For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಸರಣಿ ಬಳಿಕ ವಿಭಿನ್ನ ಕೊಹ್ಲಿಯನ್ನ ನೋಡುತ್ತೇವೆ ಎಂದು ಭಾವಿಸೋಣ: ಆಶಿಶ್ ನೆಹ್ರಾ

Virat kohli

ಸತತ ವೈಫಲ್ಯದಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಆಯ್ಕೆಗಾರರ ಸಮಿತಿ ಕೊಹ್ಲಿಗೆ ಎರಡು ಸರಣಿಗಳಿಂದ ವಿಶ್ರಾಂತಿ ನೀಡಿದೆ.

ಆದ್ರೆ ಈ ಸರಣಿ ಮುಗಿದ ಬಳಿಕವಾದ್ರೂ ನಾವು ವಿಭಿನ್ನ ಕೊಹ್ಲಿಯನ್ನ ನೋಡುತ್ತೇವೆ ಎಂದು ಭಾವಿಸೋಣ ಎಂದು ಟೀಂ ಇಂಡಿಯಾ ಮಾಜಿ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ. ಕೊಹ್ಲಿ ನೀಡಿರುವ ಈ ವಿಶ್ರಾಂತಿ ಸಹಾಯವಾಗಲಿದೆ ಎಂದು ಭಾವಿಸೋಣ ಎಂದಿದ್ದಾರೆ.

ನವೆಂಬರ್ 2019ರಿಂದ ಒಂದು ಶತಕವನ್ನ ಸಿಡಿಸದ ವಿರಾಟ್

ನವೆಂಬರ್ 2019ರಿಂದ ಒಂದು ಶತಕವನ್ನ ಸಿಡಿಸದ ವಿರಾಟ್

ನವೆಂಬರ್ 2019ರಿಂದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಒಂದೇ ಒಂದು ಶತಕ ಸಿಡಿದಿಲ್ಲ. 71 ಅಂತರಾಷ್ಟ್ರೀಯ ಶತಕಗಳ ಒಡೆಯನಾದ ವಿರಾಟ್, ಆನಂತರ ಸಂಪೂರ್ಣ ಫಾರ್ಮ್ ವೈಫಲ್ಯಗೊಂಡು ಮೂರು ಫಾರ್ಮೆಟ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಒಂದು ಉತ್ತಮ ಇನ್ನಿಂಗ್ಸ್ ಕೂಡ ಹೊರಬಂದಿಲ್ಲ.

ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ರಾ ಲಲಿತ್ ಮೋದಿ? ಸತ್ಯ ಬಿಚ್ಚಿಟ್ಟ ನಟಿ!

ಕೊಹ್ಲಿಗೆ ಫಿಟ್ನೆಸ್ ಸಮಸ್ಯೆಯಿಲ್ಲ, ವಿಶ್ರಾಂತಿ ಸಹಾಯವಾಗಬಹುದು

ಕೊಹ್ಲಿಗೆ ಫಿಟ್ನೆಸ್ ಸಮಸ್ಯೆಯಿಲ್ಲ, ವಿಶ್ರಾಂತಿ ಸಹಾಯವಾಗಬಹುದು

ವಿರಾಟ್ ಕೊಹ್ಲಿಗೆ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಆತ ದೀರ್ಘಕಾಲದಿಂದ ಫಾರ್ಮ್ ವೈಫಲ್ಯ ಅನುಭವಿಸಿದ್ದು, ಅದ್ರಿಂದ ಹೊರಬರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಆತ ಎರಡು ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದು ಅನುಕೂಲವಾದೀತು ಎಂದು ಕೊಹ್ಲಿ ಹೇಳಿದ್ದಾರೆ.

"33 ನೇ ವಯಸ್ಸಿನಲ್ಲಿ, ಅವರಿಗೆ (ವಿರಾಟ್) ಫಿಟ್ನೆಸ್ ಸಮಸ್ಯೆಯಲ್ಲ. ಅವರ ಸಾಧನೆ ಮತ್ತು ಪ್ರತಿಭೆ ಎಲ್ಲರಿಗೂ ಗೊತ್ತು. ವಿರಾಟ್ ಚೆನ್ನಾಗಿ ಕಂಬ್ಯಾಕ್ ಆಗುತ್ತಾನೆ, ಬೇಗ ಬೇಗ ಬರುತ್ತಾನೆ ಎಂಬ ಭರವಸೆ ಎಲ್ಲರಲ್ಲೂ ಇದೆ''

"ವೆಸ್ಟ್ ಇಂಡೀಸ್ ಸರಣಿಯ ನಂತರ ನಾವು ವಿಭಿನ್ನ ವಿರಾಟ್ ಅನ್ನು ನೋಡುತ್ತೇವೆ ಎಂದು ಭಾವಿಸೋಣ. ಅವನು ಒಂದು ತಿಂಗಳು ಅಥವಾ ಐದು ವಾರಗಳ ಕಾಲ ವಿಶ್ರಾಂತಿ ಪಡೆದರೆ, ಅದು ಅವನಿಗೆ ಸಹಾಯಕವಾಗುತ್ತದೆ. ವಿಶ್ರಾಂತಿ ಕೆಟ್ಟ ವಿಷಯವಲ್ಲ. ನೀವು ಕೇವಲ ಐಪಿಎಲ್, ನಂತರ ಟೆಸ್ಟ್ ಪಂದ್ಯ, ಮತ್ತು ನಂತರ ವೈಟ್ ಬಾಲ್ ಕ್ರಿಕೆಟ್ ಆಡಿದ್ದೀರಿ. ಯಾವುದೇ ಆಟಗಾರನು ರನ್ ಗಳಿಸದಿದ್ದರೆ ಒತ್ತಡಕ್ಕೆ ಒಳಗಾಗುತ್ತಾನೆ, "ಎಂದು ಮಾಧ್ಯಮ ಸಂವಾದದ ಸಮಯದಲ್ಲಿ (TimesofIndia.com) ಕೇಳಿದ ಪ್ರಶ್ನೆಗೆ ನೆಹ್ರಾ ಪ್ರತಿಕ್ರಿಯಿಸಿದರು.

21ನೇ ಶತಮಾನದಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿ: ಸಚಿನ್‌ಗೆ 10ನೇ ಸ್ಥಾನ, ಕೊಹ್ಲಿ ಟಾಪ್ 2, ಈತ ನಂಬರ್ 1!

ಆಟಗಾರ ಪ್ರದರ್ಶನ ನೀಡದಿದ್ದರೆ, ಸಾಕಷ್ಟು ಟೀಕೆಗೆ ಒಳಗಾಗುವುದು ಸಾಮಾನ್ಯ: ನೆಹ್ರಾ

ಆಟಗಾರ ಪ್ರದರ್ಶನ ನೀಡದಿದ್ದರೆ, ಸಾಕಷ್ಟು ಟೀಕೆಗೆ ಒಳಗಾಗುವುದು ಸಾಮಾನ್ಯ: ನೆಹ್ರಾ

ಆಟಗಾರನು ಕೊಹ್ಲಿಯಂತೆ ಕ್ಯಾಲಿಬರ್ ಆಟಗಾರನಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡದಿದ್ದರೆ ಆಟಗಾರ ಯಾವಾಗಲೂ ಚರ್ಚೆಯಲ್ಲಿರುತ್ತಾರೆ ಎಂದು ಆಶಿಶ್ ನೆಹ್ರಾ ಇದೇ ವೇಳೆಯಲ್ಲಿ ಹೇಳಿದ್ದಾರೆ. ಒರಟಾದ ಹಂತದಲ್ಲಿ ತಂಡದ ಸಹ ಆಟಗಾರರು, ನಿರ್ವಹಣೆ ಮತ್ತು ಆಯ್ಕೆಗಾರರ ಬೆಂಬಲವು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

"ನೀವು ಪ್ರದರ್ಶನ ನೀಡದಿದ್ದಾಗ, ವಿರಾಟ್ ಕೊಹ್ಲಿ ಮಾತ್ರವಲ್ಲದೆ, ಚರ್ಚೆಗಳು ನಡೆಯುತ್ತವೆ. ನೀವು ಕೊಹ್ಲಿಯ ಕ್ಯಾಲಿಬರ್ ಆಟಗಾರರಲ್ಲದಿದ್ದರೂ ಚರ್ಚೆಗಳು ನಡೆಯುತ್ತವೆ. ನೀವು ಆಡುತ್ತಿರುವಾಗ, ನೀವು ನಿಮ್ಮ ಆಟದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತೀರಿ ಮತ್ತು ಡ್ರೆಸ್ಸಿಂಗ್ ರೂಂ ಹೊರಗಿನ ಜನರಿಂದ ಏನೂ ಹೇಳುವುದನ್ನು ಕೇಳಬೇಡಿ. ನಿಮ್ಮ ತಂಡದ ಸಹ ಆಟಗಾರರು, ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರು ನಿಮ್ಮನ್ನು ಹೇಗೆ ಬೆಂಬಲಿಸುತ್ತಿದ್ದಾರೆ ಎಂಬುದು ಮುಖ್ಯವಾಗಿದೆ, "ಎಂದು ಮಾಧ್ಯಮ ಸಂವಾದದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ನೆಹ್ರಾ ಉತ್ತರಿಸಿದ್ದಾರೆ.

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್ ಇಂಡೀಸ್‌ಗೆ ತೆರಳಲಿದ್ದು, ಮೂರು ಏಕದಿನ ಪಂದ್ಯ ಹಾಗೂ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.

Story first published: Saturday, July 16, 2022, 10:39 [IST]
Other articles published on Jul 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+