For Quick Alerts
ALLOW NOTIFICATIONS  
For Daily Alerts
 

'ಗೇ' ಮಗನಿಗೆ ಮದ್ವೆ ಪಾಠ ಮಾಡಿದ ಶ್ರೀನಿವಾಸನ್

By Mahesh

ಚೆನ್ನೈ, ಮೇ.4: ಬಿಸಿಸಿಐ ಮಾಜಿ ಅಧ್ಯಕ್ಷ, ಹಾಲಿ ಐಸಿಸಿ ಮುಖ್ಯಸ್ಥ ಎನ್ ಶ್ರೀನಿವಾಸನ್ ಗೆ ಅಳಿಯನಿಂದ ಐಪಿಎಲ್ ರಗಳೆ ಕೇಳುವುದೇ ಸಾಕಾಗಿದೆ. ಈ ಮಧ್ಯೆ ಶ್ರೀನಿವಾಸನ್ ಪುತ್ರ ಮಾಧ್ಯಮಕ್ಕೆ ಸಂದರ್ಶನ ನೀಡಿ ನಮ್ಮಪ್ಪ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಾರೆ ಎಂದು ದುಃಖ ತೋಡಿಕೊಂಡಿದ್ದಾರೆ. ಶ್ರೀನಿವಾಸನ್ ಪುತ್ರ ಅಶ್ವಿನ್ 'ಗೇ' ಆಗಿರುವುದು ಸಮಸ್ಯೆಗೆ ಕಾರಣವಾಗಿದೆ.

ಡಿಎನ್ಎ ಗೆ ನೀಡಿದ ಸಂದರ್ಶನದಲ್ಲಿ ಆಶ್ವಿನ್ ಶ್ರೀನಿವಾಸನ್ ಅವರು ಮಾತನಾಡಿ, ನಾನು ಸಲಿಂಗಿ. ಜೀವನಪರ್ಯಂತ ಸಲಿಂಗಿಯಾಗಿ ನನ್ನ ಪುರುಷ ಸಂಗಾತಿ ಜೊತೆ ಕಾಲ ಕಳೆಯಲು ಇಚ್ಛಿಸುತ್ತೇನೆ. ಅದರೆ, ನಮ್ಮಪ್ಪ ಶ್ರೀನಿವಾಸನ್ ಅವರು ನಾನು ಮಹಿಳೆಯೊಬ್ಬಳನ್ನು ಮದುವೆಯಾಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದಿದ್ದಾರೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಕುಟುಂಬದ ಆಸ್ತಿಯಲ್ಲಿನ ನನ್ನ ಭಾಗವನ್ನು ತಂದೆ ನನಗೆ ಕೊಡಬೇಕು ಎಂದು ಕೇಳಿದೆ ಇದಕ್ಕೆ ಮೊದಲು ನೀನು ಮಹಿಳೆಯನ್ನು ಮದುವೆಯಾಗು ಎಂದರು. ನನ್ನ ಸಲಿಂಗಿ ಸಂಗಾತಿ ಅವಿ ಮುಖರ್ಜಿಯನ್ನು ಬೋಟ್ ಕ್ಲಬ್ ನ ಟೋನಿ ಫಸ್ಟ್ ಅವಿನ್ಯೂನಲ್ಲಿ ಬಂಧಿಸಿಡಲಾಗಿದೆ.

My father forcing me to marry, accuses ICC chief N Srinivasan's 'gay' son

ನೀನು ಹುಡುಗಿಯೊಬ್ಬಳನ್ನು ಮದುವೆಯಾಗಿ ತಮ್ಮ ವಂಶವನ್ನು ಮುಂದುವರಿಸಲೇಬೇಕೆಂದು ಶ್ರೀನಿವಾಸನ್ ತಮ್ಮ ಮಗನಿಗೆ ಪತ್ರ ಬರೆದಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. 2007 ಹಾಗೂ 2008 ರಲ್ಲಿ ಅಪ್ಪ-ಮಗನ ನಡುವೆ ಪತ್ರ ವ್ಯವಹಾರ ನಡೆದಿದೆ.

ಜೂನ್ 20, 2007ರಲ್ಲಿ ಬರೆದ ಪತ್ರದ ಸಾರಾಂಶ ಹೀಗಿದೆ:
"Ash, you are my only son. Both your mother and I love you very much. You are aware of the hope I had for you," and advises, "I feel you need to do certain things to help yourself", before going to explicitly state, "I have saved money through my own hard work.

ಈ ಬಗ್ಗೆ ಡಿಎನ್ ಎ ಪತ್ರಿಕೆ ಶ್ರೀನಿವಾಸನ್ ಅವರನ್ನು ಪ್ರಶ್ನಿಸಿದಾಗ, ಇದು ಅಪ್ಪ-ಮಗನ ನಡುವಿನ ಖಾಸಗಿ ವಿಚಾರ. ಮಾಧ್ಯಮಗಳಿಗೆ ಈ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು. ಎಂದು ಪ್ರಶ್ನಿಸಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಅಳಿಯ ಗುರುನಾಥ್ ಮೇಯಪ್ಪನ್ ಅವರು ಕಳ್ಳಾಟದಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳು ಕೇಳಿ ಬಂದಾಗ ಶ್ರೀನಿವಾಸನ್ ಅವರು ಗುರುನಾಥ್ ಅವರನ್ನು ಸಮರ್ಥಿಸಿಕೊಂಡಿದ್ದರು. ಈಗ ಮಗ ಅಶ್ವಿನ್ ನೀಡಿರುವ ಹೇಳಿಕೆಗಳು ಶ್ರೀನಿವಾಸನ್ ಅವರನ್ನು ಮುಜುಗರಕ್ಕೀಡು ಮಾಡಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+