ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WIPL 2023: ಮಹಿಳಾ ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ

WIPL 2023: Former Cricketer Mithali Raj Appointed As Gujarat Giants Mentor In Womens IPL

2023ರ 16ನೇ ಆವೃತ್ತಿಯ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮುನ್ನ ಚೊಚ್ಚಲ ಬಾರಿಗೆ ಮಹಿಳಾ ಐಪಿಎಲ್ 2023 ನಡೆಯಲಿದೆ. ಈಗಾಗಲೇ ಐದು ಫ್ರಾಂಚೈಸಿಗಳು ಮಾಲೀಕತ್ವದ ಬಿಡ್ ಖರೀದಿಸಿದ್ದು, ಕೆಲವೇ ದಿನಗಳಲ್ಲಿ ಮಹಿಳಾ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ.

ಮಾರ್ಚ್ 4ರಿಂದ ಮಾರ್ಚ್ 24ರವರೆಗೆ ನಡೆಯಲಿರುವ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಭಾರತೀಯ ಮಹಿಳಾ ಕ್ರಿಕೆಟಿಗರಲ್ಲದೇ, ವಿದೇಶಿ ಆಟಗಾರ್ತಿಯರೂ ತುದಿಗಾಲಿನಲ್ಲಿ ನಿಂತಿದ್ದಾರೆ.

WIPL 2023: ಮಹಿಳಾ IPLನಲ್ಲಿ ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿWIPL 2023: ಮಹಿಳಾ IPLನಲ್ಲಿ ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿ

ಇದೇ ವೇಳೆ ಮೊದಲ ಆವೃತ್ತಿಯ ಮಹಿಳಾ ಐಪಿಎಲ್ 2023ರ ಪಂದ್ಯಾವಳಿಗಾಗಿ ಅದಾನಿ ಗ್ರೂಪ್‌ ಮಾಲೀಕತ್ವದ ಗುಜರಾತ್ ಜೈಂಟ್ಸ್ ತಂಡ ಭಾರಿ ಸಿದ್ಧತೆ ನಡೆಸಿದೆ. ಗುಜರಾತ್ ಜೈಂಟ್ಸ್ ತಂಡವು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ತಂಡದ ಮಾರ್ಗದರ್ಶಕಿ ಮತ್ತು ಸಲಹೆಗಾರರಾಗಿ ನೇಮಕ ಮಾಡಿದೆ.

ಚೊಚ್ಚಲ ಬಾರಿಗೆ ನಡೆಯುತ್ತಿರುವ ಮಹಿಳಾ ಐಪಿಎಲ್‌ನ ಹರಾಜು ಪ್ರಕ್ರಿಯೆ ಮತ್ತು ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ ಮತ್ತು ಅದಕ್ಕಾಗಿ ಐದೂ ತಂಡಗಳು ಸಕಲ ಸಿದ್ಧತೆಗ ನಡೆಸಿವೆ.

ಮಹಿಳಾ ಐಪಿಎಲ್ ಮಹಿಳಾ ಕ್ರಿಕೆಟ್‌ಗೆ ದೊಡ್ಡ ಪ್ರೇರಣೆಯಾಗಿದೆ

ಮಹಿಳಾ ಐಪಿಎಲ್ ಮಹಿಳಾ ಕ್ರಿಕೆಟ್‌ಗೆ ದೊಡ್ಡ ಪ್ರೇರಣೆಯಾಗಿದೆ

ಭಾರತ ಮಹಿಳಾ ರಾಷ್ಟ್ರೀಯ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮಾತನಾಡಿ, "ಮಹಿಳಾ ಐಪಿಎಲ್‌ನ ಉದ್ಘಾಟನಾ ಟೂರ್ನಿಯು ಮಹಿಳಾ ಕ್ರಿಕೆಟ್‌ಗೆ ದೊಡ್ಡ ಪ್ರೇರಣೆಯಾಗಿದೆ ಮತ್ತು ಅದಾನಿ ಗ್ರೂಪ್‌ನ ಪಾಲ್ಗೊಳ್ಳುವಿಕೆ ಕ್ರೀಡೆಗೆ ಭಾರಿ ಉತ್ತೇಜನ ನೀಡಿದೆ," ಎಂದು ಹೇಳಿದ್ದಾರೆ.

"ಭಾರತ ಮತ್ತು ವಿಶ್ವದಲ್ಲಿ ಮಹಿಳಾ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿದೆ ಮತ್ತು ಯುವತಿಯರು ಕ್ರಿಕೆಟ್ ಅನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ಪ್ರೋತ್ಸಾಹ ಸಿಗುತ್ತಿದೆ. ಇದೇ ವೇಳೆ ಕಾರ್ಪೊರೇಟ್‌ಗಳ ಭಾಗವಹಿಸುವಿಕೆಯು ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಅವಕಾಶಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ," ಎಂದು ಮಿಥಾಲಿ ರಾಜ್ ಅಭಿಪ್ರಾಯಪಟ್ಟರು.

ಭಾರತೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್ ನೀಡಿದ ಕೊಡುಗೆಗಳು

ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕವನ್ನು ಗುಜರಾತ್ ಜೈಂಟ್ಸ್ ಮ್ಯಾನೇಜ್‌ಮೆಂಟ್ ದೃಢಪಡಿಸಿದೆ. "ಕಳೆದ ಹಲವು ವರ್ಷಗಳಲ್ಲಿ ಮಿಥಾಲಿ ರಾಜ್ ಅವರ ಸಾಧನೆಗಳು ಮತ್ತು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳು ಅನನ್ಯವಾಗಿವೆ. ಅವರು ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳ ಜೊತೆಗೆ ಮಹಿಳಾ ಕ್ರಿಕೆಟ್ ಅನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಪ್ರಮುಖರಾಗಿದ್ದಾರೆ," ಎಂದು ಅದಾನಿ ಸ್ಪೋರ್ಟ್ಸ್‌ಲೈನ್‌ ನಿರ್ದೇಶಕ ಪ್ರಣವ್ ಅದಾನಿ ತಿಳಿಸಿದ್ದಾರೆ.

"ಮಾರ್ಗದರ್ಶಕಿ ಮತ್ತು ಸಲಹೆಗಾರ್ತಿಯಾಗಿ ಮಿಥಾಲಿ ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವುದರ ಜೊತೆಗೆ ಗುಜರಾತ್‌ನಲ್ಲಿ ತಳಮಟ್ಟದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದ್ದಾರೆ. ಭಾರತದ ಈ ಹಿರಿಯ ಆಟಗಾರ್ತಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಮತ್ತು ನಮ್ಮ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶನ ನೀಡಲು ಅಂತಹ ಕ್ರೀಡಾಪಟುವನ್ನು ಹೊಂದಿರುವ ನಮಗೆ ಸಂತೋಷವಾಗಿದೆ," ಎಂದು ಪ್ರಣವ್ ಅದಾನಿ ಹೇಳಿದರು.

ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿದ್ದ ಮಿಥಾಲಿ ರಾಜ್

ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿದ್ದ ಮಿಥಾಲಿ ರಾಜ್

ಮಿಥಾಲಿ ರಾಜ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿ ಇತಿಹಾಸ ನಿರ್ಮಿಸಿದವರು. ಅವರು ತಮ್ಮ ಟಿ20 ಕ್ರಿಕೆಟ್‌ನ ಅಂಕಿಅಂಶಗಳ ಪಟ್ಟಿಯಲ್ಲಿ 17 ಅರ್ಧ ಶತಕಗಳನ್ನು ಸಿಡಿಸಿದ್ದಾರೆ ಮತ್ತು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.

ಅನುಭವಿ ಕ್ರಿಕೆಟರ್ ಮಿಥಾಲಿ ರಾಜ್ ಅವರು ಭಾರತ ಮಹಿಳಾ ತಂಡವನ್ನು 2017ರ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಸ್ಥಾನದವರೆಗೆ ಮುನ್ನಡೆಸಿದರೆ, ವೆಸ್ಟ್ ಇಂಡೀಸ್‌ನಲ್ಲಿ ನಡೆದ 2018ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ವರೆಗೆ ಮುನ್ನಡೆಸಿದ್ದಾರೆ. ಸೆಮಿಸ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಭಾರತೀಯ ಕ್ರಿಕೆಟರ್ ಆಗಿದ್ದಾರೆ.

Story first published: Tuesday, January 31, 2023, 18:17 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X