ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್‌ಗೆ ತತ್ತರಿಸಿದ ಪಾಕಿಸ್ತಾನ
ಯುಎಇ, ನವೆಂಬರ್ 8: ಒಂದು ತಿಂಗಳ ಹಿಂದಷ್ಟೇ ಗಂಡು ಮಗುವಿನ ತಂದೆಯಾಗಿರುವ ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್, ಅದರ ನಂತರದ ಮೊದಲ ಪಂದ್ಯದಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.
ಬುಧವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಬೌಲ್ಟ್ ತಮ್ಮ ಎರಡನೆಯ ಓವರ್‌ನಲ್ಲಿಯೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬೌಲ್ಟ್ ಮತ್ತು ರಾಸ್ ಟೇಲರ್ ಅವರ ಅಮೋಘ ಪ್ರದರ್ಶನಗಳ ನೆರವಿನಿಂದ ನ್ಯೂಜಿಲೆಂಡ್ ಮತ್ತೊಂದು ಸಾಧನೆಯನ್ನೂ ಮಾಡಿದೆ. ಪಾಕಿಸ್ತಾನದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಸತತವಾಗಿ 12 ಪಂದ್ಯಗಳನ್ನು ಅದು ಗೆದ್ದಂತಾಗಿದೆ.
ಟಿ20 ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿದ್ದ ನ್ಯೂಜಿಲೆಂಡ್, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು ತಿರುಗೇಟು ನೀಡಿತು.

ರಾಸ್ ಟೇಲರ್-ಟಾಮ್ ಲಥಾಮ್ ಆಸರೆ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ಆರಂಭದಲ್ಲಿಯೇ ಜಾರ್ಜ್ ವರ್ಕರ್ ವಿಕೆಟ್ ಕಳೆದುಕೊಂಡಿತು. ಕಾಲಿನ್ ಮುನ್ರೋ ಮತ್ತು ಕೇನ್ ವಿಲಿಯಮ್ಸನ್ ಉತ್ತಮ ಆರಂಭ ಪಡೆದರೂ ಬಳಿಕ ಪೆವಿಲಿಯನ್ ಹಾದಿ ಹಿಡಿದರು.
ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ರಾಸ್ ಟೇಲರ್ ಮತ್ತು ಟಾಮ್ ಲಥಾಮ್ ನೆರವಾದರು. ಇಬ್ಬರೂ ನಾಲ್ಕನೆಯ ವಿಕೆಟ್‌ಗೆ 130 ರನ್ ಸೇರಿಸಿದರು. ನಂತರ ಮತ್ತೆ ವಿಕೆಟ್‌ಗಳನ್ನು ಕಳೆದುಕೊಂಡರೂ ಬಾಲಂಗೋಚಿಗಳ ಕಾಣಿಕೆ ನೆರವಿನಿಂದ 266 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು.
ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

ಮೂರನೇ ಓವರ್‌ನಲ್ಲಿ ಹ್ಯಾಟ್ರಿಕ್
ಪಾಕಿಸ್ತಾನದ ಆರಂಭ ತೀರಾ ಕಳಪೆಯಾಗಿತ್ತು. ತಂಡದ ಮೊತ್ತ ಎಂಟು ಆಗಿದ್ದಾಗ ಮೂರನೇ ಓವರ್‌ನ 2ನೇ ಎಸೆತದಲ್ಲಿ ಓಪನರ್ ಫಖರ್ ಜಮಾನ್ ಬೌಲ್ಡ್ ಆದರು. ನಂತರದ ಎಸೆತದಲ್ಲಿಯೇ ಬಾಬರ್ ಅಜಂ ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡು ಸ್ಲಿಪ್ ಕಡೆ ಚಿಮ್ಮಿತು. ಅದನ್ನು ರಾಸ್ ಟೇಲರ್ ಆಕರ್ಷಕವಾಗಿ ಹಿಡಿತಕ್ಕೆ ಪಡೆದುಕೊಂಡರು. ಮರು ಎಸೆತ ಮೊಹಮ್ಮದ್ ಹಫೀಜ್ ಅವರ ಬ್ಯಾಟನ್ನು ವಂಚಿಸಿ ಬ್ಯಾಡ್‌ಗೆ ಬಡಿಯಿತು. ಬೌಲ್ಟ್ ತಮ್ಮ ಚೊಚ್ಚಲ ಹ್ಯಾಟ್ರಿಕ್ ಅನ್ನು ಸಂಭ್ರಮಿಸಿದರು. ಎಲ್‌ಬಿಡಬ್ಲ್ಯೂ ತೀರ್ಪನ್ನು ಹಫೀಜ್ ಮೇಲ್ಮನವಿಗೆ ಹೋದೂ, ಅದು ಸಫಲವಾಗಲಿಲ್ಲ.
ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ
ಕೊನೆಯಲ್ಲಿ ಹೋರಾಟ
ಇಮಾಮ್ ಉಲ್ ಹಕ್ ಮತ್ತು ಶೋಯೆಬ್ ಮಲಿಕ್ ಅಲ್ಪ ಕಾಣಿಕೆಯ ಚೇತರಿಕೆ ನೀಡಿದರು. 85 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಇಮಾದ್ ವಾಸಿಂ ಆಸರೆಯಾದರು. ಇಬ್ಬರೂ 103 ರನ್‌ಗಳ ಜತೆಯಾಟ ನೀಡಿದರು. ಈ ಜೋಡಿಯನ್ನು ಡಿ ಗ್ರಾಂಡ್ ಹೋಮ್ ಬೇರ್ಪಡಿಸಿದರು. ಪಾಕಿಸ್ತಾನ 219 ರನ್‌ಗಳಿಗೆ ಸರ್ವಪತನಗೊಂಡು 47 ರನ್‌ಗಳಿಂದ ಶರಣಾಯಿತು.

ಚಕ್ಕಿಂಗ್ ಎಂದ ಟೇಲರ್
ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ರಾಸ್ ಟೇಲರ್, ಪಾಕ್ ಬೌಲರ್ ಮೊಹಮ್ಮದ್ ಹಫೀಜ್ ಅವರ ಬೌಲಿಂಗ್ ಶೈಲಿಯನ್ನು ಅಣಕಿಸಿದ್ದು ವಿವಾದ ಸೃಷ್ಟಿಸಿದೆ. ಹಫೀಜ್ ಚೆಂಡು ಎದುರಿಸಿದ ಟೇಲರ್, ಇದು ಚಕ್ಕಿಂಗ್ ಎಂದು ಸಂಜ್ಞೆ ಮಾಡಿದರು. ಇದು ಪಾಕ್ ನಾಯಕ ಸರ್ಫೆರಾಜ್ ಅಹ್ಮದ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ನನಗೆ ಅವಮಾನಕರ. ಅದು ಅವರ ಕೆಲಸವಲ್ಲ. ಅವರ ಕೆಲಸ ಬ್ಯಾಟಿಂಗ್ ಮಾಡುವುದು. ಅದರ ಮೇಲೆಯೇ ಗಮನ ಹರಿಸಿದರೆ ಒಳ್ಳೆಯದು. ಅವರ ನಡೆ ಕ್ರೀಡಾಸ್ಫೂರ್ತಿಯಿಂದ ಕೂಡಿರದ ಕಾರಣ ಅಂಪೈರ್‌ಗಳಿಗೆ ದೂರು ನೀಡಿದ್ದೇನೆ ಎಂದು ಸರ್ಫರಾಜ್ ಹೇಳಿದ್ದಾರೆ.
ಆಫ್ ಸ್ಪಿನ್ನರ್ ಮಹಮ್ಮದ್ ಹಫೀಜ್ ಅವರ ಬೌಲಿಂಗ್ ಶೈಲಿ ವಿವಾದಾತ್ಮಕ ಆಗಿದ್ದರಿಂದ ಬೌಲಿಂಗ್ ಮಾಡದಂತೆ ಕೆಲ ಸಮಯ ಅವರ ಮೇಲೆ ನಿರ್ಬಂಧ ಹೇರಾಗಿತ್ತು.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 266/9 (50) ರಾಸ್ ಟೇಲರ್ 80, ಟಾಮ್ ಲಥಾಮ್ 68, ಕಾಲಿನ್ ಮುನ್ರೋ 29, ಶದಬ್ ಖಾನ್ 38/4, ಶಹೀನ್ ಅಫ್ರಿದಿ 46/4.
ಪಾಕಿಸ್ತಾನ: 219/10 (47.2) ಸರ್ಫರಾಜ್ ಅಹ್ಮದ್ 64, ಇಮಾಮ್ ವಾಸಿಂ 50, ಇಮಾಮ್ ಉಲ್ ಹಕ್ 34, ಲಾಕಿ ಫರ್ಗ್ಯೂಸನ್ 36/3, ಟ್ರೆಂಟ್ ಬೌಲ್ಟ್ 54/3, ಕಾಲಿನ್ ಗ್ರಾಂಡ್ ಹೋಮ್ 40/2.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications