ಅಫ್ಘನ್ ವಿರುದ್ಧದ ಟೆಸ್ಟ್ : ಯೋ ಯೋ ಟೆಸ್ಟ್ ಫೇಲಾದ ಶಮಿ ಔಟ್, ಸೈನಿ ಇನ್

ಬೆಂಗಳೂರು, ಜೂನ್ 12: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರು ದೈಹಿಕ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ.
ಆಟಗಾರರ ದೈಹಿಕ ಕ್ಷಮತೆ ಅರಿಯಲು ನಡೆಸಲಾಗುವ ಪರೀಕ್ಷೆಗಳ ಪೈಕಿ ಒಂದೆನಿಸಿರುವ ಯೋ ಯೋ ಟೆಸ್ಟ್ ನಲ್ಲಿ ವೇಗಿ ಮೊಹಮ್ಮದ್ ಶಮಿ ಫೇಲ್ ಆಗಿದ್ದಾರೆ. ಹೀಗಾಗಿ, ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಗಿದೆ.
ಶಮಿ ಅಲ್ಲದೆ, ಇಂಡಿಯಾ 'ಎ' ತಂಡಕ್ಕೆ ಆಯ್ಕೆಯಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಕೂಡಾ ಯೋ ಯೋ ಟೆಸ್ಟ್ ಫೇಲ್ ಆಗಿ ತಂಡದಿಂದ ಹೊರ ಬಿದ್ದಿದ್ದಾರೆ.
ಅಫ್ಘನ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 14ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯ ಶಮಿ ಬದಲಿಗೆ ದೆಹಲಿಯ ಯುವ ವೇಗದ ಬೌಲರ್ ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಬಲಗೈ ವೇಗದ ಬೌಲರ್ ಸೈನಿ ಅವರು ಕಳೆದ ರಣಜಿ ಋತುವಿನಲ್ಲಿ ದೆಹಲಿ ಪರ 8 ಪಂದ್ಯಗಳನ್ನಾಡಿ 34 ವಿಕೆಟ್ ಗಳಿಸಿದ್ದರು.
ಸಂಜು ಸಾಮ್ಸನ್ ಬದಲಿಗೆ ಇಶಾನ್ ಕಿಶಾನ್ ಅವರು ಇಂಡಿಯಾ 'ಎ' ತಂಡ ಸೇರಲಿದ್ದಾರೆ. ಇಂಗ್ಲೆಂಡ್ ಲಯನ್ಸ್ ಹಾಗೂ ವೆಸ್ಟ್ ಇಂಡೀಸ್ 'ಎ' ವಿರುದ್ಧ ಏಕದಿನ ಸರಣಿ ನಿಗದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications