For Quick Alerts
ALLOW NOTIFICATIONS  
For Daily Alerts
 

ಈ ಮಾಜಿ ನಾಯಕ ಪಾಕಿಸ್ತಾನ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಆಯ್ಕೆಗಾರ

ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸವನ್ನು ಪೂರ್ಣಗೊಳಿಸಿದ ನಂತರ, ಪಾಕಿಸ್ತಾನ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅವರು ಪುರುಷರ ಹಿರಿಯ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಆಯ್ಕೆದಾರರ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ.

ಪ್ರಸ್ತುತ ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅವರು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ನಿರ್ವಹಣಾ ಸಮಿತಿಯ (ಸಿಎಂಸಿ) ಹೊಸ ಅಧ್ಯಕ್ಷರಾಗಲು ತುದಿಗಾಲಲ್ಲಿದ್ದಾರೆ.

mohammad-hafeez

ಪ್ರಸ್ತುತ ಸಿಎಂಸಿ ಮುಖ್ಯಸ್ಥರಾದ ಝಕಾ ಅಶ್ರಫ್ ಅವರ ನಿಕಟತೆ ಮತ್ತು ಕೆಲವು ದಿನಗಳ ಹಿಂದೆ 2023ರ ಏಷ್ಯಾ ಕಪ್ ಟ್ರೋಫಿ ಅನಾವರಣ ಸಮಾರಂಭದಲ್ಲಿ ಮೊಹಮ್ಮದ್ ಹಫೀಜ್ ಉಪಸ್ಥಿತಿಯು ಸಿಎಂಸಿ ಹೊಸ ಅಧ್ಯಕ್ಷ ಪಾತ್ರದಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಹಿಂದಿನ ಕ್ರಿಕೆಟ್ ನಿರ್ವಹಣಾ ಸಮಿತಿಯನ್ನು ಜೂನ್‌ನಲ್ಲಿ ವಿಸರ್ಜಿಸಿದಾಗಿನಿಂದ ಮುಖ್ಯ ಆಯ್ಕೆಗಾರರ ಸ್ಥಾನ ಖಾಲಿಯಾಗಿದೆ. ಝಾಕಾ ಅಶ್ರಫ್ ಅವರು ಇತ್ತೀಚೆಗೆ ಮಾಜಿ ನಾಯಕ ರಶೀದ್ ಲತೀಫ್ ಮತ್ತು ಮೊಹಮ್ಮದ್ ಹಫೀಜ್ ಅವರೊಂದಿಗೆ ಸಮರ್ಥವಾಗಿ ಪಾತ್ರವನ್ನು ವಹಿಸುವ ಕುರಿತು ಚರ್ಚೆ ನಡೆಸಿದರು.

ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಶೀದ್ ಲತೀಫ್ ನಿರಾಸಕ್ತಿ ತೋರಿಸಿದರೆ, ಮೊಹಮ್ಮದ್ ಹಫೀಜ್ ಆ ಸ್ಥಾನವನ್ನು ವಹಿಸಿಕೊಳ್ಳುವ ಇಚ್ಛೆ ಮತ್ತು ಲಭ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿ ವಿಷಯಗಳಲ್ಲಿ ಕೆಲಸ ಮಾಡಲು ರಶೀದ್ ಲತೀಫ್ ಹೆಚ್ಚು ಆಸಕ್ತಿ ಹೊಂದಿದ್ದರು. ಇನ್ನು ಕಳೆದ ವರ್ಷ ನಿವೃತ್ತಿಯಾಗುವ ಮೊದಲು ಪಾಕಿಸ್ತಾನ ತಂಡಕ್ಕಾಗಿ 55 ಟೆಸ್ಟ್, 218 ಏಕದಿನ ಮತ್ತು 119 ಟಿ20 ಪಂದ್ಯಗಗಳನ್ನು ಆಡಿರುವ ಮೊಹಮ್ಮದ್ ಹಫೀಜ್, ಮುಖ್ಯ ಆಯ್ಕೆಗಾರನಾಗಿ ಕೆಲಸ ಮಾಡುವ ಸವಾಲನ್ನು ತಾನು ಇಷ್ಟಪಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಜಮ್ ಸೇಥಿ ನೇತೃತ್ವದ ಹಿಂದಿನ ಕ್ರಿಕೆಟ್ ನಿರ್ವಹಣಾ ಸಮಿತಿಯ (ಸಿಎಂಸಿ) ಅವಧಿಯಲ್ಲಿ ಹರೂನ್ ರಶೀದ್ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಈ ಸಮಿತಿಯಲ್ಲಿ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಮತ್ತು ಮುಖ್ಯ ತರಬೇತುದಾರ ಗ್ರಾಂಟ್ ಬ್ರಾಡ್‌ಬರ್ನ್ ಕೂಡ ಇದ್ದರು.

ಆದರೆ, ಹಿಂದಿನ ಸಿಎಂಸಿಯನ್ನು ವಿಸರ್ಜಿಸಲ್ಪಟ್ಟಿರುವುದರಿಂದ ತಾಂತ್ರಿಕವಾಗಿ ಹರೂನ್ ರಶೀದ್ ಅವರು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಉಳಿದಿಲ್ಲ.

ಮತ್ತೊಂದೆಡೆ, ಮೊಹಮ್ಮದ್ ಹಫೀಜ್ ತಮ್ಮ ಪ್ರಭಾವಿ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಹೆಮ್ಮೆಪಡುತ್ತಾರೆ. ಮೊಹಮ್ಮದ್ ಹಫೀಜ್ ಪಾಕಿಸ್ತಾನ ತಂಡದ ಪರ ಆಡಿರುವ 55 ಟೆಸ್ಟ್, 218 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 119 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 3652, 6614, ಮತ್ತು 2514 ರನ್‌ಗಳನ್ನು ಗಳಿಸಿದ್ದಾರೆ.

ಅಲ್ಲದೆ, ಮೊಹಮ್ಮದ್ ಹಫೀಜ್ ಅವರು ಅದ್ಭುತ ಆಲ್‌ರೌಂಡರ್ ಎಂದು ಸಾಬೀತುಪಡಿಸಿದ್ದು, ಟೆಸ್ಟ್‌ ಪಂದ್ಯಗಳಲ್ಲಿ 53 ವಿಕೆಟ್‌ಗಳು, ಏಕದಿನ ಪಂದ್ಯಗಳಲ್ಲಿ 139 ವಿಕೆಟ್‌ ಮತ್ತು ಟಿ20 ಪಂದ್ಯಗಳಲ್ಲಿ 61 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Story first published: Friday, July 21, 2023, 19:08 [IST]
Other articles published on Jul 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+