For Quick Alerts
ALLOW NOTIFICATIONS  
For Daily Alerts
 

ಇತಿಹಾಸದ ಈ ದಿನ: 20 ವರ್ಷಗಳ ಹಿಂದೆ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

March 23, 2003: 20 Years Ago Indias Defeat Against Australia In World Cup 2003 Final

2003ರ ಮಾರ್ಚ್ 23, ಈ ದಿನವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆತಿರಬಹುದು. ಆದರೆ, ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ನ ಫೈನಲ್‌ನ ಆಘಾತವನ್ನು ಸದಾ ನೆನಪಿಸಿಕೊಳ್ಳುತ್ತಾರೆ.

ಆದರೆ ಇಂದಿನ ಪೀಳಿಗೆಯ ಅನೇಕ ಕ್ರಿಕೆಟ್ ಅಭಿಮಾನಿಗಳಿಗೆ ಬಹುಶಃ ಆ ಪಂದ್ಯವನ್ನು ನೋಡಿರುವುದಿಲ್ಲ. ಆ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಸರಿಯಾಗಿ ಇಂದಿಗೆ 20 ವರ್ಷಗಳು ಕಳೆದಿವೆ. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ರೋಚಕ ಪಂದ್ಯಗಳಲ್ಲಿ 2003ರ ಏಕದಿನ ವಿಶ್ವಕಪ್ ಫೈನಲ್ ಕೂಡ ಒಂದು. ಇಂಗ್ಲೆಂಡ್ ವಿರುದ್ಧ ನ್ಯಾಟ್‌ವೆಸ್ಟ್ 2002ರ ಫೈನಲ್‌ನಲ್ಲಿ ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ ರೋಚಕ ಗೆಲುವು ಸಾಧಿಸಿ, ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿತ್ತು.

ಆ ಗೆಲುವಿನ ಹುಮ್ಮಸ್ಸಿನಲ್ಲಿ ಸೌರವ್ ಗಂಗೂಲಿ ನಾಯಕತ್ವದ ಯುವ ಮತ್ತು ಅನುಭವಿ ಭಾರತೀಯ ತಂಡವು 20 ವರ್ಷಗಳ ನಂತರ 2003ರ ಏಕದಿನ ವಿಶ್ವಕಪ್ ಗೆಲ್ಲಲು ಕಾತರರಾಗಿದ್ದರು.

ಆರಂಭಿಕ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡ ಸೋಲುವ ಭೀತಿ ಇತ್ತು. ಆದರೂ ಹೆಣಗಾಡಿ ಗೆದ್ದು ಪಂದ್ಯಾವಳಿಯನ್ನು ಶುಭಾರಂಭ ಮಾಡಿದ್ದರು. ನಂತರ ಎರಡನೇ ಪಂದ್ಯದಲ್ಲಿ ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

ಮುಂದಿನ ಪಂದ್ಯಗಳಲ್ಲಿ ಭಾರತ ತಂಡದ ಸ್ಟಾರ್ ಸಚಿನ್ ತೆಂಡೂಲ್ಕರ್ ಅವರು ಬ್ಯಾಟಿಂಗ್‌ನಲ್ಲಿ ಅಬ್ಬರಿಸತೊಡಗಿದರು. ಆ ಮೂಲಕ ಭಾರತ ತಂಡ ಪ್ರಭಾವಶಾಲಿ ಮತ್ತು ಸಂಪೂರ್ಣ ಗೆಲುವು ದಾಖಲಿಸಲು ಪ್ರಾರಂಭಿಸಿತು. ಇದೇ ವೇಳೆ ಆಶಿಶ್ ನೆಹ್ರಾ ಮತ್ತು ಜಹೀರ್ ಖಾನ್ ಅವರಂತಹ ಬೌಲರ್‌ಗಳು ಮುಂಚೂಣಿಗೆ ಬಂದರು.

March 23, 2003: 20 Years Ago Indias Defeat Against Australia In World Cup 2003 Final

ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದ ಭಾರತ ತಂಡ ಫೈನಲ್‌ಗೆ ಪ್ರವೇಶಿಸಿತು. ಪ್ರಶಸ್ತಿ ಕಾಳಗದಲ್ಲಿ ಕಾಂಗರೂ ಪಡೆ ವಿರುದ್ಧದ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಬಯಕೆಯಾಗಿತ್ತು.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮಾರ್ಚ್ 23, 2003ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್ 14 ಓವರ್‌ಗಳಲ್ಲಿ 105 ರನ್ ಗಳಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು.

ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಮೊದಲು ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ಔಟ್ ಮಾಡಿದರೆ, ನಂತರ ಮ್ಯಾಥ್ಯೂ ಹೇಡನ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿ ಭಾರತಕ್ಕೆ ಸ್ವಲ್ಪ ಮುನ್ನಡೆ ತಂದುಕೊಟ್ಟರು. ಅನಂತರ ಜೊತೆಯಾದ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಮತ್ತು ಡೇಮಿಯನ್ ಮಾರ್ಟಿನ್ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿ, ವೇಗವಾಗಿ ರನ್ ಕಲೆಹಾಕಿದರು.

IPL 2023: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಮ, ಇನ್ನೇನಿದ್ದರೂ ಐಪಿಎಲ್ ಹಂಗಾಮ; ಫ್ರಾಂಚೈಸಿ ಸೇರಲಿರುವ ಕ್ರಿಕೆಟಿಗರು

ರಿಕಿ ಪಾಂಟಿಂಗ್ ಕೇವಲ 121 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 140 ರನ್ ಗಳಿಸಿದರೆ, ಡೇಮಿಯನ್ ಮಾರ್ಟಿನ್ ಅಜೇಯ 88 ರನ್ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್‌ಗಳಲ್ಲಿ 359 ರನ್‌ಗಳ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು.

360 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಆಘಾತ ಎದುರಾಗಿತ್ತು. ಏಕೆಂದರೆ ಪಂದ್ಯಾವಳಿ ಅತ್ಯಧಿಕ ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ವಿಕೆಟ್ ಪತನವಾಯಿತು. ಅಲ್ಲಿಗೆ ಭಾರತದ ವಿಶ್ವಕಪ್ ಕನಸು ಕೂಡ ಮುರಿದುಬಿದ್ದಿತ್ತು.

ಸಚಿನ್ ತೆಂಡೂಲ್ಕರ್ ಮೊದಲ ಓವರ್‌ನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಗ್ಲೆನ್ ಮೆಕ್‌ಗ್ರಾತ್‌ಗೆ ವಿಕೆಟ್ ನೀಡಿದರು. ನಂತರ ವೀರೇಂದ್ರ ಸೆಹ್ವಾಗ್ (81 ಎಸೆತಗಳಲ್ಲಿ 82 ರನ್) ಮತ್ತು ರಾಹುಲ್ ದ್ರಾವಿಡ್ (57 ಎಸೆತಗಳಲ್ಲಿ 47 ರನ್) ಮಾತ್ರ ಆಸೀಸ್ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು.

ನಾಯಕ ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ಯುವರಾಜ ಸಿಂಗ್ ಸೇರಿದಂತೆ ಉಳಿದ ಬ್ಯಾಟರ್‌ಗಳನ್ನು ಆಸೀಸ್ ಬೌಲರ್‌ಗಳು ಬೇಗನೆ ಪೆವಿಲಿಯನ್ ದಾರಿ ತೋರಿಸಿದರು. ಅಂತಿಮವಾಗಿ ಭಾರತ ತಂಡ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು.

ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡ 125 ರನ್‌ಗಳ ಬೃಹತ್ ಜಯ ಸಾಧಿಸಿ 1999ರ ನಂತರ ಮತ್ತೊಮ್ಮೆ ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ನಂತರ 2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿತು.

Story first published: Thursday, March 23, 2023, 15:11 [IST]
Other articles published on Mar 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+