ಈತ ಸೆಹ್ವಾಗ್ ಹಾಗೂ ಗಿಲ್‌ಕ್ರಿಸ್ಟ್ ರೀತಿ ಎದುರಾಳಿಗಳಲ್ಲಿ ಭಯ ಹುಟ್ಟಿಸಬಲ್ಲ ಎಂದ ದಿನೇಶ್ ಕಾರ್ತಿಕ್

ಜೂನ್ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಈಗಾಗಲೇ ಸೌತಂಪ್ಟನ್ ತಲುಪಿದೆ.
ಚೆನ್ನಾಗಿ ಆಡದೇ ಇದ್ರೂ ಈ ಆಟಗಾರನಿಗೆ ಪದೇಪದೆ ಅವಕಾಶ ಕೊಟ್ಟಿತ್ತು ಆರ್‌ಸಿಬಿ!
ಜೂನ್ 18-22ರವರೆಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಕಾಮೆಂಟರಿ ಮಾಡಲು ಸುನಿಲ್ ಗವಾಸ್ಕರ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದು ಈಗಾಗಲೇ ಸೌತಂಪ್ಟನ್ ತಲುಪಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ವೀಕ್ಷಕವಿವರಣೆ ಮಾಡಲಿರುವ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಕುರಿತು ಮಾತನಾಡಿದ್ದು ಯುವ ಆಟಗಾರ ರಿಷಭ್ ಪಂತ್ ಬಗ್ಗೆ ಹಾಡಿ ಹೊಗಳಿದ್ದಾರೆ.
ಧೋನಿ ಯಶಸ್ವಿ ನಾಯಕತ್ವದ ಹಿಂದೆ ಇದೆ ಆ ಆಟಗಾರನ ನಿರಂತರ ಸಲಹೆ; ಸತ್ಯಾಂಶ ಬಿಚ್ಚಿಟ್ಟ ರುತುರಾಜ್ ಗಾಯಕ್ವಾಡ್
'ರಿಷಭ್ ಪಂತ್ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಕೆಲ ಸರಣಿಗಳಲ್ಲಿ ತಮ್ಮ ಅತ್ಯದ್ಭುತ ಆಟದಿಂದ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದರಲ್ಲಿಯೂ ಬಹುಮುಖ್ಯವಾಗಿ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಎದುರಾಳಿ ತಂಡದಲ್ಲಿ ಭಯವನ್ನು ಹುಟ್ಟು ಹಾಕುವಂತಹ ಗುಣವನ್ನು ಹೊಂದಿದ್ದಾರೆ. ಈ ಹಿಂದೆ ವೀರೇಂದ್ರ ಸೆಹ್ವಾಗ್ ಮತ್ತು ಗಿಲ್‌ಕ್ರಿಸ್ಟ್ ಪ್ರತಿಸ್ಪರ್ಧಿಗಳಲ್ಲಿ ಭಯವನ್ನು ಹುಟ್ಟು ಹಾಕುತ್ತಿದ್ದರು, ಅದೇ ರೀತಿ ಪಂತ್ ಕೂಡ ಪ್ರತಿಸ್ಪರ್ಧಿಗಳಲ್ಲಿ ಭಯ ಹುಟ್ಟಿಸುವಂತಹ ಆಟಗಾರನಾಗಿದ್ದಾರೆ' ಎಂದು ದಿನೇಶ್ ಕಾರ್ತಿಕ್ ಹೊಗಳಿದ್ದಾರೆ.

ಸೆಹ್ವಾಗ್ ಟೆಸ್ಟ್ ಪಂದ್ಯಗಳಲ್ಲಿಯೂ ಸ್ಫೋಟಕ ಆಟವನ್ನು ಆಡ್ತಿದ್ರು
ವಿರೇಂದ್ರ ಸೆಹ್ವಾಗ್ ಸ್ಫೋಟಕ ಆಟಗಾರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಸೆಹ್ವಾಗ್ ಸೀಮಿತ ಓವರ್ ಪಂದ್ಯಗಳಲ್ಲಿ ಮಾತ್ರವಲ್ಲದೆ ಟೆಸ್ಟ್ ಪಂದ್ಯಗಳಲ್ಲಿಯೂ ಸಹ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರು. ಟೆಸ್ಟ್ ಪಂದ್ಯಗಳಲ್ಲಿಯೂ ಭಯಭೀತರಾಗದೆ ಬ್ಯಾಟ್ ಬೀಸುವುದನ್ನು ಕಲಿಸಿಕೊಟ್ಟಿದ್ದೇ ವಿರೇಂದ್ರ ಸೆಹ್ವಾಗ್ ಎಂದು ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್ ಕೂಡ ಹೇಳಿಕೊಂಡಿದ್ದಾರೆ.

ಪಂತ್ ಕೂಡ ಸೆಹ್ವಾಗ್ ರೀತಿಯ ಸ್ಫೋಟಕ ಆಟಗಾರ ಎಂದು ಹಲವಾರು ಬಾರಿ ಕೇಳಿ ಬಂದಿದೆ
ರಿಷಭ್ ಪಂತ್ ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಯಭೀತರಾಗದೆ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರು. ಇದಾದ ಬಳಿಕ ತುಂಬಾ ಜನರು ರಿಷಭ್ ಪಂತ್ ಸೆಹ್ವಾಗ್ ರೀತಿಯ ಆಟಗಾರ, ಸೆಹ್ವಾಗ್ ರೀತಿಯೇ ಟೆಸ್ಟ್ ಪಂದ್ಯಗಳಲ್ಲಿಯೂ ಸಹ ಭಯಭೀತರಾಗದೆ ಬ್ಯಾಟ್ ಮಾಡುವಂತಹ ಸಾಮರ್ಥ್ಯವನ್ನು ರಿಷಭ್ ಪಂತ್ ಹೊಂದಿದ್ದಾರೆ ಎಂದು ಹೊಗಳಿದ್ದರು.

ಸೆಹ್ವಾಗ್ ಕೂಡ ರಿಷಭ್ ಪಂತ್ ಆಟವನ್ನು ಕೊಂಡಾಡಿದ್ದರು
ರಿಷಭ್ ಪಂತ್ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ವಿರೇಂದ್ರ ಸೆಹ್ವಾಗ್ ರಿಷಭ್ ಪಂತ್ ಆಟವನ್ನು ಕೊಂಡಾಡಿದ್ದರು. ರಿಷಭ್ ಪಂತ್ ಆಟ ನೋಡಿದರೆ ನನ್ನ ಆರಂಭದ ದಿನಗಳು ನೆನಪಾಗುತ್ತವೆ, ಪಂತ್ ಇದೇ ರೀತಿಯ ಆಟವನ್ನು ಮುಂದುವರಿಸಿದರೆ ಮುಂದೊಂದು ದಿನ ದೊಡ್ಡ ಸೂಪರ್‌ಸ್ಟಾರ್ ಆಗುತ್ತಾನೆ ಎಂದು ವಿರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications