Flashback 2021: ಟೀಂ ಇಂಡಿಯಾ ಆಟಗಾರರ 4 ವಿಶ್ವದಾಖಲೆಗಳು

ಪ್ರಸ್ತುತ ವರ್ಷದಲ್ಲಿ ಟೀಂ ಇಂಡಿಯಾ ಎರಡು ಐಸಿಸಿ ಟ್ರೋಫಿಗಳನ್ನ ಕೈ ಚೆಲ್ಲಿದರೂ ಸಹ ಟೆಸ್ಟ್ ಕ್ರಿಕೆಟ್ ಹಾಗೂ ಲಿಮೆಟೆಡ್ ಓವರ್ ಫಾರ್ಮೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. 2020ರಲ್ಲಿ ಕೊರೊನಾವೈರಸ್ ಪರಿಣಾಮದಿಂದಾಗಿ ಹೆಚ್ಚಿನ ಕ್ರಿಕೆಟ್ ಸರಣಿ ಮುಂದೂಡಿಲ್ಪಟ್ಟಿದ್ದರೂ ಸಹ, 2021ರಲ್ಲಿ ಕ್ರಿಕೆಟ್ ಅಷ್ಟೇ ಅಲ್ಲದೇ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ.
2021 ರಲ್ಲಿ, ದ್ವಿಪಕ್ಷೀಯ ಸರಣಿಯಾಗಿರಲಿ ಅಥವಾ ಐಸಿಸಿ ಪಂದ್ಯಾವಳಿಯಾಗಿರಲಿ ಕೆಲವು ಕ್ರಿಕೆಟ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುವುದರಲ್ಲಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು ಆದರೆ ನ್ಯೂಜಿಲೆಂಡ್‌ಗೆ ಪ್ರಶಸ್ತಿಯನ್ನು ಬಿಟ್ಟುಕೊಟ್ಟಿತು. ಅದೇ ಸಮಯದಲ್ಲಿ, ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನವು ಉತ್ತಮವಾಗಿರಲಿಲ್ಲ, ಹೀಗಾಗಿಯೇ ಲೀಗ್ ಹಂತದಲ್ಲೇ ಹೊರಬಿದ್ದಿತು.
ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತ ತಂಡದ ಪ್ರದರ್ಶನ ವಿಶೇಷವಲ್ಲದಿದ್ದರೂ, 2021 ರಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದೆ. ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದೆ, ಅದೇ ಸಮಯದಲ್ಲಿ, ಸೀಮಿತ ಓವರ್‌ಗಳ ಸ್ವರೂಪದಲ್ಲೂ ಅನೇಕ ದಾಖಲೆ ಮುಡಿಗೇರಿಸಿಕೊಂಡಿದೆ. 2021 ರಲ್ಲಿ ಭಾರತ ತಂಡ ಮತ್ತು ಆಟಗಾರರು ತಮ್ಮ ಹೆಸರಲ್ಲಿ ಮಾಡಿದ 4 ವಿಶ್ವ ದಾಖಲೆಗಳು ಈ ಕೆಳಗಿವೆ.

ಅಕ್ಷರ್ ಪಟೇಲ್ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಆಟಗಾರ
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ಅಕ್ಷರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ಆರಂಭ ಪಡೆದಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಚೊಚ್ಚಲ ಸರಣಿಯಲ್ಲಿ 3 ಟೆಸ್ಟ್‌ಗಳಲ್ಲಿ 27 ವಿಕೆಟ್‌ಗಳನ್ನು ಪಡೆದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅದ್ಭುತ ಆರಂಭ ಮಾಡಿ ಮೊದಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿದರು. ಇದರೊಂದಿಗೆ ಅಕ್ಷರ್ ಪಟೇಲ್ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಪಡೆದ 9ನೇ ಆಟಗಾರ ಎನಿಸಿಕೊಂಡರು. ಅಕ್ಷರ್ ಪಟೇಲ್ ಎರಡನೇ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿ ಎರಡೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರು.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ, ಅವರು ತಮ್ಮ ಹೆಸರಿನಲ್ಲಿ 10 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನ ಮೊದಲ 4 ಪಂದ್ಯಗಳಲ್ಲಿ ಅತಿ ಹೆಚ್ಚು 5 ವಿಕೆಟ್ ಗೊಂಚಲು ಪಡೆದ ಆಟಗಾರರ ಪಟ್ಟಿಯಲ್ಲಿ ಅಕ್ಷರ್ ಪಟೇಲ್ ಅಗ್ರಸ್ಥಾನಕ್ಕೆ ತಲುಪಿದ್ದಾರೆ.
ಮೊದಲ 5 ಪಂದ್ಯಗಳ ನಂತರ 5 ವಿಕೆಟ್‌ಗಳನ್ನು ಪಡೆದ ಭಾರತದ ಸ್ಪಿನ್ನರ್‌ಗಳಾದ ನರೇಂದ್ರ ಹಿರ್ವಾನಿ (3 ಬಾರಿ) ಮತ್ತು ಲಕ್ಷ್ಮಣ್ ಶಿವರಾಮಕೃಷ್ಣ (3 ಬಾರಿ) ದಾಖಲೆಯನ್ನು ಅಕ್ಷರ್ ಪಟೇಲ್ ಮುರಿದರು.
Year End 2021: ಈ ವರ್ಷ ಕ್ರಿಕೆಟ್ ಲೋಕದಲ್ಲಿ ಆದ ವಿವಾದಗಳೇನು?

ಮೂರು ಫಾರ್ಮೆಟ್‌ನಲ್ಲಿ 3,000ಕ್ಕೂ ಹೆಚ್ಚು ರನ್‌ಕಲೆಹಾಕಿದ ರೋಹಿತ್ ಶರ್ಮಾ!
ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು 2021 ರಲ್ಲಿ ಉತ್ತಮ ರನ್ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಟಿ20 ಫಾರ್ಮೆಟ್‌ನಲ್ಲೂ ಬೊಂಬಾಟ್ ಆಟವಾಡಿದ್ದಾರೆ.
ರೋಹಿತ್ ಶರ್ಮಾ ಈ ವರ್ಷ ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ 3 ಸಾವಿರ ರನ್ ಪೂರೈಸಿದ್ದಾರೆ ಮತ್ತು ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾಗೂ ಮೊದಲು, ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ 9205 ರನ್, ಅಂತಾರಾಷ್ಟ್ರೀಯ ಟಿ20ಯಲ್ಲಿ 3197 ರನ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 3047 ರನ್ ಪೂರೈಸಿದ್ದಾರೆ. ಅಷ್ಟೇ ಅಲ್ಲ, ರೋಹಿತ್ ಶರ್ಮಾ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಅತಿ ಹೆಚ್ಚು ಟಿ20 ಅರ್ಧಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹರ್ಭಜನ್ ಸಿಂಗ್ ದಾಖಲೆ ಮುರಿದ ಆರ್. ಅಶ್ವಿನ್
ಭಾರತ ತಂಡದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಈ ವರ್ಷ ಅದ್ಭುತ ದಾಖಲೆ ಮಾಡಿದ್ದಾರೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ , ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದಿದ್ದಾರೆ.
ನ್ಯೂಜಿಲೆಂಡ್‌ನ ಟಾಮ್ ಲಥಾಮ್‌ರವ ವಿಕೆಟ್ ಎಗರಿಸುತ್ತಿದ್ದಂತೆ, ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದು ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಗೊಂಡರು. ಹರ್ಭಜನ್ ಸೀಂಗ್ 103 ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ. ಆದ್ರೆ ಆರ್. ಅಶ್ವಿನ್ ಕೇವಲ 80 ಪಂದ್ಯಗಳಲ್ಲಿ 418 ವಿಕೆಟ್ ಕಬಳಿಸಿದ್ರು.
ಆರ್. ಅಶ್ವಿನ್ ಪ್ರಸ್ತುತ 427 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪ್ರಸ್ತುತ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಬಾರಿ 50 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರವಿಚಂದ್ರನ್ ಅಶ್ವಿನ್ (2015, 2016, 2017 ಮತ್ತು 2021) ಈ ಸಾಧನೆ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಹರ್ಭಜನ್ ಸಿಂಗ್ (3 ಬಾರಿ) ಮತ್ತು ಕಪಿಲ್ ದೇವ್ (3 ಬಾರಿ) ಹಿಂದೆ ಸರಿದಿದ್ದಾರೆ.

ಆಸ್ಟ್ರೇಲಿಯಾವನ್ನು ಎರಡು ಬಾರಿ ತವರಿನಲ್ಲಿ ಸೋಲಿಸಿದ ಮೊದಲ ತಂಡ ಭಾರತ!
ಈ ವರ್ಷ ಆಟಗಾರರ ಪಾಲಿಗೆ ಸಾಧನೆಗಳು ಒಂದೆಡೆಯಾದ್ರೆ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ತಂಡವೂ ಅಮೋಘ ರೀತಿಯಲ್ಲಿ ಟೆಸ್ಟ್ ಆರಂಭ ಪಡೆಯಿತು. ಆಸೀಸ್ ನೆಲದಲ್ಲಿ ನೆಲದಲ್ಲಿ ಆಸ್ಟ್ರೇಲಿಯಾವನ್ನು 2-1 ರಿಂದ ಸೋಲಿಸಿ ಸರಣಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾವನ್ನ ತನ್ನದೇ ನೆಲದಲ್ಲಿ ಎರಡು ಬಾರಿ ಸೋಲಿಸಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಈ ಐತಿಹಾಸಿಕ ಗೆಲುವಿನಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಜೊತೆಗೆ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು. ಭಾರತ ಈ ಹಿಂದೆ 2018-19ರ ಅವಧಿಯಲ್ಲಿ ಕಾಂಗರೂ ತಂಡವನ್ನು ಅವರದ್ದೇ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿಗೆ ಸೋಲಿಸಿ ಸರಣಿ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications