ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಗಾಯಾಳು ಕ್ಲಾರ್ಕ್ ಸೇರ್ಪಡೆ
ಸಿಡ್ನಿ, ಜ.11: ಗಾಯಾಳುವಾಗಿ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರನಡೆದಿದ್ದ ಮೈಕಲ್ ಕ್ಲಾರ್ಕ್ ರನ್ನು ಮುಂಬರುವ ವಿಶ್ವಕಪ್ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕ್ಲಾರ್ಕ್ ಅವರಿಗೆ ತಮ್ಮ ಫಿಟ್ನೆಸ್ ಸಾಬೀತು ಪಡಿಸಲು ಕಾಲಾವಕಾಶ ನೀಡಲಾಗಿದೆ.
ಫೆ.14ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಫೆ.21ರಂದು ಎರಡನೇ ಪಂದ್ಯ ಬಾಂಗ್ಲಾದೇಶ ವಿರುದ್ಧ ಆಡಲಿದೆ. [ವಿಶ್ವಕಪ್ 2015: ಟೀಂ ಇಂಡಿಯಾ ಪೂರ್ಣ ಗೈಡ್]
ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಕ್ಲಾರ್ಕ್ ಅವರು ದೈಹಿಕ ಸಾಮರ್ಥ್ಯವನ್ನು ಸಾಬೀತು ಪಡಿಸಿದರೆ 15 ಮಂದಿ ಸದಸ್ಯರ ತಂಡದಲ್ಲಿ ಉಳಿದು ಕೊಳ್ಳಬಹುದಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ರಾಡ್ ಮಾರ್ಷ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಕಲ್ ಕ್ಲಾರ್ಕ್ ಅನುಪಸ್ಥಿತಿಯಲ್ಲಿ ಉಪ ನಾಯಕ ಜಾರ್ಜ್ ಬೈಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸ್ಟೀವ್ ಸ್ಮಿತ್ ಕೂಡಾ ನಾಯಕನ ರೇಸಿನಲ್ಲಿದ್ದಾರೆ. [ಟೀಂ ಇಂಡಿಯಾ 15 ಸದಸ್ಯರ ತಂಡ ಪ್ರಕಟ]

ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಆಯ್ಕೆ ಸಮಿತಿ ಕಡೆಗಣಿಸಿದೆ ಬದಲಿಗೆ ಡೋಹಾರ್ಟಿ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಲಾಗಿದೆ. ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ರ ಮೇಲೆ ಹೆಚ್ಚಿನ ಹೊಣೆ ಹೊರಿಸಲು ಆಯ್ಕೆ ಸಮಿತಿ ತೀರ್ಮಾನಿಸಿದೆ.
ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ಜೋಶ್ ಹಾಜೇಲ್ ವುಡ್ ಜೊತೆಗೆ 21 ವರ್ಷ ವಯಸ್ಸಿನ ಪ್ಯಾಟ್ ಕಮಿನ್ಸ್ ಅವರು ವೇಗಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ. ರಿಯಾನ್ ಹ್ಯಾರೀಸ್ ಅವರು ಆಯ್ಕೆ ಸಮಿತಿ ಕೃಪೆ ಗಿಟ್ಟಿಸುವುದಲ್ಲಿ ವಿಫಲರಾಗಿದ್ದಾರೆ. [ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]
ವಿಶ್ವಕಪ್ ಆಡಲಿರುವ 15 ಸದಸ್ಯರ ಆಸ್ಟ್ರೇಲಿಯಾ ತಂಡ ಇಂತಿದೆ:
ಮೈಕಲ್ ಕ್ಲಾರ್ಕ್(ನಾಯಕ), ಜಾರ್ಜ್ ಬೈಲಿ, ಪ್ಯಾಟ್ ಕಮಿನ್ಸ್, ಕ್ಸೇವಿಯರ್ ಡೋಹಾರ್ಟಿ, ಜೇಮ್ಸ್ ಫಾಲ್ಕನರ್, ಆರೋನ್ ಫಿಂಚ್, ಬ್ರಾಡ್ ಹಡ್ಡೀನ್, ಜೋಶ್ ಹಜೇಲ್ ವುಡ್, ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್.
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications