
400 ವಿಕೆಟ್ ಪಡೆದ ಮೂರನೇ ಬೌಲರ್
ಈಗ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 403 ವಿಕೆಟ್‌ಗಳನ್ನು ಹೊಂದಿದ್ದಾರೆ ಮತ್ತು ವೆಸ್ಟ್ ಇಂಡೀಸ್ ಶ್ರೇಷ್ಠ ಕರ್ಟ್ಲಿ ಆಂಬ್ರೋಸ್‌ರನ್ನು ಸಮೀಪಿಸಿದ್ದಾರೆ. ನೇಥನ್ ಲಿಯಾನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಕ್ಲಬ್‌ಗೆ ಪ್ರವೇಶಿಸಿದ ಮೂರನೇ ಆಸ್ಟ್ರೇಲಿಯಾದ ಬೌಲರ್ ಆಗಿದ್ದಾರೆ. ಈ ಹಿಂದೆ, ಶ್ರೇಷ್ಠ ಆಟಗಾರರಾದ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ಟೆಸ್ಟ್ ಮಾದರಿಯಲ್ಲಿ ಕ್ರಮವಾಗಿ 708 ಮತ್ತು 563 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಒಂದು ವಿಕೆಟ್‌ಗೆ ವರ್ಷವೆಲ್ಲಾ ಕಾದ ನೇಥನ್
ಆದಾಗ್ಯೂ, ನೇಥನ್ ಲಿಯಾನ್ ವರ್ಷವಿಡೀ 399 ವಿಕೆಟ್‌ಗಳಲ್ಲೇ ಉಳಿದುಕೊಂಡು, ಒಂದು ವಿಕೆಟ್ ಪಡೆಯಲು ಸಾಕಷ್ಟು ಸಮಯ ಕಾಯಬೇಕಾಯಿತು. ಆ್ಯಷಸ್ ಸರಣಿಯ ಮೊದಲ ಪಂದ್ಯ ನಡೆದ ಗಬ್ಬಾದಲ್ಲಿಯೇ ಜನವರಿಯಲ್ಲಿ ನಡೆದ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರು ನೇಥನ್‌ರ ಕೊನೆಯ ವಿಕೆಟ್ ಆಗಿದ್ರು. ಆದ್ರೆ ಮತ್ತೆ ವಿಕೆಟ್ ಪಡೆಯಲು ಡಿಸೆಂಬರ್‌ವರೆಗೆ ಕಾದಿದ್ದಾರೆ.
ಇಶಾಂತ್ ಶರ್ಮಾಗೆ ದಕ್ಷಿಣ ಆಫ್ರಿಕಾ ಸರಣಿಯೇ ಕೊನೆ, ಮಾಡು ಇಲ್ಲವೆ ಮಡಿ ಪರಿಸ್ಥಿತಿ: ವರದಿ
ಮೂರು ದಶಕಗಳ ನಂತರ ಆಸ್ಟ್ರೇಲಿಯಾ ಮೊದಲ ಬಾರಿಗೆ ಗಬ್ಬಾದಲ್ಲಿ ಭಾರತ ವಿರುದ್ಧ ಟೆಸ್ಟ್ ಸೋಲನ್ನು ಅನುಭವಿಸಿತ್ತು. ಇದೀಗ ಗಬ್ಬಾದಲ್ಲಿಯೇ ಇಂಗ್ಲೆಂಡ್ ತಂಡವನ್ನು ಮಣಿಸಿ ಕಾಂಗರೂ ಪಡೆ ಮತ್ತೆ ಗೆಲುವಿನ ಹಾದಿ ಹಿಡಿದಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಇಂಗ್ಲೆಂಡ್
ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿಯೂ 297 ರನ್‌ಗಳಿಗೆ ಆಲೌಟ್ ಆಯಿತು. ಅದೇ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ
425 ರನ್‌ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 278 ರನ್‌ಗಳ ಬೃಹತ್ ಮುನ್ನಡೆಯನ್ನು ಸಾಧಿಸಿತು.
ಒಂದು ಸಮಯದಲ್ಲಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತ್ತು, ಆದರೆ ನಂತರ ಆಸ್ಟ್ರೇಲಿಯಾ ಗೆಲ್ಲಲು ಕೇವಲ 20 ರನ್‌ಗಳನ್ನು ಮಾತ್ರ ಸುಲಭ ಗುರಿ ನೀಡಿತು. ಆಸ್ಟ್ರೇಲಿಯಾ ಕೇವಲ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಗುರಿ ತಲುಪಿದೆ.
ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್ ಸಿಡಿಸಿದ ಟ್ರಾವಿಡ್ ಹೆಡ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದು ಮಿಂಚಿದ್ದಾರೆ.
ಆಶಸ್ ಸರಣಿ: ತಿರುಗಿಬಿದ್ದ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಮೊದಲ ಟೆಸ್ಟ್ ವಶಪಡಿಸಿಕೊಂಡ ಆಸ್ಟ್ರೇಲಿಯಾ

400ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ಸ್
ಮುತ್ತಯ್ಯ ಮುರಳೀಧರನ್ 800
ಶೇನ್ ವಾರ್ನ್ 708
ಜೇಮ್ಸ್ ಆ್ಯಂಡರ್ಸನ್ 632
ಅನಿಲ್ ಕುಂಬ್ಳೆ 619
ಗ್ಲೆನ್ ಮೆಗ್ರಾಥ್ 563
ಸ್ಟುವರ್ಟ್ ಬ್ರಾಡ್ 524
ಕರ್ಟ್ಲಿ ವಾಶ್ 519
ಡೇಲ್ ಸ್ಟೇನ್ 439
ಕಪಿಲ್ ದೇವ್ 434
ರಂಗನಾ ಹೆರಾಥ್ 433
ರಿಚರ್ಡ್ ಹ್ಯಾಡ್ಲಿ 431
ಆರ್. ಅಶ್ವಿನ್ 427
ಶಾನ್ ಪೊಲಾಕ್ 421
ಹರ್ಭಜನ್ ಸಿಂಗ್ 417
ವಾಸಿಂ ಅಕ್ರಮ್ 414
ಕರ್ಟ್ಲಿ ಅಂಬ್ರೋಸ್ 405
ನೇಥನ್ ಲಿಯಾನ್ 403


Click it and Unblock the Notifications











