ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2015: ಶಿವಮೊಗ್ಗಕ್ಕೆ ಬಿನ್ನಿ, ಬಿಜಾಪುರಕ್ಕೆ ಉತ್ತಪ್ಪ

By Mahesh

ಬೆಂಗಳೂರು, ಜುಲೈ 25: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಬೆಳಗ್ಗೆ ಆಟಗಾರರ ಹರಾಜು ಆರಂಭವಾಗಿದೆ. ಚಾರುಶರ್ಮ ಅವರು ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ. ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಯಾವ ಆಟಗಾರರು ಯಾವ ತಂಡಕ್ಕೆ ಸೇರಿದ್ದಾರೆ ಇಲ್ಲಿದೆ ಅಪ್ಡೇಟ್ಸ್

ಸರಿ ಸುಮಾರು 239 ಆಟಗಾರರು ಹರಾಜಿಗೆ ಲಭ್ಯರಿದ್ದರು.ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಯಾವ ಯಾವ ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ ಎಂಬ ಪಟ್ಟಿ ಈಗಾಗಲೇ ಬಿಡುಗಡೆಯಾಗಿತ್ತು. [ಕೆಪಿಲ್ ಹರಾಜು: ರಾಬಿನ್, ಸ್ಟುವರ್ಟ್ ಬಿನ್ನಿ ಆಕರ್ಷಣೆ]

Charu Sharma

ಅಚ್ಚರಿಯೆಂಬಂತೆ ಕಳೆದ ಋತುವಿನ ದುಬಾರಿ ಆಟಗಾರರ ರಾಬಿನ್ ಉತ್ತಪ್ಪ ಅವರನ್ನು ಬಳ್ಳಾರಿ ಟಸ್ಕರ್ಸ್ ತಂಡ ಮುಕ್ತಗೊಳಿಸಿತ್ತು. ಈ ಬಾರಿ ಹರಾಜಿನಲ್ಲೂ ರಾಬಿನ್ ಅವರು ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುವ ನಿರೀಕ್ಷೆಯಿದೆ. [ಕೆಪಿಎಲ್ : ಯಾವ ತಂಡದ ಬಳಿ ಎಷ್ಟು ದುಡ್ಡಿದೆ?]

* ಬಳ್ಳಾರಿ ತಂಡಕ್ಕ್ಕೆ ಲಿಖಿತ್ ಬನ್ನೂರು 65 ಸಾವಿರಕ್ಕೆ ಸೇಲ್ ಆಗಿದ್ದು ವಿಶೇಷ.
* ಮಂಗಳೂರು ಯುನೈಟೆಡ್ ತಂಡಕ್ಕೆ ಎಡಗೈ ಸ್ಪಿನ್ನರ್ ಸೈಯದ್ ಮೊಯಿನುದ್ದೀನ್.
* ಬಿ ಗುಂಪಿನಿಂದ ವಿಕ್ರಮ್ ವೆಂಕಟೇಶ್ 10 ಸಾವಿರ ರು ಗೆ ನಮ್ಮ ಶಿವಮೊಗ್ಗ ತಂಡಕ್ಕೆ ಸೇರ್ಪಡೆ.
* ನಮ್ಮ ಶಿವಮೊಗ್ಗ ತಂಡಕ್ಕೆ ಆಫ್ ಸ್ಪಿನ್ನರ್ ದೈವಿಕ್ ವಿಶ್ವನಾಥ್ (ಕ್ರಿಕೆಟ್ ದಿಗ್ಗಜ ಜಿಆರ್ ವಿಶ್ವನಾಥ್ ಮಗ) 10,000 ರುಗೆ .

* ಬಿ ಗುಂಪಿನ ಆಟಗಾರರ ಹರಾಜು ಪ್ರಕ್ರಿಯೆ ಆರಂಭ. ಆಟಗಾರರ ಮೂಲ ಬೆಲೆ 10,000 ರು. ಮೊದಲ ಆಟಗಾರ ಅಧೋಕ್ಷ್ ಹೆಗ್ಡೆ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ. [ಕೆಪಿಎಲ್ : ಯಾವ ಆಟಗಾರ ಯಾವ ತಂಡಕ್ಕೆ ಮಾರಾಟ?]


12.45:
ಎ ಗುಂಪಿನ ನಂತರ ಬಿ ಗುಂಪಿನ ಹರಾಜಿಗೂ ಮುನ್ನ 5 ನಿಮಿಷದ ವಿರಾಮ.
* ಅವಿನಾಶ್ ಕೆಸಿಯನ್ನು 50 ಸಾವಿರ ರು ಗೆ ಗೆದ್ದುಕೊಂಡ ಮಂಗಳೂರು ಯುನೈಟೆಡ್.
* ಹುಬ್ಳಿ ಟೈಗರ್ಸ್ ಪಾಲಾದ ಕೆಬಿ ಪವನ್.
* ಎಡಗೈ ಬ್ಯಾಟ್ಸ್ ಮನ್ ಅಮಿತ್ ವರ್ಮಾ 3.8 ಲಕ್ಷ ರು ಗೆ ಬಳ್ಳಾರಿ ಪಾಲು.
* ಭರತ್ ಚಿಪ್ಳಿ 90 ಸಾವಿರ ರು ಗೆ ಬಳ್ಳಾರಿ ಟಸ್ಕರ್ಸ್ ತಂಡದ ಪಾಲು.
* ಭರತ್ ಚಿಪ್ಳಿ (ಬ್ಯಾಟ್ಸ್ ಮನ್) ಪರ ಬಳ್ಳಾರಿ ಹಾಗೂ ಬೆಳಗಾವಿ ಬಿಡ್ಡಿಂಗ್.

KPL 2015

* ಕುನಾಲ್ ಕಪೂರ್ ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಸಿಲ್ಲ.
* ಡೇವಿಡ್ ಮಥಾಯಿಸ್ ಮೈಸೂರು ತಂಡಕ್ಕೆ 1.7 ಲಕ್ಷ ರು.ಗೆ
* ಉದಿತ್ ಪಟೇಲ್ ಅವರು 2.4 ಲಕ್ಷ ರು ಗೆ ಮಂಗಳೂರು ಯುನೈಟೆಡ್ ತಂಡಕ್ಕೆ ಸೇರ್ಪಡೆ
* ಬಿ ಅಖಿಲ್ ( ಆಲ್ ರೌಂಡರ್) ಬಿಜಾಪುರ ತಂಡಕ್ಕೆ 1.3 ಲಕ್ಷಕ್ಕೆ ಸೇಲ್.
* ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವ ಮಾಯಾಂಕ್ ಅಗರ್ವಾಲ್ ಅವರು ಬೆಳಗಾವಿ ತಂಡಕ್ಕೆ 3.8 ಲಕ್ಷಕ್ಕೆ ಸೇಲ್.

* ಸುನಿಲ್ ಜೋಶಿ ಸಂಬಂಧಿಕರಾದ ಅನಿರುಧ್ ಜೋಶಿ ಅವರು 3.70 ಲಕ್ಷ ರು ಗೆ ಬಳ್ಳಾರಿ ಟಸ್ಕರ್ಸ್ ಪಾಲು.

* ಅನಿರುದ್ಧ್ ಜೋಶಿಗಾಗಿ ಬಳ್ಳಾರಿ ಟಸ್ಕರ್ಸ್, ಮೈಸೂರು ವಾರಿಯರ್ಸ್ ನಿಂದ ಬಿಡ್ಡಿಂಗ್.
* ಅವಿನಾಶ್ ಕೆಸಿ ಕೊಳ್ಳಲು ಯಾವ ತಂಡವೂ ಆಸಕ್ತಿ ತೋರಲಿಲ್ಲ.
* ಕೆ ಗೌತಮ್ (ಆಫ್ ಸ್ಪಿನ್ನರ್) 1.1 ಲಕ್ಷ ರು ಗೆ ಮೈಸೂರು ವಾರಿಯರ್ಸ್ ಗೆ ಸೇರ್ಪಡೆ

* ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ 5.50 ಲಕ್ಷ ರು ಗೆ ನಮ್ಮ ಶಿವಮೊಗ್ಗ ತಂಡಕ್ಕೆ ಸೇರಿದರು.
* ರಾಬಿನ್ ಉತ್ತಪ್ಪ ದಾಖಲೆ ಮುರಿದ ಸ್ಟುವರ್ಟ್ ಬಿನ್ನಿ. ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ಡಿಂಗ್.
* ಸ್ಟುವರ್ಟ್ ಬಿನ್ನಿ ಕೊಳ್ಳಲು ನಮ್ಮ ಶಿವಮೊಗ್ಗ, ಬೆಳಗಾವಿ ಪ್ಯಾಂಥರ್ಸ್ ಬಿರುಸಿನ ಬಿಡ್ಡಿಂಗ್.

Stuart Binny

* ಪವನ್ ದೇಶಪಾಂಡೆ (ಬ್ಯಾಟ್ಸ್ ಮನ್) 1.8 ಲಕ್ಷ ರು ಗೆ ಬಳ್ಳಾರಿ ಟಸ್ಕರ್ಸ್ ಗೆ.
* ಹುಬ್ಳಿ ಟೈಗರ್ಸ್ ತಂಡಕ್ಕೆ ಆಲ್ ರೌಂಡರ್ ಕ್ರಾಂತಿ ಕುಮಾರ್ ಸೇರ್ಪಡೆ. 1.8 ಲಕ್ಷ ರು ಗೆ ಸೇಲ್.
* ಎ ಗುಂಪಿನ ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ 1.30ಕ್ಕೆ ಭೋಜನ ವಿರಾಮ
* ನಿರೀಕ್ಷೆ ಆಯಿತು ಹುಸಿ. ಬಿಜಾಪುರ್ ಬುಲ್ಸ್ ತಂಡಕ್ಕೆ 3.4 ಲಕ್ಷ ರು ಗೆ ರಾಬಿನ್ ಉತ್ತಪ್ಪ ಹರಾಜು.
* ರಾಬಿನ್ ಉತ್ತಪ್ಪ ಈ ಬಾರಿ ಕಡಿಮೆ ಮೊತ್ತ ಹರಾಜು. ಕಳೆದ ಬಾರಿ 5.3 ಲಕ್ಷ ರುಗೆ ಬಳ್ಳಾರಿ ಟಸ್ಕರ್ಸ್ ಸೇರಿದ್ದ ಉತ್ತಪ್ಪ ಈ ಬಾರಿ ಬೆಳಗಾವಿ ಹಾಗೂ ಬಿಜಾಪುರದಿಂದ ಬಿಡ್ಡಿಂಗ್.
Robin Uthappa

11.50:
ಒಟ್ಟಾರೆ 8 ಆಟಗಾರರು ಹರಾಜಾಗಿದ್ದಾರೆ. ನಮ್ಮ ಶಿವಮೊಗ್ಗ ಎಚ್ಚರಿಕೆಯಿಂದ ಬಿಡ್ಡಿಂಗ್ ಮಾಡುತ್ತಿದೆ.
* ಎಡಗೈ ಸ್ಪಿನ್ನರ್ ಅಬ್ರಾರ್ ಕಾಜಿ ಹರಾಜು, 1.80 ಲಕ್ಷ ರು ಗೆ ನಮ್ಮ ಶಿವಮೊಗ್ಗ ಪಾಲು
* ಬ್ಯಾಟ್ಸ್ ಮನ್ ಜೋನಾಥನ್ ಗೆದ್ದುಕೊಂಡ ಬೆಳಗಾವಿ ಪ್ಯಾಂಥರ್ಸ್ (1.2 ಲಕ್ಷ ರು)
* ನಮ್ಮ ಶಿವಮೊಗ್ಗ ಸೇರಿದ ಶ್ರೇಯಸ್ ಗೋಪಾಲ್ 3.10 ಲಕ್ಷ ರುಗೆ ಬಿಕರಿ.
* ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಡಿದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹರಾಜು.
* ಸೈಯದ್ ಕಿರ್ಮಾನಿ ಅವರ ಮಗ ಸಾಧಿಕ್ ಕಿರ್ಮಾನಿ 1.4 ಲಕ್ಷ ರು ಗೆ ನಮ್ಮ ಶಿವಮೊಗ್ಗ ತಂಡದ ಪಾಲು.
KPL

* ಶಿಶಿರ್ ಭವಾನೆ (ಎಡಗೈ ಬ್ಯಾಟ್ಸ್ ಮನ್) 2.5 ಲಕ್ಷ ರು ಗೆ ಮಂಗಳೂರು ಯುನೈಟೆಡ್ ಸೇರಿದರು.
* ಎಲ್ ಅಕ್ಷಯ್ (ವೇಗಿ) 1.40 ಲಕ್ಷ ರುಗೆ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ
* ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಿಎಂ ಗೌತಮ್ 3.2 ಲಕ್ಷ ರುಗೆ ಕೊಂಡುಕೊಂಡ ಮೈಸೂರು ವಾರಿಯರ್ಸ್

* ವೇಗಿ ಅಭಿಮನ್ಯು ಮಿಥುನ್ 5.10 ಲಕ್ಷ ರು ಮೊತ್ತಕ್ಕೆ ಬಿಜಾಪುರ ಬುಲ್ಸ್ ಪಾಲು
11.15ರ ಸುಮಾರು ಚಾರು ಶರ್ಮ ಅವರಿಂದ ಹರಾಜು ಆರಂಭ. ಹೊಸ ತಂಡ ನಮ್ಮ ಶಿವಮೊಗ್ಗಕ್ಕೆ ಸ್ವಾಗತ ಕೋರಿದರು.


ತಂಡಗಳು: ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್, ನಮ್ಮ ಶಿವಮೊಗ್ಗ. [ಕೆಪಿಎಲ್ 2015 ವೇಳಾಪಟ್ಟಿ ಪ್ರಕಟ, ಸುದೀಪ್ ಟೀಂ ಎಂಟ್ರಿ]

ಇದಲ್ಲದೆ ಕಳೆದ ಬಾರಿ ಕಾಣಿಸಿಕೊಂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆದ್ದಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಆಲ್ ಸ್ಟಾರ್ ತಂಡವನ್ನು ಕಣಕ್ಕಿಳಿಯುತ್ತಿದೆ. ಕಿಚ್ಚ ಸುದೀಪ್ ಅವರು ನಾಯಕರಾಗಿದ್ದಾರೆ. ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಡೇವಿಡ್ ಜಾನ್ಸನ್ ಅವರು ಈ ತಂಡ ಆಕರ್ಷಣೆಯಾಗಲಿದ್ದಾರೆ.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X