For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ಸಿರಾಜ್ ಬೌಲಿಂಗ್ ಸ್ಪೆಲ್ ನನಗಿಷ್ಟ, ಆತ ಪ್ರತಿ ಓವರ್‌ನಲ್ಲೂ ಹೊಸದನ್ನು ಪರಿಚಯಿಸುತ್ತಾನೆ: ಸಚಿನ್ ತೆಂಡೂಲ್ಕರ್

Mohamad siraj

ಟೀಂ ಇಂಡಿಯಾ ಬ್ಯಾಟಿಂಗ್ ದಿಗ್ಗಜ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಕುರಿತು ಸಾಕಷ್ಟು ಹೊಗಳಿಕೆಯ ಮಾತುಗಳನ್ನಾಡಿದ್ದು, ಸಿರಾಜ್ ಯಾವಾಗಲೂ ಹೊಸತನದೊಂದಿಗೆ ಕಣಕ್ಕಿಳಿಯುತ್ತಾರೆ ಎಂದು ಸಚಿನ್ ಹೇಳಿದ್ದಾರೆ.

27 ವರ್ಷದ ಮೊಹಮ್ಮದ್ ಸಿರಾಜ್ ಕ್ರಿಕೆಟ್ ಜರ್ನಿಯು ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಿರಾಜ್ ಟೀಂ್ ಇಂಡಿಯಾ ಟೆಸ್ಟ್ ತಂಡದಲ್ಲಿ ರೆಗ್ಯುಲರ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕ ಕೊಹ್ಲಿ ಯಾವಾಗಲೂ ಬೌಲಿಂಗ್ ನೀಡಿದಾಗ ಸಿರಾಜ್ ಅತ್ಯಂತ ಅಚ್ಚುಕಟ್ಟಾಗಿ ಬೌಲಿಂಗ್ ಮಾಡುವುದರ ಜೊತೆಗೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಯುವ ವೇಗಿ ಕುರಿತು ಸಾಕಷ್ಟು ಇಂಪ್ರೆಸ್ ಆಗಿರುವ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಸಿರಾಜ್‌ರ ಎನರ್ಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಅವರು ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದಾಗ, ಅವರು ತಮ್ಮ ಮೊದಲ ಪಂದ್ಯವನ್ನು ಆಡಿದಂತೆ ಕಾಣಿಸಲಿಲ್ಲ. ಅದು ಅವರು ತೋರಿದ ಪ್ರಬುದ್ಧತೆ. ಅವನು ತನ್ನ ಸ್ಪೆಲ್‌ಗಳನ್ನ ತುಂಬಾ ಚೆನ್ನಾಗಿ ಮಾಡುತ್ತಾರೆ ಮತ್ತು ಅದರ ಮೇಲೆ ಅವನು ಹಿಂತಿರುಗಿ ನೋಡುವುದಿಲ್ಲ. ಆತನನ್ನು ಪ್ರತಿ ಓವರ್‌ನಲ್ಲಿ ನೋಡಿದಾಗಲೆಲ್ಲಾ ಆತ ಹೊಸದನ್ನು ಪರಿಚಯಿಸುತ್ತಾನೆ, "ಎಂದು ತೆಂಡೂಲ್ಕರ್ 'ಬ್ಯಾಕ್ ಸ್ಟೇಜ್ ವಿತ್ ಬೋರಿಯಾ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಆತನ ಬಾಡಿ ಲಾಂಗ್ವೆಜ್ ಪಾಸಿಟಿವ್ ಆಗಿದೆ

ಆತನ ಬಾಡಿ ಲಾಂಗ್ವೆಜ್ ಪಾಸಿಟಿವ್ ಆಗಿದೆ

ಮೊಹಮ್ಮದ್ ಸಿರಾಜ್ ತುಂಬಾ ಪಾಸಿಟಿವ್ ಮೈಂಡ್‌ಸೆಟ್ ಹೊಂದಿದ್ದು, ಆತ ತಂಡದ ಸಹ ಆಟಗಾರರನ್ನು ಹುರಿದುಂಬಿಸುತ್ತಾನೆ. ಟೆಸ್ಟ್ ಕ್ರಿಕೆಟ್‌ನಂತಹ ಕಠಿಣ ಸ್ವರೂಪದ ಫಾರ್ಮಟ್‌ನಲ್ಲಿ ಸಿರಾಜ್‌ನಂತಹ ಆಟಗಾರ ತಂಡದಲ್ಲಿದ್ದಾರೆ, ತಂಡಕ್ಕೆ ಎನರ್ಜಿ ತುಂಬುವಲ್ಲಿ ಮತ್ತು ಗೆಲುವಿನತ್ತ ಕೊಂಡೊಯ್ಯುವ ಮನಸ್ಥಿತಿಯನ್ನ ತಂಡದಲ್ಲಿ ತರುತ್ತಾನೆ ಎಂದು ಸಚಿನ್ ಸಿರಾಜ್‌ರನ್ನ ಹೊಗಳಿದ್ದಾರೆ.

"ಅವನ ಕಾಲುಗಳಲ್ಲಿ ಹೊಸ ಚೈತನ್ಯದ ವಸಂತವಿದ್ದು, ಅದನ್ನು ಮತ್ತೆ ಮತ್ತೆ ನಾನು ನೋಡಲು ಇಷ್ಟಪಡುತ್ತೇನೆ. ಅವರ ರನ್ ಅಪ್ ಸಾಕಷ್ಟು ಶಕ್ತಿಯುತದಿಂದ ಕೂಡಿದ್ದನ್ನು ಸಹ ನಾವು ಕಾಣಬಹುದು. ಏಕೆಂದರೆ ಸಿರಾಜ್ ಅಂತಹ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ, ಅವರು ಮೊದಲ ಓವರ್‌ ಮಾಡುತ್ತಿದ್ದಾರ ಅಥವಾ ಕೊನೆಯ ಓವರ್ ಎಸೆಯುತ್ತಿದ್ದಾರ ಎಂದು ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ. ಅವರ ಬಾಡಿ ಲಾಂಗ್ವೆಜ್ ಯಾವಾಗಲೂ ತುಂಬಾ ಧನಾತ್ಮಕವಾಗಿರುತ್ತದೆ. ಅದು ನನಗೆ ಇಷ್ಟವಾದದ್ದು. ಅವರು ವೇಗವಾಗಿ ಕಲಿಯುವವರಾಗಿದ್ದಾರೆ, "ಎಂದು ತೆಂಡೂಲ್ಕರ್ ಉಲ್ಲೇಖಿಸಿದ್ದಾರೆ.

ಡಿಸೆಂಬರ್ 26ರಂದು ಸೆಂಚುರಿಯನ್ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಮೊಹಮ್ಮದ್ ಸಿರಾಜ್ ಎದುರು ನೋಡುತ್ತಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹಾಗೂ ಭಾರತದ ಸ್ಕ್ವಾಡ್ ಈ ಕೆಳಗಿದೆ.

ಭಾರತ v/s ದಕ್ಷಿಣ ಆಫ್ರಿಕಾ: ಹೆಡ್‌ To ಹೆಡ್ ರೆಕಾರ್ಡ್‌, ಆಟಗಾರರ ಪ್ರಮುಖ ದಾಖಲೆಗಳು ಇಲ್ಲಿವೆ

ಸಚಿನ್ ಹೊಗಳಿಕೆಗೆ ಧನ್ಯವಾದ ತಿಳಿಸಿದ ಸಿರಾಜ್

ಮೊಹಮ್ಮದ್ ಸಿರಾಜ್ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿಕೆಗೆ ಮೊಹಮ್ಮದ್ ಸಿರಾಜ್ ಧನ್ಯವಾದ ತಿಳಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಿಂದ ಟ್ವೀಟ್ ಮಾಡುವ ಮೂಲಕ ನಿಮ್ಮ ಮಾತುಗಳು ನನಗೆ ದೊಡ್ಡ ಪ್ರೇರಣೆಯಾಗಿದೆ ಎಂದಿದ್ದಾರೆ.

'' ಧನ್ಯವಾದಗಳು sachin_rt ಸರ್ . ನಿಮ್ಮಿಂದ ಈ ಮಾತು ಬರುತ್ತಿರುವುದು ನನಗೆ ದೊಡ್ಡ ಪ್ರೇರಣೆಯಾಗಿದೆ. ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಕೈಲಾದಷ್ಟು ಮಾಡುತ್ತೇನೆ. ಚೆನ್ನಾಗಿ ಇರಿ ಸರ್'' ಎಂದು ಸಿರಾಜ್ ಟ್ವೀಟ್ ಮಾಡಿದ್ದಾರೆ.

ಟೆಸ್ಟ್ ಸರಣಿಗೂ ಮುನ್ನ ಭರ್ಜರಿ ಡಿನ್ನರ್: ಆಟಗಾರರಿಗೆ ಸಾಥ್ ನೀಡಿದ ಕೋಚ್ ರಾಹುಲ್ ದ್ರಾವಿಡ್

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ

ಮೊದಲ ಟೆಸ್ಟ್‌: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್‌, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್‌ ಟೌನ್

Deepak Chahar ಟೆಸ್ಟ್ ಪಂದ್ಯ ಆಗದಿದ್ದರೂ ಅಭ್ಯಾಸದಲ್ಲಿ ತೊಡಗಿದ್ದು ಹೀಗೆ | Oneindia Kannada
ಟೀಂ ಇಂಡಿಯಾ ಟೆಸ್ಟ್‌ ಸ್ಕ್ವಾಡ್‌

ಟೀಂ ಇಂಡಿಯಾ ಟೆಸ್ಟ್‌ ಸ್ಕ್ವಾಡ್‌

ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ

Story first published: Thursday, December 23, 2021, 9:56 [IST]
Other articles published on Dec 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+