For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ನಾನು ಆಯ್ಕೆಯಾಗುತ್ತೇನೋ? ಇಲ್ಲವೋ? ಎಂಬುದರ ಬಗ್ಗೆ ಕಾಳಜಿಯಿಲ್ಲ: ದಿನೇಶ್ ಕಾರ್ತಿಕ್

Dinesh karthik

ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತನ್ನ ಆಯ್ಕೆಯ ಕುರಿತಾಗಿ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ವಿಶ್ವಕಪ್‌ಗೆ ಈಗಾಗಲೇ ಭಾಗವಹಿಸುವ ಎಲ್ಲಾ ತಂಡಗಳು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಟೀಂ ಇಂಡಿಯಾ ಕೂಡ ಅಂತಿಮ ಹನ್ನೊಂದು ಆಟಗಾರರನ್ನ ಫೈನಲ್‌ ಮಾಡುವ ಪ್ರಯತ್ನ ನಡೆಸುತ್ತಿದೆ.

2007ರ ಚೊಚ್ಚಲ ವಿಶ್ವಕಪ್ ಆಡಿದ್ದ ದಿನೇಶ್ ಕಾರ್ತಿಕ್

2007ರ ಚೊಚ್ಚಲ ವಿಶ್ವಕಪ್ ಆಡಿದ್ದ ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಪರ ಚೊಚ್ಚಲ ವಿಶ್ವಕಪ್‌ ಆಡಿದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಚೊಚ್ಚಲ ವಿಶ್ವಕಪ್‌ನಿಂದ ಇಲ್ಲಿಯವರೆಗೆ ಕಾರ್ತಿಕ್ ಪ್ರಯಾಣ ನಿಜಕ್ಕೂ ಹಲವು ಏರಿಳಿತಗಳಿಂದ ಕೂಡಿದೆ. ಪ್ರಸ್ತುತ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹೊರತುಪಡಿಸಿ ಯಾವೊಬ್ಬ ಆಟಗಾರನೂ ಅಷ್ಟು ದೊಡ್ಡ ಮಟ್ಟಿನ ಅನುಭವವನ್ನ ಹೊಂದಿಲ್ಲ.

ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡದಲ್ಲಿ ಆಡಿದ್ದ ಕಾರ್ತಿಕ್‌, ಇದೀಗ ಅದೇ ತಂಡದಲ್ಲಿದ್ದ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡದ ಸದಸ್ಯರಾಗಿ ಮುಂದುವರಿದಿದ್ದಾರೆ.

ಕೊಹ್ಲಿ vs ರೋಹಿತ್: 2022ರಲ್ಲಿ ಹೆಚ್ಚು ರನ್ ಮತ್ತು ಅರ್ಧಶತಕಗಳು ಗಳಿಸಿರುವವರು ಯಾರು?

2014ರಲ್ಲಿ ಫೈನಲ್‌ನಲ್ಲಿ ಸೋಲು, ಆನಂತರ ಕಂಡಿದ್ದೆಲ್ಲಾ ಸೋಲು

2014ರಲ್ಲಿ ಫೈನಲ್‌ನಲ್ಲಿ ಸೋಲು, ಆನಂತರ ಕಂಡಿದ್ದೆಲ್ಲಾ ಸೋಲು

ಚೊಚ್ಚಲ ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದ ಬೆಸ್ಟ್ ಪ್ರದರ್ಶನ ಕಂಡುಬಂದಿದ್ದು, 2014ರ ಟಿ20 ವಿಶ್ವಕಪ್ ಪೈನಲ್‌ನಲ್ಲಿ. ಲಸಿತ್ ಮಾಲಿಂಗ ನಾಯಕತ್ವದ ಶ್ರೀಲಂಕಾ ತಂಡದೆದುರು ಭಾರತ ಸೋತ ಬಳಿಕ ಆರು ವಿಶ್ವಕಪ್‌ ಕಳೆದರೂ ಪ್ರದರ್ಶನ ಮಾತ್ರ ಸುಧಾರಿಸಲಿಲ್ಲ.

ಆದ್ರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದ್ದು, ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಸ್ಟ್ರಾಟರ್ಜಿ ವರ್ಕೌಟ್ ಆಗುವ ನಿರೀಕ್ಷೆಗಳಿವೆ.

ಇದರ ಜೊತೆಗೆ ಕಾರ್ತಿಕ್ 2.0 ಆಗಮನವು ತಂಡದ ಫಿನಿಷಿಂಗ್ ಸಾಮರ್ಥ್ಯವನ್ನ ಹೆಚ್ಚಿಸಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ ಐಪಿಎಲ್ 2022ರ ಬಳಿಕ ಪ್ರಬುದ್ಧತೆಯ ಆಟವು ಗಮನಸೆಳೆದಿದೆ.

ಸಲಿಂಗಿಯಾಗಿ ಪರಿವರ್ತನೆಗೊಂಡ ರಷ್ಯಾದ ಟಾಪ್ ಮಹಿಳಾ ಟೆನಿಸ್ ಪ್ಲೇಯರ್

ಸೋಲಿನ ಜವಾಬ್ದಾರಿ ಹೊತ್ತ ಜೋಸ್ ಬಟ್ಟಲರ್! | *Cricket | OneIndia Kannad
ವಿಶ್ವಕಪ್‌ಗೆ ಆಯ್ಕೆಯಾಗುವ ಕುರಿತು ಯಾವುದೇ ಚಿಂತೆಯಿಲ್ಲ

ವಿಶ್ವಕಪ್‌ಗೆ ಆಯ್ಕೆಯಾಗುವ ಕುರಿತು ಯಾವುದೇ ಚಿಂತೆಯಿಲ್ಲ

ಇನ್ನು ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಕುರಿತಾಗಿ ಯಾವುದೇ ಯೋಚನೆ ಮಾಡಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ನಾನು ನನ್ನ ಪ್ರದರ್ಶನವನ್ನ ಉತ್ತಮಗೊಳಿಸುವತ್ತ ಲಕ್ಷ್ಯ ನೆಟ್ಟಿದ್ದೇನೆ ಹೊರತು, ವಿಶ್ವಕಪ್‌ಗೆ ಆಯ್ಕೆಯಾಗುವ ಕುರಿತು ತಲೆಕೆಡಿಸಿಕೊಂಡಿಲ್ಲ ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

''ನನ್ನ ಗಮನವು ಉತ್ತಮ ಪ್ರದರ್ಶನ ನೀಡುವುದರ ಮೇಲೆ ಹೊರತು, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದರ ಬಗ್ಗೆ ಕಾಳಜಿ ವಹಿಸುವುದಿಲ್ಲ." ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಇದರ ಜೊತೆಗೆ ಮುಂಬರುವ ವಿಶ್ವಕಪ್‌ಗಾಗಿ ತಂಡದ ಸಿದ್ಧತೆಯು ಜೋರಾಗಿದೆ ಎಂದು ಕಾರ್ತಿಕ್ ಗುಟ್ಟು ಬಿಚ್ಚಿಟ್ಟಿದ್ದಾರೆ.

"ಮುಂಬರುವ ವಿಶ್ವಕಪ್‌ನಲ್ಲಿ ನಾವು ಎದುರಿಸಲಿರುವ ಸವಾಲುಗಳಿಗೆ ನಾವು ತಂಡವಾಗಿ ತಯಾರಿ ನಡೆಸುತ್ತಿದ್ದೇವೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ನಾವು ದೊಡ್ಡ ಆಟಕ್ಕೆ ಸಿದ್ಧರಾಗುತ್ತಿದ್ದೇವೆ. ವಾತಾವರಣವು ಅತ್ಯಂತ ಉತ್ಕೃಷ್ಟವಾಗಿದೆ'' ಎಂದು ಕಾರ್ತಿಕ್ ಹೇಳಿದರು.

ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯುವ ವಿಶ್ವಕಪ್ ಪಂದ್ಯಗಳನ್ನು ಆಸ್ಟ್ರೇಲಿಯಾದ ಏಳು ನಗರಗಳು ಆತಿಥ್ಯ ವಹಿಸಲಿವೆ.

Story first published: Tuesday, July 19, 2022, 16:50 [IST]
Other articles published on Jul 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+