For Quick Alerts
ALLOW NOTIFICATIONS  
For Daily Alerts
 

ಇಶಾಂತ್ ಶರ್ಮಾಗೆ ದಕ್ಷಿಣ ಆಫ್ರಿಕಾ ಸರಣಿಯೇ ಕೊನೆ, ಮಾಡು ಇಲ್ಲವೆ ಮಡಿ ಪರಿಸ್ಥಿತಿ: ವರದಿ

Ishant sharma

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನ ಆಡಲು ಟೀಮ್ ಇಂಡಿಯಾ ಇದೇ ತಿಂಗಳು ಹರಿಣಗಳ ನಾಡಿಗೆ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಡಿಸೆಂಬರ್ 16ರಂದೇ ಹರಿಣಗಳ ನಾಡಿಗೆ ಕೊಹ್ಲಿ ಟೀಂ ಪ್ರವಾಸ ಮಾಡಲಿದೆ.

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಮತ್ತು ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ, ವಾರಕ್ಕೂ ಹೆಚ್ಚು ಕಾಲ ಮೊದಲೇ ಬಯೋ ಬಬಲ್‌ನಲ್ಲಿ ಇರಬೇಕಾದ್ದ ಪರಿಣಾಮ ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾಗೆ ಹೋಗಲಿದೆ. ಇದುವರೆಗೂ ದಕ್ಷಿಣ ಆಫ್ರಿಕಾದಲ್ಲಿ ಗೆಲ್ಲಲಾಗದ ಟೆಸ್ಟ ಸರಣಿ ಮೇಲೆ ಭಾರತ ಈ ಬಾರಿ ಕಣ್ಣಿಟ್ಟಿದೆ.

ಈ ಟೆಸ್ಟ್ ಸರಣಿಯು ಟೀಂ ಇಂಡಿಯಾದ ಕೆಲವು ಆಟಗಾರರಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡ್ರೆ ಮತ್ತೆ ಭಾರತದ ಜರ್ಸಿ ತೊಡುವ ಅವಕಾಶ ಸಿಗುವುದೇ ಅನುಮಾನವಾಗಿದೆ.

ಇಶಾಂತ್ ಶರ್ಮಾ ಕೆರಿಯರ್‌ಗೆ ರಿಯಲ್ ಟೆಸ್ಟ್‌

ಇಶಾಂತ್ ಶರ್ಮಾ ಕೆರಿಯರ್‌ಗೆ ರಿಯಲ್ ಟೆಸ್ಟ್‌

ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್‌ನಲ್ಲಿ ಇಶಾಂತ್ ಶರ್ಮಾ ಭಾರತ ತಂಡದ ನಿಷ್ಠಾವಂತ ಬೌಲರ್ ಆಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಟೆಸ್ಟ್ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಹಲವಾರು ಯುವ ಮತ್ತು ಪ್ರತಿಭಾವಂತ ವೇಗಿಗಳ ಸ್ಪರ್ಧೆಯ ನಡುವೆ, ತಂಡದಲ್ಲಿ ಅವರ ಸ್ಥಾನವು ಪ್ರಶ್ನಾರ್ಹವಾಗಿದೆ. ಅಲ್ಲದೆ, ಅವರ ಪ್ರಸ್ತುತ ಫಾರ್ಮ್ ಕೂಡ ಉತ್ತಮವಾಗಿಲ್ಲ.

ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದ ಏಕೈಕ ಭಾರತೀಯ ಬೌಲರ್ ಇವರಾಗಿದ್ದಾರೆ. ಇದಲ್ಲದೆ, ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನ ಕಟ್ಟಿಹಾಕುವಲ್ಲಿ ವಿಫಲರಾದರು. ಕಳೆದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರು ಸಾಧಾರಣ ಬೌಲಿಂಗ್ ಪ್ರದರ್ಶಿಸಿದರು. 33 ವರ್ಷ ವಯಸ್ಸಿನ ಇಶಾಂತ್ ಎರಡು ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನು ತೆಗೆದುಕೊಳ್ಳಲಷ್ಟೇ ಸಾಧ್ಯವಾಯಿತು.

ಇವರ ಪದೇ ಪದೇ ಗಾಯದ ನಡುವೆ, ಟೀಂ ಇಂಡಿಯಾ ಪರ ವಿಕೆಟ್ ಪಡೆಯುವ ಅವರ ಹಸಿವು ಕಡಿಮೆಯಾದಂತಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಅವರ ಕೆರಿಯರ್‌ನ ರಿಯಲ್ ಟೆಸ್ಟ್ ಟೈಂ ಆಗಿದೆ.

ದೆಹಲಿ ವೇಗಿಗೆ ಇದುವೇ ಕೊನೆಯ ಟೆಸ್ಟ್ ಸರಣಿಯಾಗಬಹುದು!

ದೆಹಲಿ ವೇಗಿಗೆ ಇದುವೇ ಕೊನೆಯ ಟೆಸ್ಟ್ ಸರಣಿಯಾಗಬಹುದು!

ಭಾರತದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸವು ಇಶಾಂತ್ ಶರ್ಮಾ ಅವರ ಕೊನೆಯ ಟೆಸ್ಟ್ ಸರಣಿಯಾದ್ರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿಬಂದಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡವು ಹರಿಣಗಳ ನಾಡಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ, ಆದ್ರೆ ಇಶಾಂತ್‌ಗೆ ಮುಂದಿನ ದಿನಗಳಲ್ಲಿ ಭಾರತದ ಪ್ಲೇಯಿಂಗ್‌ 11ನಲ್ಲಿ ಮತ್ತೆ ಅವಕಾಶ ಸಿಗುತ್ತೆ ಅನ್ನೋದನ್ನ ಹೇಳಲು ಸಾಧ್ಯವಿಲ್ಲ. ಇಲ್ಲಿಯವರೆಗೆ 105 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡಿರುವ ಬಲಗೈ ವೇಗದ ಬೌಲರ್ ನಿಜವಾಗಿಯೂ ಅತ್ಯಂತ ಶ್ಲಾಘನೀಯ ಕೆರಿಯರ್ ಅನ್ನು ಹೊಂದಿಲ್ಲ.

ಆಶಸ್ ಸರಣಿ: ತಿರುಗಿಬಿದ್ದ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಮೊದಲ ಟೆಸ್ಟ್ ವಶಪಡಿಸಿಕೊಂಡ ಆಸ್ಟ್ರೇಲಿಯಾ

ಯುವ ಪ್ರತಿಭೆಗಳು ಅವಕಾಶಕ್ಕಾಗಿ ಕ್ಯೂನಲ್ಲಿದ್ದಾರೆ

ಯುವ ಪ್ರತಿಭೆಗಳು ಅವಕಾಶಕ್ಕಾಗಿ ಕ್ಯೂನಲ್ಲಿದ್ದಾರೆ

ಟೀಂ ಇಂಡಿಯಾ ಪರ ಆಡುವ ಪ್ಲೇಯಿಂಗ್ 11ನಲ್ಲಿ ಸ್ಥಾನಕ್ಕಾಗಿ ಹಲವಾರು ಯುವ ಮತ್ತು ಪ್ರತಿಭಾವಂತ ವೇಗಿಗಳೊಂದಿಗೆ ಇನ್ಮು ಇಶಾಂತ್ ಸ್ಪರ್ಧೆ ನೀಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿಯೇ ಬಿಸಿಸಿಐ ಆಯ್ಕೆ ಸಮಿತಿ ಮುಂದಿನ ಸರಣಿಯಲ್ಲಿ ಯುವಕರಿಗೆ ಮಣೆ ಹಾಕಲು ನಿರ್ಧರಿಸಿದೆ. ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ರಂತಹ ಯುವಕರ ಬೆಳವಣಿಗೆ ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ, ಡಿಸೆಂಬರ್ 26 ರಂದು ನಡೆಯಲಿರುವ ಸರಣಿಯ ಸಮಯದಲ್ಲಿ ಇಶಾಂತ್ ಮತ್ತು ಇತರ ಇಬ್ಬರು ಅನುಭವಿಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರು ಸ್ಕ್ಯಾನರ್ ಅಡಿಯಲ್ಲಿದ್ದಾರೆ.

ಟೆಸ್ಟ್ ಉಪನಾಯಕತ್ವ ಕಳೆದುಕೊಂಡಿರುವ ರಹಾನೆ

ಟೆಸ್ಟ್ ಉಪನಾಯಕತ್ವ ಕಳೆದುಕೊಂಡಿರುವ ರಹಾನೆ

ಅತ್ಯಂತ ಕಳಪೆ ಫಾರ್ಮ್‌ನಿಂದ ಟೀಕೆಗೊಳಗಾಗಿರುವ ಟೀಂ ಇಂಡಿಯಾ ಟೆಸ್ಟ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಹ್ಯಾಮ್‌ಸ್ಟ್ರಿಂಗ್‌ನಿಂದ ಆತ ಹೊರಗಿದ್ದಾನೆ ಎಂದು ಭಾರತೀಯ ಮಂಡಳಿ ತಿಳಿಸಿತ್ತು. ಆದರೆ ಕಳಪೆ ಬ್ಯಾಟ್‌ನ ಫಾರ್ಮ್‌ನಿಂದಾಗಿ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಪನಾಯಕತ್ವದ ಪಾತ್ರವನ್ನು ಕಳೆದುಕೊಂಡಿದ್ದಾರೆ. ರೋಹಿತ್ ಶರ್ಮಾಗೆ ಉಪನಾಯಕನ ಸ್ಥಾನ ನೀಡಲಾಗಿದ್ದು, ಇದು ರಹಾನೆಗೆ ಎಚ್ಚರಿಕೆಗೆ ಗಂಟೆಯಾಗಿದೆ.

ನಾನೇನು ಉತ್ತಮ ನಾಯಕನಲ್ಲ, ತಂಡದಲ್ಲಿ ಅವರಿದ್ದರೆ ಮಾತ್ರ ಗೆಲುವು ಎಂದ ರೋಹಿತ್!

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚದಿದ್ರೆ ಗೇಟ್‌ ಪಾಸ್?

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚದಿದ್ರೆ ಗೇಟ್‌ ಪಾಸ್?

ಅಜಿಂಕ್ಯ ರಹಾನೆ ಜೊತೆಗೆ ಚೇತೇಶ್ವರ ಪೂಜಾರ ಕೂಡ ಬಿಸಿಸಿಐ ಆಯ್ಕೆ ಸಮಿತಿಯ ಸ್ಕ್ಯಾನರ್‌ನಲ್ಲಿದ್ದಾರೆ. ಅಜಿಂಕ್ಯ ರಹಾನೆ ಸದಸ್ಯರಾಗಿರುವುದರಿಂದ ಅವರು ಹೆಚ್ಚಿನ ಕೊಡುಗೆ ನೀಡಬೇಕಾಗಿದೆ. ಪೂಜಾರ ವಿಷಯದಲ್ಲೂ ಕೂಡ ಇದೇ ಆಗಿದೆ. ಅವರೂ ಬಹಳ ಸಮಯದಿಂದ ಇದ್ದರೂ ದೊಡ್ಡ ನಿರ್ಣಾಯಕ ಪ್ರದರ್ಶನ ನೀಡುವಲ್ಲಿ ವಿಫಲಾಗಿದ್ದು ಮುಂದಿನ ಸರಣಿಯಲ್ಲಿಯಲ್ಲಿ ಆ ನಿರ್ಣಾಯಕ ನಾಕ್‌ಗಳನ್ನು ಆಡುತ್ತಾರೆ ಎಂದು ತಂಡವು ನಿರೀಕ್ಷಿಸುತ್ತದೆ "ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಟಿ20 ನಾಯಕತ್ವ ಸ್ವೀಕರಿಸುವಾಗ ರೋಹಿತ್ ಹಾಕಿದ್ದ ಆ ಷರತ್ತಿನಿಂದ ಕೊಹ್ಲಿ ಏಕದಿನ ನಾಯಕತ್ವವನ್ನೂ ಬಿಟ್ಟರು!

KL Rahul ಆಟದಿಂದ ಖತಂ ಆಗುತ್ತಾ ಈ ಮೂವರ ಕ್ರಿಕೆಟ್ ಕೆರಿಯರ್? | Oneindia Kannada
ಅವಕಾಶಕ್ಕಾಗಿ ಕಾದು ಕುಳಿತಿರುವ ಯುವ ವೇಗಿಗಳು

ಅವಕಾಶಕ್ಕಾಗಿ ಕಾದು ಕುಳಿತಿರುವ ಯುವ ವೇಗಿಗಳು

ಈ ಟೀಮ್ ಇಂಡಿಯಾ ರೆಗ್ಯುಲರ್‌ಗಳಲ್ಲದೆ, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಉಮ್ರಾನ್ ಮಲಿಕ್ ಮತ್ತು ನವದೀಪ್ ಸೈನಿ ಅವರಂತಹ ವೇಗದ ಬೌಲರ್‌ಗಳು ಅವಕಾಶಕ್ಕಾಗಿ ಬೆಂಚ್ ಕಾಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಇಶಾಂತ್ ಭಾರತದ ನಾಲ್ವರು ವೇಗದ ದಾಳಿಯಲ್ಲಿ ಸ್ಥಾನ ಪಡೆಯಲಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ.

ಇಶಾಂತ್ ಅವರ ಫಾರ್ಮ್ ಕೂಡ ಇತ್ತೀಚೆಗೆ ಕುಸಿದಿದೆ. ಕಳೆದ 12 ತಿಂಗಳ ಅವಧಿಯಲ್ಲಿ, ಇಶಾಂತ್ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 32.71 ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ. ಆದ್ದರಿಂದ, ದಕ್ಷಿಣ ಆಫ್ರಿಕಾದ ಪ್ರವಾಸವು ಅವರಿಗೆ ಅತ್ಯಂತ ನಿರ್ಣಾಯಕ ಅಂದ್ರೆ ತಪ್ಪಾಗಲಾರದು.

Story first published: Saturday, December 11, 2021, 16:32 [IST]
Other articles published on Dec 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+