For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ಬಿಸಿಸಿಐ ಕಿತ್ತಾಟದಲ್ಲಿ ಸೋತಿದ್ದು ಭಾರತೀಯ ಕ್ರಿಕೆಟ್: ಆಕಾಶ್‌ ಚೋಪ್ರಾ

Aakash chopra

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ದೊಡ್ಡ ವಿವಾದದ ಅಲೆ ಸೃಷ್ಟಿಸಿ ತೆರಳಿದ್ದಾರೆ. ನಾಯಕತ್ವ ಬದಲಾವಣೆ ಕುರಿತಾಗಿ ಆಯ್ಕೆ ಸಮಿತಿ ಹಾಗೂ ತನ್ನ ನಡುವೆ ಯಾವುದೇ ಸರಿಯಾದ ಸಂವಹನ ನಡೆದಿಲ್ಲ ಎಂದು ಕೊಹ್ಲಿ ಉಚ್ಚರಿಸಿದ್ದಾರೆ. ಇದ್ರಿಂದಾಗಿ ಬಿಸಿಸಿಐ ಹಾಗೂ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಬಹಿರಂಗಗೊಂಡಿದೆ.

ಇದು ಕೊಹ್ಲಿ ಮತ್ತು ಬಿಸಿಸಿಐ ನಡುವಿನ ಕಿತ್ತಾಟವಷ್ಟೇ ಅಲ್ಲದೆ ಭಾರತ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರನ್ನು ಬೆಚ್ಚಿಬೀಳಿಸಿದೆ. ಟಿ20 ನಾಯಕತ್ವದಿಂದ ಕೆಳಗಿಳಿದಾಗ ಬಿಸಿಸಿಐ ಸಂತೋಷದಿಂದ ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದ್ದಾರೆ.

ಭಾರತದ ಕ್ರಿಕೆಟ್‌ನ ಈ ಎಲ್ಲಾ ಬೆಳವಣಿಗೆ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಯೂಟ್ಯೂಬ್‌ನಲ್ಲಿ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿವಾದವು , ವದಂತಿಗಳು ಭಾರತೀಯ ಕ್ರಿಕೆಟ್‌ನ ಇಮೇಜ್‌ಗೆ ಕಳಂಕ ತಂದಿವೆ ಎಂದು ಚೋಪ್ರಾ ಹೇಳಿದ್ದಾರೆ.

ನಿಜವಾಗಿ ಸೋತಿದ್ದು ಭಾರತೀಯ ಕ್ರಿಕೆಟ್!

ನಿಜವಾಗಿ ಸೋತಿದ್ದು ಭಾರತೀಯ ಕ್ರಿಕೆಟ್!

"ಯಾರು ಸತ್ಯವನ್ನು ಹೇಳುತ್ತಾರೆ ಮತ್ತು ಯಾರು ಸುಳ್ಳು ಹೇಳುತ್ತಾರೆ, ಯಾರು ಸರಿ ಮತ್ತು ಯಾರು ತಪ್ಪು ಎಂಬುದು ಪ್ರಶ್ನೆಯಲ್ಲ, ಇದು ಏಕೆ ನಡೆಯುತ್ತಿದೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಏಕೆಂದರೆ ಅದು ನಿಮ್ಮ ಮತ್ತು ನನ್ನ ಅಥವಾ ಅವನ ಅಥವಾ ಅವಳ ಬಗ್ಗೆ ಅಲ್ಲ. ಇನ್ನೊಬ್ಬರ ಬಗ್ಗೆಯೂ ಅಲ್ಲ, ಈ ಜಗಳದಲ್ಲಿ ಸೋತವರು ನಿಜವಾಗಿ ಭಾರತೀಯ ಕ್ರಿಕೆಟ್ ಎಂದು ಸತ್ಯ'' ಎಂದು ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

Flashback 2021: ಟೀಂ ಇಂಡಿಯಾ ಆಟಗಾರರ 4 ವಿಶ್ವದಾಖಲೆಗಳು

ವದಂತಿಗಳನ್ನ ನೋಡಿ ನನಗೆ ಆಶ್ಚರ್ಯವಾಯಿತು!

ವದಂತಿಗಳನ್ನ ನೋಡಿ ನನಗೆ ಆಶ್ಚರ್ಯವಾಯಿತು!

ಇತ್ತೀಚಿನ ಕೆಲವು ದಿನಗಳ ಕಾಲ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ, ರೋಹಿತ್ ಶರ್ಮಾ ನಾಯಕನಾಗುವ ಮೊದಲೇ ರಜೆ ಕೋರಿದ್ದರು ಎಂಬ ಸುದ್ದಿಯ ಸಾಲನನ್ನು ಓದುತ್ತಿದ್ದಂತೆ ನನಗೆ ಆಶ್ಚರ್ಯವಾಯಿತು. ಸತ್ಯವು ಕಾಲ್ಪನಿಕಕ್ಕಿಂತ ವಿಚಿತ್ರವಾಗಿರಬಹುದು, ಆದ್ರೆ ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಹೀಗೆ ಮಾಡುತ್ತಾರೆ ಎಂಬುದು ಅರ್ಥವಾಗದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಹೇಳಿಕೆ ಕುರಿತಾಗಿ ಸೌರವ್ ಗಂಗೂಲಿ ಸ್ಪಷ್ಟಪಡಿಸಬೇಕು: ಸಲ್ಮಾನ್ ಬಟ್

ಸ್ವತಃ ಬಿಸಿಸಿಐ ಖಜಾಂಜಿಯೇ ಈ ಮಾತನ್ನು ಒಪ್ಪಿಕೊಂಡಿದ್ರು!

ಸ್ವತಃ ಬಿಸಿಸಿಐ ಖಜಾಂಜಿಯೇ ಈ ಮಾತನ್ನು ಒಪ್ಪಿಕೊಂಡಿದ್ರು!

ಇದಕ್ಕೂ ಮೊದಲು, ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ರೋಹಿತ್ ಶರ್ಮಾಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲು ಬಿಸಿಸಿಐ ನಿರ್ಧರಿಸುವ ಮೊದಲು ಕೊಹ್ಲಿ ವಿರಾಮವನ್ನು ಕೋರಿದ್ದರು ಎಂದು ಹೇಳಿದ್ರು. ಆದ್ರೆ ಪತ್ರಿಕಾಗೋಷ್ಠಿಯಲ್ಲಿ, ಕೊಹ್ಲಿ ಅವರು ಎಂದಿಗೂ ವಿರಾಮವನ್ನು ಬಯಸಲಿಲ್ಲ ಮತ್ತು ರೋಹಿತ್ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಪಂದ್ಯಗಳನ್ನು ಆಡಲಿದ್ದಾರೆ ಎಂದು ಹೇಳಿದರು.

ಟಿ-20 ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ ನಂತರ, ಏಕದಿನ ಮತ್ತು ಟೆಸ್ಟ್ ಮಾದರಿಗಳಿಗೆ ನಾಯಕನಾಗಿ ಮುಂದುವರಿಯುವ ಬಗ್ಗೆ ಬಿಸಿಸಿಐ ಜೊತೆ ಮಾತನಾಡಿದ್ದೇನೆ ಎಂದು ಕೊಹ್ಲಿ ಹೇಳಿದರು. ಜೊತೆಗೆ ತಮ್ಮ ಹೇಳಿಕೆಯನ್ನು ನೀಡಿದಾಗ, ಅವರು T20 ನಾಯಕತ್ವವನ್ನಷ್ಟೇ ತೊರೆಯುತ್ತಿದ್ದೇನೆ ಎಂದು ಹೇಳಿದ್ದರು, ಆದರೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಾಯಕತ್ವವನ್ನು ಉಳಿಸಿಕೊಂಡರು. ಆದ್ರೆ ಈ ನಾಯಕತ್ವವು ಹಕ್ಕು ಅಲ್ಲ , ಅದೊಂದು ಸವಲತ್ತು. ಆದ್ದರಿಂದ ನೀವು ಯಾವುದೇ ಸವಲತ್ತು ನಿಮ್ಮ ಹಕ್ಕು ಎಂದು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಆಕಾಶ್ ಚೋಪ್ರಾ ಕೊಹ್ಲಿಗೆ ಕಿವಿಮಾತು ಹೇಳಿದ್ದಾರೆ.

ರೋಹಿತ್‌ಗೆ ನಾಯಕತ್ವ ನೀಡಿರುವುದು ಉತ್ತಮ ನಿರ್ಧಾರ

ರೋಹಿತ್‌ಗೆ ನಾಯಕತ್ವ ನೀಡಿರುವುದು ಉತ್ತಮ ನಿರ್ಧಾರ

ರೋಹಿತ್‌ಗೆ ಏಕದಿನ ನಾಯಕತ್ವ ನೀಡುವುದು ಭಾರತೀಯ ಕ್ರಿಕೆಟ್‌ಗೆ ಉತ್ತಮ ನಿರ್ಧಾರವಾಗಿದೆ ಎಂದು ಚೋಪ್ರಾ ಹೇಳುತ್ತಾರೆ. ಆದರೆ, ಆಯ್ಕೆದಾರರು ಮತ್ತು ಮಂಡಳಿಯು ಈ ಬಗ್ಗೆ ಕೊಹ್ಲಿಯೊಂದಿಗೆ ಚರ್ಚಿಸಬೇಕಾಗಿತ್ತು, ಕೊಹ್ಲಿ ಅವರು ಎಂದಿಗೂ ಚರ್ಚೆಯ ಭಾಗವಾಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

"ನೀವು ನಿಮ್ಮ ದೇಶದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರ ಬಗ್ಗೆ ಮಾತನಾಡುತ್ತಿರುವಾಗ ಮತ್ತು ನೀವು ಅವರನ್ನು ನಾಯಕನನ್ನಾಗಿ ಬದಲಾಯಿಸಲು ಬಯಸುತ್ತೀರಿ, ಅದು ಸಂಪೂರ್ಣವಾಗಿ ಉತ್ತಮವಾಗಿದೆ, ಆದರೆ ನೀವು ಕೇವಲ ತಿಳಿಸುವ ಬದಲು, ಅವರೊಂದಿಗೆ ಮಾತನಾಡಬೇಕಾಗಿತ್ತು" ಎಂದು ಚೋಪ್ರಾ ತಮ್ಮ ಮಾತು ಮುಗಿಸಿದ್ರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಹೇಳಿದ್ದು ಏನು? | Oneindia Kannada
ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿಯ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿಯ ವೇಳಾಪಟ್ಟಿ

ಸೆಂಚುರಿಯನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ನಡೆಯಲಿದೆ. ಇನ್ನು ಎರಡನೇ ಪಂದ್ಯವು ಹೊಸ ವರ್ಷದಲ್ಲಿ, ಅಂದರೆ 2022 ರಿಂದ ಆರಂಭವಾಗಲಿದೆ.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್‌: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್‌, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್‌ ಟೌನ್

ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.

ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್‌ ಟೌನ್, ಸಮಯ - 2.00 PM

Story first published: Thursday, December 16, 2021, 18:44 [IST]
Other articles published on Dec 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+