LLC 2023: ಲೆಜೆಂಡ್ಸ್ ಲೀಗ್‌ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್‌ಗಳು

ಫೆಬ್ರವರಿ 27ರಿಂದ ಮಾರ್ಚ್ 8ರವರೆಗೆ ಕತಾರ್‌ನಲ್ಲಿ ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಮಾಸ್ಟರ್ಸ್ ಸೀಸನ್‌ಗಾಗಿ ಹಲವು ಲೆಜೆಂಡ್ ಕ್ರಿಕೆಟಿಗರು ತಮ್ಮ ಭಾಗವಹಿಸುವಿಕೆಯನ್ನು ಮಂಗಳವಾರ, ಜನವರಿ 31ರಂದು ಘೋಷಿಸಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್‌ನ ಮೊದಲ ಋತುವಿನಲ್ಲಿ ವರ್ಲ್ಡ್ ಜೈಂಟ್ಸ್ ವಿಜೇತ ತಂಡವಾಗಿದೆ. ಇದೀಗ ಎಲ್‌ಎಲ್‌ಸಿ ಮಾಸ್ಟರ್ಸ್‌ಗಾಗಿ ಭಾಗವಹಿಸುವ ಆಟಗಾರರ ಪಟ್ಟಿಯಲ್ಲಿ ಇಯಾನ್ ಮಾರ್ಗನ್, ಗೌತಮ್ ಗಂಭೀರ್, ಇರ್ಫಾನ್ ಪಠಾಣ್, ಶೋಯೆಬ್ ಅಖ್ತರ್, ಕ್ರಿಸ್ ಗೇಲ್ ಮತ್ತು ಎಸ್ ಶ್ರೀಶಾಂತ್ ಸೇರಿದ್ದಾರೆ.
ಅಬ್ದುಲ್ ರಜಾಕ್ ಮತ್ತು ಇಸುರು ಉದಾನ ಮೊದಲ ಬಾರಿಗೆ ಲೆಜೆಂಡ್ಸ್ ಲೀಗ್‌ನಲ್ಲಿ ಆಡಲಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಅಂಕಿಅಂಶಗಳ ಪ್ರಕಾರ, ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ಕಳೆದ ಎರಡು ಋತುಗಳಲ್ಲಿ 318 ರನ್ ಗಳಿಸುವ ಮೂಲಕ 112.71 ಸರಾಸರಿಯೊಂದಿಗೆ ಅತ್ಯಂತ ಯಶಸ್ವಿ ಆಟಗಾರನಾಗಿದ್ದಾರೆ.

"ಕಳೆದ ಋತುವಿನಲ್ಲಿ ನಾವು ಭಾರತದಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ನಾನು ಲೆಜೆಂಡ್ಸ್‌ಗಳ ವಿರುದ್ಧದ ಆಟವನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ ಮತ್ತು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್‌ನಲ್ಲಿ ಆಡಲು ಎದುರು ನೋಡುತ್ತಿದ್ದೇನೆ," ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
"ಲೆಜೆಂಡ್ಸ್ ಲೀಗ್ ನಮ್ಮಂತಹ ಹಿರಿಯ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಿದ್ದು, ಇದು ನಮಗೆ ಹೊಸ ಮಾರ್ಗಗಳನ್ನು ತೆರೆದಿದೆ. ನಾನು ಭಾರತದಲ್ಲಿ ಕಳೆದ ಋತುವನ್ನು ಸಂಪೂರ್ಣವಾಗಿ ಆನಂದಿಸಿದೆ ಮತ್ತು ಕತಾರ್‌ನಲ್ಲಿ ನಡೆಯುವ ಟೂರ್ನಿಗೆ ಸಿದ್ಧನಿದ್ದೇನೆ," ಎಂದು ಪ್ರವೀಣ್ ತಾಂಬೆ ಹೇಳಿದರು.
WIPL 2023: ಮಹಿಳಾ ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
ಇತ್ತೀಚೆಗೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಅವರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ LLC ಮಾಸ್ಟರ್ಸ್‌ನಲ್ಲಿ ಭಾಗವಹಿಸುವುದನ್ನು ದೃಢಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications