ಚೆನ್ನಾಗಿ ಆಡದೇ ಇದ್ರೂ ಈ ಆಟಗಾರನಿಗೆ ಪದೇಪದೆ ಅವಕಾಶ ಕೊಟ್ಟಿತ್ತು ಆರ್‌ಸಿಬಿ!

ಮೊಹಮ್ಮದ್ ಸಿರಾಜ್ ಬೆಳೆಯುತ್ತಿರುವ ಪ್ರತಿಭೆ. ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದಾಗ ಕಳಪೆ ಪ್ರದರ್ಶನ ನೀಡುವುದರ ಮೂಲಕ ಸಾಲು ಸಾಲು ಟೀಕೆಗಳಿಗೆ ಗುರಿಯಾಗಿದ್ದ ಮೊಹಮ್ಮದ್ ಸಿರಾಜ್ 2020ರ ಐಪಿಎಲ್‌ನಿಂದ ತನ್ನ ಬೌಲಿಂಗ್ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಉತ್ತಮ ಪ್ರದರ್ಶನವನ್ನು ನೀಡಲಾರಂಭಿಸಿದರು.

ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ, ಗಂಗೂಲಿ ದುಬೈನಲ್ಲಿ; ಐಪಿಎಲ್‌ಗಾಗಿ ದಾದಾ ಮಾಸ್ಟರ್ ಪ್ಲಾನ್

ಕಳೆದ ಬಾರಿಯ ಐಪಿಎಲ್ ಟೂರ್ನಿಯ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು. ಈ ಪ್ರವಾಸಕ್ಕೆ ಮೊಹಮ್ಮದ್ ಸಿರಾಜ್ ಕೂಡ ಆಯ್ಕೆಯಾದರು. ತುಂಬಾ ದಿನಗಳಿಂದ ಟೆಸ್ಟ್ ಕ್ರಿಕೆಟ್‍ನಲ್ಲಿ ಆಡಬೇಕೆಂಬ ಕನಸನ್ನು ಹೊತ್ತಿದ್ದ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದು ಉತ್ತಮ ಪ್ರದರ್ಶನ ನೀಡಿದರು. ಆ ಸರಣಿಯಲ್ಲಿ 13 ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಸಿರಾಜ್ ಆಗಿನಿಂದ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಕೂಡ ಆಯ್ಕೆಯಾಗಿರುವ ಮೊಹಮ್ಮದ್ ಸಿರಾಜ್ ಐಪಿಎಲ್ ವೇಳೆಯಲ್ಲಿ ವಿರಾಟ್ ಕೊಹ್ಲಿ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. 'ಎರಡು ವರ್ಷಗಳ ಹಿಂದೆ ನಾನು ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದೆ. ಆದರೂ ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬೆಂಗಳೂರು ತಂಡದಲ್ಲಿಯೇ ಉಳಿಸಿಕೊಂಡರು. ಕೊಹ್ಲಿ ಮಾಡಿದ ಈ ಸಹಾಯಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ' ಎಂದು ಮೊಹಮ್ಮದ್ ಸಿರಾಜ್ ವಿರಾಟ್ ಕೊಹ್ಲಿ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

ಎಲ್ಲರೂ ಕಾಲೆಳೆದಾಗ ಬೆನ್ನಿಗೆ ನಿಂತಿದ್ದು ವಿರಾಟ್ ಕೊಹ್ಲಿ

ಎಲ್ಲರೂ ಕಾಲೆಳೆದಾಗ ಬೆನ್ನಿಗೆ ನಿಂತಿದ್ದು ವಿರಾಟ್ ಕೊಹ್ಲಿ

ನೀವು ಗಮನಿಸಿರಬಹುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊಹಮ್ಮದ್ ಸಿರಾಜ್ ಸೇರಿಕೊಂಡು ಸಾಲು ಸಾಲು ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದ ವಿರಾಟ್ ಕೊಹ್ಲಿ ಪದೇಪದೆ ಅವಕಾಶಗಳನ್ನು ಕೊಡುವುದರ ಮೂಲಕ ಮೊಹಮ್ಮದ್ ಸಿರಾಜ್ ಬೆನ್ನಿಗೆ ನಿಂತಿದ್ದರು.

ತಂದೆಯನ್ನು ಕಳೆದುಕೊಂಡಾಗ ಧೈರ್ಯ ತುಂಬಿದ್ದರು ವಿರಾಟ್

ತಂದೆಯನ್ನು ಕಳೆದುಕೊಂಡಾಗ ಧೈರ್ಯ ತುಂಬಿದ್ದರು ವಿರಾಟ್

ಆಸ್ಟ್ರೇಲಿಯ ಸರಣಿಯ ವೇಳೆ ಮೊಹಮ್ಮದ್ ಸಿರಾಜ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಂದೆ ನಿಧನರಾದ ಸುದ್ದಿಯನ್ನು ತಿಳಿದ ಮೊಹಮ್ಮದ್ ಸಿರಾಜ್ ಕುಸಿದಿದ್ದರಂತೆ, ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡದ ಕೋಚ್ ರವಿಶಾಸ್ತ್ರಿ ಇಬ್ಬರು ಮೊಹಮ್ಮದ್ ಸಿರಾಜ್‌ಗೆ ಧೈರ್ಯ ತುಂಬಿ ಸಮಾಧಾನ ಮಾಡಿ ಮತ್ತೆ ಕ್ರಿಕೆಟ್ ಆಡುವಂತೆ ಪ್ರೇರೇಪಿಸಿದ್ದರಂತೆ.

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧನಾಗು ಎಂದಿದ್ದರು ವಿರಾಟ್ ಕೊಹ್ಲಿ

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧನಾಗು ಎಂದಿದ್ದರು ವಿರಾಟ್ ಕೊಹ್ಲಿ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನವನ್ನು ನೀಡಿದರು. ಹೀಗೆ ಚೆನ್ನೈ ವಿರುದ್ಧದ ಪಂದ್ಯ ಮುಗಿದ ಬಳಿಕ ಸಿರಾಜ್ ಬಳಿ ಬಂದ ವಿರಾಟ್ ಕೊಹ್ಲಿ ಆತನ ಬೌಲಿಂಗ್ ಪ್ರದರ್ಶನವನ್ನು ಕೊಂಡಾಡಿದ್ದರು ಹಾಗೂ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧನಾಗು ಎಂದು ಕೊಹ್ಲಿ ಶುಭ ಕೋರಿದ್ದರು ಎಂದು ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 4, 2021, 21:13 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X