ರೋಹಿತ್ ಶರ್ಮ ನಾಥನ್ ಸ್ಪಿನ್ ಬಲೆಗೆ ಬಿದ್ದರು. [ಸಿಡ್ನಿ ಟೆಸ್ಟ್: ಎರಡನೇ ದಿನದ ವರದಿ]

3ನೇಭೋಜನ ವಿರಾಮದ ವೇಳೆ 122/2 ಸ್ಕೋರ್ ಮಾಡಿದ್ದ ಟೀಂ ಇಂಡಿಯಾಕ್ಕೆ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಆಸರೆಯಾದರು. ಚೊಚ್ಚಲ ಶತಕ ಗಳಿಸಿದ ರಾಹುಲ್ 110(262 ಎ, 13 ಬೌಂಡರಿ, 1 ಸಿಕ್ಸರ್) ಅವರು ಸ್ಟಾರ್ಕ್ ಗೆ ರಿಟರ್ನ್ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.[ಕೆಎಲ್ ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ]
ರಾಹುಲ್ ಶತಕ ಗಳಿಕೆ ಸುಲಭವಾಗಿರಲಿಲ್ಲ. ಹೊಸ ಚೆಂಡು ಪಡೆದ ಸ್ಟಾರ್ಕ್ ಹಾಗೂ ಹ್ಯಾರೀಸ್ ದಾಳಿಗೆ ರಾಹುಲ್ ಅಲ್ಲದೆ ಕೊಹ್ಲಿ ಕೂಡಾ ಕಷ್ಟಪಡಬೇಕಾಯಿತು. ಈ ಸಮಯದಲ್ಲಿ ಸಂಯಮ ಕಳೆದುಕೊಳ್ಳದಂತೆ ರಾಹುಲ್ ಗೆ ನಾಯಕ ಕೊಹ್ಲಿ ತಿಳಿ ಹೇಳುತ್ತಿದ್ದರು. ತಾಳ್ಮೆಯಾಟ ಪ್ರದರ್ಶಿಸಿದ ರಾಹುಲ್ ಬೌಂಡರಿ ಹೊಡೆಯುವ ಮೂಲಕ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು.
ಕೊಹ್ಲಿಗೆ ಜೀವದಾನ: ವಿರಾಟ್ ಕೊಹ್ಲಿ ಡ್ರೈವ್ ಮಾಡಲು ಹೋಗಿ ಸ್ಮಿತ್ ಗೆ ಕ್ಯಾಚ್ ಕೂಡಾ ಕೊಟ್ಟಿದ್ದರು. ಅದರೆ, ಸ್ಮಿತ್ ಕೈಚೆಲ್ಲಿದ್ದರಿಂದ ಜೀವದಾನ ಸಿಕ್ಕಿತು.ಇತ್ತೀಚಿನ ವರದಿ ಬಂದಾಗ ಕೊಹ್ಲಿ 86, ರಹಾನೆ 1 ರನ್ ಗಳಿಸಿ ಆಡುತ್ತಿದ್ದಾರೆ. ತಂಡದ ಮೊತ್ತ 90 ಓವರ್ ಗಳಲ್ಲಿ 258/3.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications