ಸೂಪರ್ ಹೀರೋ ಆಗಿ ಕಾಣಿಸಿಕೊಂಡ ಧೋನಿ: 'ಅಥರ್ವ' ಮೋಷನ್ ಪೋಸ್ಟರ್ ರಿಲೀಸ್

ಟೀಂ ಇಂಡಿಯಾ ಅಭಿಮಾನಿಗಳಿಗೆ, ಅದ್ರಲ್ಲೂ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಬಂಪರ್ ಸುದ್ದಿ. ನಿಮ್ಮ ಫೇವರಿಟ್ ಕ್ರಿಕೆಟಿಗನನ್ನ ಸೂಪರ್ ಹೀರೋ ಆಗಿ ನೋಡಬೇಕು ಎಂದುಕೊಂಡಿದ್ದರೆ, ಆ ಆಸೆ ಸದ್ಯದಲ್ಲೇ ಈಡೇರಲಿದೆ. ಮಹೇಂದ್ರ ಸಿಂಗ್ ಧೋನಿ ಮಾಸ್ ಅವತಾರದಲ್ಲಿ ಗ್ರಾಫಿಕ್ ನೋವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ಎಂಎಸ್ ಧೋನಿ ಅವರೇ ಸೂಪರ್ ಹೀರೋ ಆಗಿ, ಕಾದಂಬರಿಯ ನಾಯಕರಾಗಿ ನಟಿಸಿದ್ದು, ಅಧಿಕೃತ ಮೋಷನ್ ಪೋಸ್ಟರ್ ಅನ್ನು ಧೋನಿ ತಮ್ಮ ಅಧಿಕೃತ ಫೇಸ್‌ಬುಕ್ ಅಕೌಂಟ್‌ನಲ್ಲಿ ಇಂದು ಬಿಡುಗಡೆ ಮಾಡಿದ್ದಾರೆ.

ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ಮಾಹಿ
ಮೋಷನ್ ಪೋಸ್ಟರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸದೃಢ ಸೇನಾ ನಾಯಕನಂತೆ ಬಿಂಬಿತವಾಗಿದ್ದಾರೆ. ಈ ಮೋಷನ್ ಪೋಸ್ಟರ್ ಅಭಿಮಾನಿಗಳಿಗೆ ಅಥರ್ವ ಪ್ರಪಂಚದ ಒಂದು ನೋಟವನ್ನು ನೀಡುತ್ತದೆ ಮತ್ತು ಸೂಪರ್ ಹೀರೋ ಆಗಿ ಅವರ ಮೊದಲ ನೋಟಕ್ಕೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.
ಏನಿದು ಅಥರ್ವ ಕಾದಂಬರಿ?
ಧೋನಿ ಕಾದಂಬರಿಯ ಪಾತ್ರವಾಗಿದ್ದಾರೆ. ಇದು ನೀವಂದುಕೊಂಡಂತಹ ಮಾಮೂಲಿ ಕಾದಂಬರಿಯಲ್ಲ. ಹೊಸ ತಲೆಮಾರಿನ ಗ್ರಾಫಿಕ್ಸ್ ಕಾದಂಬರಿ ಒಂದು ರೀತಿಯಲ್ಲಿ ಆನಿಮೇಟಡ್ ಚಿತ್ರಕ್ಕೆ ಸಮೀಪ ಎನ್ನಬಹುದು. ಆದರೆ ಇಲ್ಲಿ ಪಾತ್ರಗಳು ಕಾದಂಬರಿಯ ರೂಪದಲ್ಲಿರುತ್ತವೆ. ಇದೀಗ 'ಅಥರ್ವ ದಿ ಒರಿಜಿನ್' (Atharva: The Origin) ಎಂಬ ಗ್ರಾಫಿಕ್ಸ್ ಕಾದಂಬರಿಯಲ್ಲಿ ಎಂಎಸ್ ಧೋನಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಾಜೆಕ್ಟ್ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಧೋನಿ, ''ಈ ಯೋಜನೆಯ ಭಾಗವಾಗಲು ಬಹಳ ಉತ್ಸುಕನಾಗಿದ್ದೇನೆ'' ಎಂದು ಹೇಳಿದ್ದಾರೆ. ಅಥರ್ವ - ದಿ ಒರಿಜಿನ್ ಆಕರ್ಷಕವಾದ ಕಥೆ ಮತ್ತು ತಲ್ಲೀನಗೊಳಿಸುವ ಚಿತ್ರಗಳೊಂದಿಗೆ ಆಕರ್ಷಕ ಗ್ರಾಫಿಕ್ ಕಾದಂಬರಿಯಾಗಿದೆ. ಪ್ರಸ್ತುತಕ್ಕೆ ಹೊಂದಿಕೆಯಾಗುವಂತೆ ಪೌರಾಣಿಕ ಸೂಪರ್ ಹೀರೋವನ್ನು ಲೇಖಕ ರಮೇಶ್ ತಮಿಳ್ಮಣಿ ಸೃಷ್ಟಿಸಿದ್ದಾರೆ.
ಜಾಸ್ತಿ ಯೋಚನೆ ಮಾಡ್ಬೇಡ, 4 ಓವರ್ ಮುಗಿಸಿ ತಣ್ಣಗಿರು ಎಂದಿದ್ದ ಮಾಹಿ: ಯುಜವೇಂದ್ರ ಚಹಾಲ್

ಓದುಗರ ಮೈ ರೋಮಾಂಚನಗೊಳಿಸಲಿರುವ ಕಾದಂಬರಿ
ಹೊಸ ತಲೆಮಾರಿಗೆ ಸಂಬಂಧಿಸಿದ ಗ್ರಾಫಿಕ್ ಕಾದಂಬರಿ ಆಗಿರುವ ಅಥರ್ವ ಓದುಗರನ್ನ ತಲ್ಲೀನಗೊಳಿಸುವ ಅನುಭವವನ್ನು ನೀಡುವ ಭರವಸೆ ಹೊಂದಿದೆ. ಇದರ ಸೃಷ್ಟಿಕರ್ತರು ಅಥರ್ವನ ಅತೀಂದ್ರಿಯ ಪ್ರಪಂಚವನ್ನು ರಚಿಸಲು ಹಲವಾರು ವರ್ಷಗಳಿಂದ ಕಲಾವಿದರ ತಂಡದೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ.
ಓದುಗರನ್ನು ವಿಭಿನ್ನ ಪ್ರಪಂಚಕ್ಕೆ ಕರೆದೊಯ್ಯುವ ಟೆಲಿಪೋರ್ಟಿಂಗ್ ಮಾಡುವ ಈ ಗ್ರಾಫಿಕ್ ಕಾದಂಬರಿಯನ್ನ, ರಮೇಶ್ ತಮಿಳ್ಮಣಿ ಅವರು ರಚಿಸಿದ್ದಾರೆ. ಎಂವಿಎಂ ವೇಲ್ ಮೋಹನ್ ನೇತೃತ್ವದ ಮತ್ತು ವಿನ್ಸೆಂಟ್ ಅಡೈಕಳರಾಜ್ ಮತ್ತು ಅಶೋಕ್ ಮ್ಯಾನರ್ ನಿರ್ಮಿಸಿದ್ದಾರೆ. ಇದರಲ್ಲಿ 150ಕ್ಕೂ ಅಧಿಕ ಪಾತ್ರಗಳಿದ್ದು, ವ್ಯಕ್ತಿಗಳನ್ನು ಆಧರಿಸಿ ರಚಿಸಲಾಗಿದೆ. ಇದರಿಂದ ಓದುಗರಿಗೆ ಮತ್ತಷ್ಟು ಕುತೂಹಲ ಹಾಗೂ ರೋಚಕತೆಯನ್ನು 'ಅಥರ್ವ' ನೀಡಲಿದೆ. ಮೊದಲ ಲುಕ್‌ನಲ್ಲೇ ಅಭಿಮಾನಿಗಳ ನಿದ್ರೆ ಕೆಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications