IPL ಮುಂದೆ ವಿಶ್ವದ ಬೇರೆ ಯಾವುದೇ ಟಿ20 ಲೀಗ್ ಲೆಕ್ಕಕ್ಕಿಲ್ಲ: ರಮೀಜ್ ರಾಜಾಗೆ ಆಕಾಶ್ ಚೋಪ್ರಾ ಉತ್ತರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ಗೆ ವಿಶ್ವದ ಯಾವುದೇ ಟಿ20 ಲೀಗ್ ಸರಿಸಾಟಿಯಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನುಡಿದಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥ ರಮೀಜ್ ರಾಜಾ ಪಾಕಿಸ್ತಾನ ಸೂಪರ್ ಲೀಗ್ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನ ನೀಡುತ್ತಿದೆ. ನಾವು ಡ್ರಾಫ್ಟ್ ಸಿಸ್ಟಂ ಬದಲು ಹರಾಜು ಪ್ರಕ್ರಿಯೆ ನಡೆಸಿದರೆ, ವಿದೇಶಿ ಆಟಗಾರರು ಐಪಿಎಲ್ ಬದಲು ಪಿಎಸ್‌ಎಲ್ ಅನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಟೀಕೆಗೆ ಒಳಗಾಗಿದ್ದರು.
ಇದಕ್ಕೆ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಉತ್ತರಿಸಿದ ಆಕಾಶ್ ಚೋಪ್ರಾ, ಐಪಿಎಲ್‌ನಲ್ಲಿ ಹರಾಜಾಗುವಷ್ಟೇ ಆಟಗಾರರು ಪಿಎಸ್‌ಎಲ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದಿದ್ದರು.
''ನೀವು ಡ್ರಾಫ್ಟ್‌ಗಳ ಬದಲಿಗೆ ಹರಾಜು ಮಾಡಿದರೂ ನೀವು ಐಪಿಎಲ್ ಹಿಂದಿಕ್ಕಲು ಆಗುವುದಿಲ್ಲ, ಪಿಎಸ್‌ಎಲ್‌ನಲ್ಲಿ 16 ಕೋಟಿಗೆ ಆಡುವ ಆಟಗಾರನನ್ನು ನೀವು ನೋಡುವುದಿಲ್ಲ. ಇದು ಸಂಭವಿಸುವುದಿಲ್ಲ, ನಿಮ್ಮ ಮಾರುಕಟ್ಟೆ ಡೈನಾಮಿಕ್ಸ್ ಆಗಲು ಅವಕಾಶ ನೀಡುವುದಿಲ್ಲ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯಲ್ ಲೀಗ್ ಅನ್ನು ಬೇರೆ ಯಾವುದೇ ಟಿ20 ಲೀಗ್ ಸರಿಗಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವ ಆಕಾಶ್ ಚೋಪ್ರಾ ''ಬಹಳ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕ್ರಿಸ್ ಮೋರಿಸ್ ಅವರು ಕಳೆದ ಬಾರಿ ಆಡಿದಾಗ ಅವರು ಒಂದು ಎಸೆತಕ್ಕೆ ತೆಗೆದುಕೊಳ್ಳುವ ಸಂಬಳವು, ಇತರ ಲೀಗ್‌ಗಳಲ್ಲಿ ಆಟಗಾರರ ಸಂಬಳಕ್ಕಿಂತ ಹೆಚ್ಚು ದುಬಾರಿಯಾಗಿದೆ. ಇದು ಪಿಎಸ್‌ಎಲ್, ಬಿಬಿಎಲ್ ಆಗಿರಲಿ, ದಿ ಹಂಡ್ರೆಡ್ ಅಥವಾ ಸಿಪಿಎಲ್ ಟೂರ್ನಿಯು ಐಪಿಎಲ್‌ನೊಂದಿಗೆ ಸ್ಪರ್ಧಿಸಲು ಅಥವಾ ನಿಮ್ಮನ್ನು ಹೋಲಿಸಲು ಸಾಧ್ಯವೇ? ಇದು ಸ್ವಲ್ಪ ತಪ್ಪಾದ ತೀರ್ಮಾನವೇ?" ಎಂದು ಪ್ರಶ್ನಿಸಿದ್ದಾರೆ.

ಐಪಿಎಲ್‌ಗೆ ಸವಾಲಾಕಿದ್ದ ಪಿಸಿಬಿ ಅಧ್ಯಕ್ಷ
ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ವಿದೇಶಿ ಆಟಗಾರರು ಪಿಎಸ್‌ಎಲ್ ಬಿಟ್ಟು ಐಪಿಎಲ್ ಆಡಲು ಹೇಗೆ ಹೋಗುತ್ತಾರೆ ನೋಡೋಣ ಎಂದು ಸವಾಲು ಹಾಕಿದ್ದರು.
''ನಾವೀಗ ಆರ್ಥಿಕವಾಗಿ ಸ್ವತಂತ್ರರಾಗಲು ಹೊಸ ಮಾರ್ಗ ಕಂಡುಕೊಳ್ಳಬೇಕಿದೆ. ಈಗ ಐಸಿಸಿ ಮತ್ತು ಪಿಎಸ್‌ಎಲ್‌ನಿಂದ ಮಾತ್ರ ಹಣ ಬರುತ್ತಿದೆ. ಮುಂದಿನ ವರ್ಷದಿಂದ ಐಪಿಎಲ್‌ನಂತೆ ಪಿಎಸ್‌ಎಲ್‌ಗೂ ಆಟಗಾರರ ಹರಾಜು ನಡೆಸಲಿದ್ದೇವೆ. ಈ ಬಗ್ಗೆ ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸುತ್ತೇವೆ. ತಂಡಗಳು ಖರ್ಚು ಮಾಡಬಹುದಾದ ಮೊತ್ತವನ್ನು ಏರಿಕೆ ಮಾಡಲಿದ್ದೇವೆ. ಆಗ ನೋಡೋಣ ಪಿಎಸ್‌ಎಲ್ ಬಿಟ್ಟು ಐಪಿಎಲ್ ಆಡಲು ಯಾರು ಹೋಗ್ತಾರೆ ಅಂತ'' ಎಂದು ರಾಜಾ ಹೇಳಿಕೆ ನೀಡಿದ್ದರು.
ಇಷ್ಟೆಲ್ಲಾ ಪಿಎಸ್‌ಎಲ್ ಬಗ್ಗೆ ದೊಡ್ಡದಾಗಿ ಮಾತನಾಡಿದ ಪಿಸಿಬಿ ಅಧ್ಯಕ್ಷರ ಪಾಕಿಸ್ತಾನ ಸೂಪರ್ ಲೀಗ್ ಮತ್ತು ಐಪಿಎಲ್ ನಡುವಿನ ವ್ಯತ್ಯಾಸ ಎಷ್ಟಿದೆ ಎಂಬುದನ್ನ ಈ ಕೆಳಗೆ ನೋಡಿ.
ಕೊಹ್ಲಿ ಫಾರ್ಮ್ ವೈಫಲ್ಯ: ಅಕಾಡೆಮಿಗೆ ವಾಪಸ್ ಬಾ ಎಂದ ಕೊಹ್ಲಿ ಬಾಲ್ಯದ ಕೋಚ್

ಐಪಿಎಲ್‌ನಲ್ಲಿವೆ 10 ತಂಡಗಳು
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಬರೋಬ್ಬರಿ 10 ತಂಡಗಳು ಭಾಗವಹಿಸುತ್ತಿವೆ. ಇದುವರೆಗೂ ಎಂಟು ತಂಡಗಳು ಯಶಸ್ವಿಯಾಗಿ ಮುನ್ನಡೆದಿದ್ದು, ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಗೊಂಡ ಹೊಸ ತಂಡಗಳಾಗಿವೆ.
ಆದ್ರೆ 2015ರಲ್ಲಿ ಪ್ರಾರಂಭಗೊಂಡ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇದುವರೆಗೆ ಆರು ತಂಡಗಳಷ್ಟೇ ಆಡುತ್ತಿವೆ.

ಐಪಿಎಲ್ ವರ್ಸಸ್ ಪಿಎಸ್‌ಎಲ್ ಆದಾಯ
ಐಪಿಎಲ್ ಮೂಲಕ ಬಿಸಿಸಿಐ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂಪಾಯಿ ಆದಾಯವನ್ನ ಅಧಿಕೃತ ಪ್ರಸಾರಕ ಸ್ಟಾರ್‌ಸ್ಪೋರ್ಟ್ಸ್ ಮೂಲಕ ಪಡೆಯುತ್ತದೆ.
ಆದ್ರೆ ಪಿಎಸ್‌ಎಲ್ ಟೂರ್ನಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 900 ಮಿಲಿಯನ್ ಪಾಕಿಸ್ತಾನ ರೂಪಾಯಿ (38.46 ಕೋಟಿ) ಪಡೆಯಲಿದೆ.
ಕಾಮೆಂಟೇಟರ್ ಆಗಿ ಐಪಿಎಲ್‌ಗೆ ಮರಳಿದ ರೈನಾ; ಕನ್ನಡ ಸಹಿತ 80 ಸದಸ್ಯರ ಕಾಮೆಂಟರಿ ತಂಡ ಬಿಡುಗಡೆ

ಆಟಗಾರರ ವೇತನ
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀನಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್ ಬರೋಬ್ಬರಿ 17 ಕೋಟಿ ರೂಪಾಯಿಗೆ ಹರಾಜಾದರು. ಕೆಲವು ಭಾರತೀಯ ಆಟಗಾರರು ಮತ್ತು ವಿದೇಶಿ ಆಟಗಾರರು 10 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ತಂಡಗಳನ್ನ ಸೇರಿಕೊಂಡಿದ್ದಾರೆ.
ಅದೇ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅತಿ ಹೆಚ್ಚು ಬೆಲೆ ಬಾಳುವ ಆಟಗಾರರಿಗೆ ಪ್ಲಾಟಿನಮ್ ಕ್ಯಾಟಗರಿ ನೀಡಲಾಗಿದೆ. ಇದರಲ್ಲಿ ಗರಿಷ್ಠ USD 1,70,000 ಪಡೆಯುತ್ತಾರೆ, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 1.74 ಕೋಟಿ ರೂಪಾಯಿಗಳು. ಈ ಕ್ಯಾಟಗರಿಯಲ್ಲಿ ಬಾಬರ್ ಅಜಮ್, ಕಿರಾನ್ ಪೊಲಾರ್ಡ್‌ನಂತಹ ಆಟಗಾರರಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಒಟ್ಟು ತಂಡಗಳ ಪರ್ಸ್ ಬರೋಬ್ಬರಿ 900 ಕೋಟಿ ರೂಪಾಯಿಗಳಷ್ಟಿತ್ತು, ಆದ್ರೆ ಪಾಕಿಸ್ತಾನ ಈಗಲೂ ಕೂಡ ಡ್ರಾಫ್ಟ್ ಸಿಸ್ಟಂ ಹೊಂದಿದೆ.


ಐಪಿಎಲ್ 2022ರ ಪ್ರಶಸ್ತಿ ಮೊತ್ತ ಎಷ್ಟು?
ಐಪಿಎಲ್ 2022ರ ಟೂರ್ನಿ ಗೆದ್ದವರಿಗೆ ಬರೋಬ್ಬರಿ 20 ಕೋಟಿ ರೂಪಾಯಿ ನೀಡಲಾಗುವುದು. ಅದೇ ಪಾಕಿಸ್ತಾನ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ 3.5 ಕೋಟಿ ರೂಪಾಯಿ ದಕ್ಕಲಿದೆ.
ಇನ್ನು ಐಪಿಎಲ್ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ಸಿಕ್ಕಿದ್ರೆ, ಪಾಕಿಸ್ತಾನದಲ್ಲಿ ನೀಡಲಾಗುವ ಮೊತ್ತ 1.5 ಕೋಟಿ ರೂಪಾಯಿ.
ಐಪಿಎಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್: 10 ಲಕ್ಷ
ಪಿಎಸ್‌ಎಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್: 14.1 ಲಕ್ಷ
ಐಪಿಎಲ್ ಗರಿಷ್ಠ ರನ್ ಸ್ಕೋರರ್: 10 ಲಕ್ಷ
ಪಿಎಸ್‌ಎಲ್ ಗರಿಷ್ಠ ರನ್ ಸ್ಕೋರರ್: 3.75 ಲಕ್ಷ
ಐಪಿಎಲ್ ಗರಿಷ್ಠ ವಿಕೆಟ್ ಟೇಕರ್ : 10 ಲಕ್ಷ
ಪಿಎಸ್‌ಎಲ್ ಗರಿಷ್ಠ ವಿಕೆಟ್ ಟೇಕರ್: 3.75 ಲಕ್ಷ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications