ಹೈದ್ರಾಬಾದ್ ವಿರುದ್ಧ ಕೊನೆಯ 2 ಓವರ್‌ನಲ್ಲಿ ಧೋನಿ ರನ್‌ಗಳಿಸಲು ಪರದಾಡಿದ್ದು ಏಕೆ?

ಸನ್‌ರೈಸರ್ಸ್ ಹೈದ್ರಾಬಾದ್ ನೀಡಿದ 165 ರನ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಗುರಿ ಬೆನ್ನತ್ತಲಾಗದೇ 157 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಈ ಮೂಲಕ ಐಪಿಎಲ್ 13 ನೇ ಸೀಸನ್‌ನಲ್ಲಿ ಸತತ ಮೂರನೇ ಪಂದ್ಯದಲ್ಲಿ ಸೋಲನ್ನು ಕಂಡಿತು.
ರವೀಂದ್ರ ಜಡೇಜಾ ಅವರೊಂದಿಗೆ ತಮ್ಮ ತಂಡವನ್ನ ನಾಯಕ ಧೋನಿ ಗೆಲುವಿನ ದಡ ಮುಟ್ಟಿಸ್ತಾರಾ ಎಂದೇ ಅಭಿಮಾನಿಗಳು ಕಾದಿದ್ದರು. ಆದರೆ ಧೋನಿ ಟೂರ್ನಿಯಲ್ಲಿ ಎರಡನೇ ಬಾರಿಗೆ ಕ್ರೀಸ್‌ನಲ್ಲಿದ್ರೂ ತಂಡವನ್ನ ಗೆಲ್ಲಿಸಲು ಸಾಧ್ಯವಾಗ್ಲಿಲ್ಲ. ಪರಿಣಾಮ ಪಂದ್ಯವನ್ನ ಏಳು ರನ್‌ಗಳಿಂದ ಕಳೆದುಕೊಂಡಿತು.
36 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗಿ ಉಳಿದ ಧೋನಿ ವಿಶ್ವ ಕ್ರಿಕೆಟ್‌ನ ಗ್ರೇಟ್ ಫಿನಿಷರ್ ಆದರೆ ಯುಎಇನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. 39 ವರ್ಷ ವಯಸ್ಸಿನ ಮಾಹಿ ಕೊನೆಯ ಎರಡು ಓವರ್‌ಗಳಲ್ಲಂತೂ ರನ್ ಗಳಿಸಲು ಭಾರೀ ಕಷ್ಟಪಟ್ಟಿದ್ದನ್ನು ನಾವು ಕಾಣಬಹುದು. ಪಂದ್ಯ ಮುಗಿದ ಬಳಿಕ ಸ್ವತಃ ಧೋನಿಯೇ ಈ ಕುರಿತು ವಿವರಿಸಿದ್ದಾರೆ.
ಪಂದ್ಯದ ನಂತರ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಗಂಟಲು ಒಣಗಿದೆ, ಆದ್ದರಿಂದ ಅವರು ಕೆಮ್ಮಲು ಪ್ರಾರಂಭಿಸಿದರು.
ನಾನು ಸಾಧ್ಯವಾದಷ್ಟು ಸಮಯವನ್ನು ಪಡೆಯಲು ಪ್ರಯತ್ನಿಸಿದೆ. ಆದರೆ ಗಂಟಲು ಸಾಕಷ್ಟು ಒಣಗಿದ ಕಾರಣ ಕೆಮ್ಮಲು ಕೆಮ್ಮಲು ಪ್ರಾರಂಭಿಸಿದೆ. ಅಲ್ಲದೆ ವಾತಾವರಣವು ತನ್ನನ್ನು ಸಾಕಷ್ಟು ಸುಸ್ತುಗೊಳಿಸಿತು ಎಂದು ಹೇಳಿದ್ದಾರೆ.
ಮಾಹಿ ಕ್ರೀಸ್‌ನಲ್ಲಿ ಇರುವವರೆಗೂ ತಂಡಕ್ಕೆ ಗೆಲುವು ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು, ಆದರೆ ಧೋನಿ ಚೆಂಡನ್ನು ಟೈಮಿಂಗ್ ಮಾಡುವಾಗ ತುಂಬಾ ಕಠಿಣವಾಗಿ ಹೊಡೆಯಲು ಪ್ರಯತ್ನಿಸಿ ವಿಫಲಗೊಂಡರು.
ಆಡಿರುವ ನಾಲ್ಕು ಪಂದ್ಯಗಳಲ್ಲಿ ಈಗಾಗಲೇ ಮೂರು ಪಂದ್ಯ ಸೋತಿರುವ ಸಿಎಸ್‌ಕೆ ಪಾಯಿಂಟ್ಸ್ ಟೇಬಲ್ ಕೆಳಭಾಗದಲ್ಲಿದೆ. ಬಹುಶಃ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಈ ರೀತಿ ಕಾಣಿಸಿಕೊಂಡಿದ್ದು ಬಹಳ ಅಪರೂಪದಲ್ಲಿ ಅಪರೂಪ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications