ಟಿ20 ವಿಶ್ವಕಪ್: ಬೆಂಗಳೂರಿನಿಂದ ಬ್ರಿಸ್ಬೇನ್‌ಗೆ ಹಾರಿದ ಶಮಿ, ಬುಮ್ರಾ ಸ್ಥಾನಕ್ಕೆ ಆಯ್ಕೆ ಸಾಧ್ಯತೆ!

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ 2022 ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಶಮಿ ಆಸ್ಟ್ರೇಲಿಯಕ್ಕೆ ತೆರಳುವ ಕುರಿತು ಹಲವು ದಿನಗಳಿಂದ ಸುದ್ದಿ ಗರಿಗೆದರಿದ್ದು, ಶಮಿ ಫಿಟ್ನೆಸ್‌ಗಾಗಿ ಕಾಯುತ್ತಿದ್ದರು. ಅಲ್ಲದೆ, ಬುಮ್ರಾಗೆ ಬದಲಿ ಆಟಗಾರನಾಗಿ ಶಮಿ ಹೆಸರು ಮುಂಚೂಣಿಯಲ್ಲಿತ್ತು. ಬುಮ್ರಾ ಅವರ ಬದಲಿ ಸ್ಥಾನವನ್ನು ಬಿಸಿಸಿಐ ಇನ್ನೂ ಘೋಷಿಸದಿದ್ದರೂ, ಶಮಿ ಬಹುತೇಕ ಬುಮ್ರಾ ಅವರ ಸ್ಥಾನಕ್ಕೆ ಆಯ್ಕೆಯಾಗಬಹುದು ಎಂದು ನಂಬಲಾಗಿದೆ.
ಎನ್‌ಸಿಎನಲ್ಲಿ ಅಭ್ಯಾಸ ಮಾಡುತ್ತಿದ್ದ ಮೊಹಮ್ಮದ್ ಶಮಿ ಬುಧವಾರ ಸಂಜೆ ಬೆಂಗಳೂರಿನಿಂದ ಬ್ರಿಸ್ಬೇನ್‌ಗೆ ತೆರಳಿದ್ದಾರೆ. ಸ್ವತಃ ಮೊಹಮ್ಮದ್ ಶಮಿ ಅವರು ವಿಮಾನ ನಿಲ್ದಾಣದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿರುವ ಶಮಿ, "ಈಗ ಟಿ20 ವಿಶ್ವಕಪ್‌ಗೆ ಹಾರುವ ಸಮಯ...." ಎಂದು ಶೀರ್ಷಿಕೆ ಬರೆದಿದ್ದಾರೆ. ಟಿ20 ವಿಶ್ವಕಪ್‌ಗೆ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಮೊಹಮ್ಮದ್ ಶಮಿ ಆಯ್ಕೆಯಾಗಿದ್ದಾರೆ . ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಶಮಿ ಹೊರತಾಗಿ, ದೀಪಕ್ ಚಹಾರ್ ಅವರ ಹೆಸರೂ ಇತ್ತು, ಆದರೆ ದೀಪಕ್ ಕೂಡ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ.
ಮೊಹಮ್ಮದ್ ಶಮಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಸಹ ಆಯ್ಕೆ ಮಾಡಲಾಗಿತ್ತು. ಆದ್ರೆ ಸರಣಿಯ ಪ್ರಾರಂಭದ ಮೊದಲು, ಶಮಿ ಕೊರೋನಾ ಪಾಸಿಟಿವ್ ಆದರು, ಇದರಿಂದಾಗಿ ಅವರು ತಂಡದಿಂದ ಹೊರಗುಳಿಯಬೇಕಾಯಿತು. ಇದರ ನಂತರ, ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು, ಆದರೆ ಶಮಿ ಕೊರೊನಾವನ್ನ ಮಣಿಸಿ ನೆಗೆಟಿವ್ ವರದಿ ಸಲ್ಲಿಸಿದ್ರು. ಅದರ ನಂತರ, ಬೆಂಗಳೂರಿನ ಎನ್‌ಸಿಎನಲ್ಲಿ ಫಿಟ್ನೆಸ್ ಪಡೆದ ನಂತರ, ಟೀಮ್ ಇಂಡಿಯಾವನ್ನು ಸೇರಲು ಶಮಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications