For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ದಾಖಲೆ ಮಾಡಿದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್

Mohammad rizwan

ಮುಂಬರುವ ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನದ ಓಪನಿಂಗ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಈ ಬ್ಯಾಟ್ಸ್‌ಮನ್, ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರನ್‌ಗಳ ಮಳೆಯನ್ನೇ ಸುರಿಸಿದ್ದಾರೆ. ಐತಿಹಾಸಿಕ ಏಳು ಪಂದ್ಯಗಳ ಸರಣಿ ಮುಗಿಯುವ ಮುನ್ನವೇ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಳು ಪಂದ್ಯಗಳ ಸರಣಿಯ ಮೊದಲ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಮೊಹಮ್ಮದ್ ರಿಜ್ವಾನ್ ಅರ್ಧಶತಕಗಳನ್ನು ಗಳಿಸಿದರು. ಮೊದಲ ಪಂದ್ಯದಲ್ಲಿ 68 ರನ್ ಗಳಿಸಿದ್ದ ಅವರು ಎರಡನೇ ಪಂದ್ಯದಲ್ಲಿ ಅಜೇಯ 88 ರನ್ ಗಳಿಸಿದ್ದರು. ಅವರು ಮೂರನೇ ಪಂದ್ಯದಲ್ಲಿ 8 ರನ್ ಗಳಿಸಿದರು, ನಾಲ್ಕನೇ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ 88 ರನ್ ಬಂದವು. ಅವರು ಕಳೆದ ಪಂದ್ಯದಲ್ಲಿ ಅಂದರೆ ಐದನೇ ಟಿ20 ಪಂದ್ಯದಲ್ಲಿ 63 ರನ್ ಗಳಿಸಿದ್ದಾರೆ.

ಮೊಹಮ್ಮದ್ ರಿಜ್ವಾನ್ ಇದುವರೆಗೆ ಐದು ಪಂದ್ಯಗಳಲ್ಲಿ 315 ರನ್ ಕಲೆಹಾಕಿದ್ದಾರೆ. ಈ ಮೂಲಕ ರಿಜ್ವಾನ್ ದ್ವಿಪಕ್ಷೀಯ ಸರಣಿಯಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ರಿಜ್ವಾನ್ ಸರಣಿಯಲ್ಲಿ ಅತ್ಯಧಿಕ ರನ್ ದಾಖಲಿಸುವ ಹಾದಿಯಲ್ಲಿ ಸರ್ಬಿಯಾದ ಲೆಸ್ಲಿ ಡನ್‌ಬಾರ್ ಅವರನ್ನು ಹಿಂದಿಕ್ಕಿದರು. ಡನ್ಬಾರ್ ಬಲ್ಗೇರಿಯಾ ತಂಡದ ವಿರುದ್ಧ 4 ಇನ್ನಿಂಗ್ಸ್‌ಗಳಲ್ಲಿ 284 ರನ್ ಗಳಿಸಿದರು.

ಇದಕ್ಕೂ ಮುನ್ನ ಈ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 5 ಇನ್ನಿಂಗ್ಸ್‌ಗಳಲ್ಲಿ 255 ರನ್ ಗಳಿಸಿದ್ದರು. 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 210 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇವೆ. ಅವರು ಈ ರನ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಸ್

315 * - ಮೊಹಮ್ಮದ್ ರಿಜ್ವಾನ್ (ಐದು ಇನ್ನಿಂಗ್ಸ್)
284 - ಲೆಸ್ಲಿ ಡನ್ಬಾರ್ (ನಾಲ್ಕು ಇನ್ನಿಂಗ್ಸ್)
255 - ಕ್ವಿಂಟನ್ ಡಿ ಕಾಕ್ (ಐದು ಇನ್ನಿಂಗ್ಸ್)
234 - ಪಾಲ್ ಸ್ಟಿರ್ಲಿಂಗ್ (ಐದು ಇನ್ನಿಂಗ್ಸ್)
233 - ಫ್ರಾನ್ಸಿಸ್ಕೊ ​​ಕುವಾನಾ (ಏಳು ಇನ್ನಿಂಗ್ಸ್)
231 - ವಿರಾಟ್ ಕೊಹ್ಲಿ (ಐದು ಇನ್ನಿಂಗ್ಸ್)
224 - ಕೆಎಲ್ ರಾಹುಲ್ (ಐದು ಇನ್ನಿಂಗ್ಸ್)

Story first published: Thursday, September 29, 2022, 19:49 [IST]
Other articles published on Sep 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+