
ಇದೇ ತಿಂಗಳ 20ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್
ಪಂದ್ಯಾವಳಿಯು ಈ ಜನವರಿ 20, 2022 ರಂದು ಪ್ರಾರಂಭವಾಗುತ್ತದೆ ಮತ್ತು ಇದು ಜನವರಿ 29, 2022 ರವರೆಗೆ ನಡೆದು ಮುಕ್ತಾಯಗೊಳ್ಳಲಿದೆ. ಓಮಾನ್‌ನ ಅಲ್ ಎಮಿರೇಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದ್ದು, ಈ ಹೊಸ ಲೀಗ್ನ ಆಯುಕ್ತರಾಗಿ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ನೇಮಕವಾಗಿದ್ದಾರೆ.
ಮತ್ತೆ ಆರ್‌ಸಿಬಿ, ದ.ಆಫ್ರಿಕಾ ಸೇರುವ ದೊಡ್ಡ ಸುಳಿವು ನೀಡಿದ ಎಬಿಡಿ; ಈ ಆಸೆಗೆ ಇವೆ ಅಡೆತಡೆಗಳು!

ಪಾಕಿಸ್ತಾನ, ಶ್ರೀಲಂಕಾದ ದಿಗ್ಗಜ ಆಟಗಾರರು ಭಾಗಿ
ಇನ್ನು ಏಷ್ಯಾ ಲಯನ್ಸ್ ತಂಡದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ಮಾಜಿ ದಿಗ್ಗಜ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ತಂಡದಲ್ಲಿ ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಕಮ್ರಾನ್ ಅಕ್ಮಲ್, ಚಮಿಂಡ ವಾಸ್, ರೋಮೇಶ್ ಕಲುವಿತರಣ, ತಿಲಕರತ್ನೆ ದಿಲ್ಶನ್, ಅಜರ್ ಮಹಮೂದ್, ಉಪುಲ್ ತರಂಗ, ಮಿಸ್ಬಾ ಉಲ್-ಹಕ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಮೊಹಮ್ಮದ್ ಯೂಸುಫ್, ಉಮರ್ ಗುಲ್ ಮತ್ತು ಅಸ್ಗರ್ ಅಫ್ಘಾನ್ ಕಾಣಿಸಿಕೊಳ್ಳಲಿದ್ದಾರೆ.

ಇಂಡಿಯಾ ಮಹರಾಜಸ್ ತಂಡದಲ್ಲಿ ಸಚಿನ್, ಸೆಹ್ವಾಗ್, ಯುವಿ
ಭಾರತದ ಪ್ರಮುಖ ಮಾಜಿ ಆಟಗಾರರನ್ನೊಳಗೊಂಡ ಇಂಡಿಯಾ ಮಹಾರಾಜಸ್ ತಂಡದ ಭಾರತ ಕ್ರಿಕೆಟ್‌ನ ದಿಗ್ಗಜರು ಕಣಕ್ಕಿಳಿಯಲಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಸೇರಿದಂತೆ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದ್ರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಾಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ ಆಡಲಿದ್ದಾರೆ.
ಕುಂತಲ್ಲಿ ಕೂರಂಗಿಲ್ಲ! ಡ್ರೆಸ್ಸಿಂಗ್ ರೂಂನಲ್ಲಿ ಬುಮ್ರಾ ಬೌಲಿಂಗ್ ಅಣಕಿಸಿದ ಕೊಹ್ಲಿ

ವರ್ಲ್ಡ್ ಜಾಯಂಟ್ಸ್ ತಂಡದಲ್ಲಿ ಇತರೆ ಮಾಜಿ ಆಟಗಾರರು
ವಿಶ್ವ ಕ್ರಿಕೆಟ್ ಲೆಜೆಂಡ್ಸ್ಗಳನ್ನು ಒಳಗೊಂಡಿರುವ ಮೂರನೇ ತಂಡದ ಆಟಗಾರರನ್ನು ಇನ್ನೂ ಕೂಡ ಪ್ರಕಟಿಸಲಾಗಿಲ್ಲ. ವರ್ಲ್ಡ್ ಜಾಯಂಟ್ಸ್ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಪ್ರತಿ ತಂಡಗಳ ವಿರುದ್ಧ ಎರಡು ಪಂದ್ಯಗಳು
LLC 2022 ಕ್ರಿಕೆಟ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿರುವ ಮೂರು ತಂಡಗಳು ಪ್ರತಿ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನ ಆಡಲಿವೆ. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡವು ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್ ಜಾಯಂಟ್ಸ್ ವಿರುದ್ಧ ತಲಾ ಎರಡು ಪಂದ್ಯ ಆಡಲಿದೆ. ಹೀಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಲೀಡ್ ಪಡೆದ ಎರಡು ತಂಡಗಳು ಜನವರಿ 29, 2022ರಂದು ಫೈನಲ್ ಪಂದ್ಯವನ್ನಾಡಲಿವೆ.


Click it and Unblock the Notifications
