21ನೇ ಶತಮಾನದಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿ: ಸಚಿನ್‌ಗೆ 10ನೇ ಸ್ಥಾನ, ಕೊಹ್ಲಿ ಟಾಪ್ 2, ಈತ ನಂಬರ್ 1!

ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಹಲವಾರು ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಹಾಗೂ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕ ಹೀಗೆ ಯಾರೂ ಮುರಿಯಲಾಗದ ಹಲವಾರು ಬೃಹತ್ ದಾಖಲೆಗಳು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿವೆ. ಹೀಗಾಗಿಯೇ ಸಚಿನ್ ಕ್ರಿಕೆಟ್ ದೇವರು ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಇನ್ನು ಸಚಿನ್ ತೆಂಡೂಲ್ಕರ್ ನಂತರ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಮತ್ತು ಶತಕಗಳ ದಾಖಲೆ ವಿಚಾರದ ಕುರಿತಾಗಿ ಸಾಕಷ್ಟು ಸದ್ದು ಮಾಡಿದ ಏಕೈಕ ಕ್ರಿಕೆಟಿಗನೆಂದರೆ ಅದು ವಿರಾಟ್ ಕೊಹ್ಲಿ. ಹೌದು, ಕಿಂಗ್ ಆಫ್ ಕ್ರಿಕೆಟ್ ಎಂದೇ ಖ್ಯಾತಿಯನ್ನು ಪಡೆದಿರುವಂತ ವಿರಾಟ್ ಕೊಹ್ಲಿ ಆರಂಭದಿಂದಲೂ ಸತತವಾಗಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಾ ಉತ್ತಮ ಫಾರ್ಮ್ ಹೊಂದಿದ್ದರು. ಹೀಗಾಗಿಯೇ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಅಂತರರಾಷ್ಟ್ರೀಯ ರನ್ ಮತ್ತು ಶತಕಗಳ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯವಿರುವ ಆಟಗಾರ ಎಂದು ಗುರುತಿಸಿಕೊಂಡಿದ್ದರು.
ಆದರೆ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದು ಸಾಲುಸಾಲು ಪಂದ್ಯಗಳಲ್ಲಿ ಸುಮಾರು ಎರಡೂವರೆ ವರ್ಷಗಳಿಂದ ಶತಕ ಗಳಿಸಲಾಗದೆ ಪರದಾಡುತ್ತಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ 20 ಮತ್ತು 21ನೇ ಶತಮಾನಗಳೆರಡರಲ್ಲೂ ಬ್ಯಾಟ್ ಬೀಸಿ ಅಬ್ಬರಿಸಿದ್ದು, ಎರಡೂ ಶತಮಾನಗಳಲ್ಲಿಯೂ ಸಹ ರನ್ ಹೊಳೆ ಹರಿಸಿದ್ದಾರೆ. ಹೀಗಾಗಿ ಈ ಶತಮಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡರೆ ಸಚಿನ್ ತೆಂಡೂಲ್ಕರ್ ಆ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದುಕೊಳ್ಳುತ್ತಾರೆ. ಹಾಗಿದ್ದರೆ 21ನೇ ಶತಮಾನದಲ್ಲಿ ಇಲ್ಲಿಯವರೆಗೂ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿರುವ ಆಟಗಾರರ ಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

21ನೇ ಶತಮಾನದಲ್ಲಿ ಅತಿ ಹೆಚ್ಚು ರನ್ ಬಾರಿಸಿದವರು
21ನೇ ಶತಮಾನದಲ್ಲಿ ( ಜನವರಿ 1, 2001ರಿಂದ ಜುಲೈ 14ರವರೆಗೆ ) ಇಲ್ಲಿಯವರೆಗೂ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಟಾಪ್ 10 ಪಟ್ಟಿ ಕೆಳಕಂಡಂತಿದೆ.
1. ಕುಮಾರ ಸಂಗಕ್ಕಾರ - 27460
2. ವಿರಾಟ್ ಕೊಹ್ಲಿ - 23709
3. ಮಹೇಲಾ ಜಯವರ್ಧನೆ - 22888
4. ರಿಕಿ ಪಾಂಟಿಂಗ್ - 21355
5. ಎಬಿ ಡಿ ವಿಲಿಯರ್ಸ್ - 20014
6. ಕ್ರಿಸ್ ಗೇಲ್ - 19203
7. ಜಾಕ್ಸ್ ಕಾಲಿಸ್ - 19055
8. ಹಶೀಮ್ ಆಮ್ಲಾ - 18672
9. ರಾಸ್ ಟೇಲರ್ - 18199
10. ಸಚಿನ್ ತೆಂಡೂಲ್ಕರ್ - 18042
11. ಜೋ ರೂಟ್ - 17471

ಸಂಗಕ್ಕಾರರನ್ನು ಹಿಂದಿಕ್ಕುತ್ತಾರಾ ವಿರಾಟ್ ಕೊಹ್ಲಿ?
21ನೇ ಶತಮಾನದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 23709 ರನ್ ಬಾರಿಸಿ ದ್ವಿತೀಯ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 27460 ರನ್ ಬಾರಿಸಿ ಅಗ್ರಸ್ಥಾನದಲ್ಲಿರುವ ಕುಮಾರ್ ಸಂಗಾಕಾರ ಅವರನ್ನು ಹಿಂದಿಕ್ಕಿ ಈ ಶತಮಾನದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆಯುವ ಸಾಧ್ಯತೆಗಳಿವೆ.

ಸಾರ್ವಕಾಲಿಕ ಪಟ್ಟಿಯಲ್ಲಿ ಸಚಿನ್ ದರ್ಬಾರ್
1989ರಿಂದ 2013ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಸಚಿನ್ ತೆಂಡೂಲ್ಕರ್ 34357 ರನ್ ಕಲೆ ಹಾಕುವುದರ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ದಾಖಲಿಸಿರುವ ಆಟಗಾರ ಎಂಬ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 28016 ರನ್ ಕಲೆಹಾಕಿರುವ ಕುಮಾರ್ ಸಂಗಾಕ್ಕಾರ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications