Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್ : ಉತ್ತಪ್ಪ ಹಿಂದಿಕ್ಕಿ ದುಬಾರಿ ಮೊತ್ತಕ್ಕೆ ಬಿನ್ನಿ ಸೇಲ್

ಬೆಂಗಳೂರು ಜುಲೈ 25: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಸಲಾದ ಆಟಗಾರರ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಸೇಲ್ ಆಗಿದ್ದಾರೆ.

ಕಳೆದ ಬಾರಿ ರಾಬಿನ್ ಉತ್ತಪ್ಪ ಅವರು 5.3 ಲಕ್ಷ ರು ಗೆ ಬಳ್ಳಾರಿ ತಂಡ ಸೇರಿ ದಾಖಲೆ ಬರೆದಿದ್ದರು. ಈ ಬಾರಿ ಹೊಸ ತಂಡ ನಮ್ಮ ಶಿವಮೊಗ್ಗಕ್ಕೆ 5.5 ಲಕ್ಷ ರುಗೆ ಸೇರಿದ್ದರೆ, ರಾಬಿನ್ ಉತ್ತಪ್ಪ ಅವರನ್ನು ಈ ಬಾರಿ 3.4 ಲಕ್ಷ ರು ಮೊತ್ತಕ್ಕೆ ಬಿಜಾಪುರ್ ಬುಲ್ಸ್ ತಂಡ ಖರೀದಿಸಿದೆ. [LIVE ಕೆಪಿಎಲ್ 2015: ಶಿವಮೊಗ್ಗಕ್ಕೆ ಬಿನ್ನಿ, ಬಿಜಾಪುರಕ್ಕೆ ಉತ್ತಪ್ಪ]

ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನ ಹರಾಜು ಪ್ರಕ್ರಿಯೆಯನ್ನು ಚಾರು ಶರ್ಮ ಅವರು ನಡೆಸಿಕೊಟ್ಟರು. ಒಟ್ಟಾರೆ ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ. (ಎಲ್ಲಾ ಮೊತ್ತಗಳು ಭಾರತೀಯ ರುಪಾಯಿಗಳನ್ನು ಓದಿಕೊಳ್ಳಿ)

Stuart Binny costliest

ಎ ಗುಂಪು (50,000 ರು ಮೂಲಧನ)
* ಅಭಿಮನ್ಯು ಮಿಥುನ್ : 5.10 ಲಕ್ಷ ರು (ಬಿಜಾಪುರ ಬುಲ್ಸ್)
* ಸಿಎಂ ಗೌತಮ್: 3.2 ಲಕ್ಷ (ಮೈಸೂರು ವಾರಿಯರ್ಸ್)
* ಎಸ್ ಎಲ್ ಅಕ್ಷಯ್: 1.4 ಲಕ್ಷ (ಹುಬ್ಳಿ ಟೈಗರ್ಸ್)
* ಶಿಶಿರ್ ಭವಾನೆ : 2.5 ಲಕ್ಷ ( ಮಂಗಳೂರು ಯುನೈಟೆಡ್)
* ಸಾಧಿಕ್ ಕಿರ್ಮಾನಿ: 1.4 ಲಕ್ಷ (ನಮ್ಮ ಶಿವಮೊಗ್ಗ)
* ಶ್ರೇಯಸ್ ಗೋಪಾಲ್: 3.1 ಲಕ್ಷ (ನಮ್ಮ ಶಿವಮೊಗ್ಗ)
* ಆರ್ ಜೋನಾಥನ್: 1.2 ಲಕ್ಷ (ಬೆಳಗಾವಿ ಪ್ಯಾಂಥರ್ಸ್)
* ಅಬ್ರಾಬ್ ಕಾಜಿ: 1.8 ಲಕ್ಷ (ನಮ್ಮ ಶಿವಮೊಗ್ಗ)
* ರಾಬಿನ್ ಉತ್ತಪ್ಪ: 3.4 ಲಕ್ಷ (ಬಿಜಾಪುರ್ ಬುಲ್ಸ್)
* ಕ್ರಾಂತಿ ಕುಮಾರ್: 1.8 ಲಕ್ಷ (ಹುಬ್ಬಳ್ಳಿ)
* ಪವನ್ ದೇಶಪಾಂಡೆ: 1.8 ಲಕ್ಷ (ಬಳ್ಳಾರಿ ಟಸ್ಕರ್ಸ್)
* ಸ್ಟುವರ್ಟ್ ಬಿನ್ನಿ: 5.5 ಲಕ್ಷ (ನಮ್ಮ ಶಿವಮೊಗ್ಗ)
* ಕೆ ಗೌತಮ್ : 1.1 ಲಕ್ಷ (ಮೈಸೂರು)
* ಬಿ ಅಖಿಲ್: 1.3 ಲಕ್ಷ (ಬಿಜಾಪುರ್)
* ಅನಿರುದ್ಧ ಜೋಶಿ: 3.7 ಲಕ್ಷ (ಬಳ್ಳಾರಿ ಟಸ್ಕರ್ಸ್)
* ಮಾಯಾಂಕ್ ಅಗರ್ವಾಲ್ : 3.8 ಲಕ್ಷ (ಬೆಳಗಾವಿ)
* ಉದಿತ್ ಪಟೇಲ್: 2.4 ಲಕ್ಷ (ಮಂಗಳೂರು)
* ಡೇವಿಡ್ ಮಥಾಯಿಸ್: 1.7 ಲಕ್ಷ (ಮೈಸೂರು)
* ಭರತ್ ಚಿಪ್ಳಿ: 90,000 ರು (ಬಳ್ಳಾರಿ)
* ಅಮಿತ್ ವರ್ಮಾ: 3.8 ಲಕ್ಷ (ಬಳ್ಳಾರಿ)
* ಕೆಪಿ ಪವನ್: 50,000 ರು (ಹುಬ್ಬಳ್ಳಿ)
* ಎಚ್ ಎಸ್ ಶರತ್: 50, 000 ರು (ಬೆಳಗಾವಿ)
* ಕೆಸಿ ಅವಿನಾಶ್ : 50 ಸಾವಿರ ರು (ಮಂಗಳೂರು ಯುನೈಟೆಡ್)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+