PAK vs AFG: ಹ್ಯಾರಿಸ್ ರೌಫ್ 5-ವಿಕೆಟ್ ಸಾಧನೆ; ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತ ಅಫ್ಘಾನ್
ಮಂಗಳವಾರ, ಬುಧವಾರ ಆಗಸ್ಟ್ 22ರಂದು ಶ್ರೀಲಂಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ಧ 142 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 47.1 ಓವರ್‌ಗಳಲ್ಲಿ 201 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇನ್ನು ಈ ಸುಲಭದ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 19.2 ಓವರ್‌ಗಳಲ್ಲಿ ಕೇವಲ 59 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು ಹೀನಾಯವಾಗಿ ಸೋಲು ಅನುಭವಿಸಿತು.
ಪಾಕಿಸ್ತಾನ ತಂಡದ ಪರ ಆರಂಭಿಕರಾದ ಫಖರ್ ಜಮಾನ್ 2 ರನ್ ಗಳಿಸಿ ಔಟಾದರೆ, ಇನ್ನೊಬ್ಬ ಆರಂಭಿಕ ಇಮಾಮ್-ಉಲ್-ಹಕ್ 94 ಎಸೆತಗಳಲ್ಲಿ 61 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನು ನಾಯಕ ಬಾಬರ್ ಅಜಂ ಸೊನ್ನೆ ಸುತ್ತಿದರು.

ಪಾಕಿಸ್ತಾನ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ನಂತರ ಬಂದ ಮೊಹಮ್ಮದ್ ರಿಜ್ವಾನ್ 22 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡಂತೆ 21 ರನ್ ಗಳಿಸಿದರೆ, ಅಘಾ ಸಲ್ಮಾನ್ 7 ರನ್, ಇಫ್ತಿಕಾರ್ ಅಹ್ಮದ್ 30 ರನ್, ಶಾದಾಬ್ ಖಾನ್ 39 ರನ್ ಮತ್ತು ಕೊನೆಯಲ್ಲಿ ನಸೀಮ್ ಶಾ 18 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಮುಜೀಬ್ ಉರ್ ರೆಹಮಾನ್ 10 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ನಬಿ 2 ವಿಕೆಟ್, ರಶೀದ್ ಖಾನ್ 2 ವಿಕೆಟ್ ಪಡೆದರು. ಉಳಿದಂತೆ ಫಜಲಕ್ ಫಾರೂಕಿ, ರಹ್ಮತ್ ಶಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.

202 ರನ್‌ಗಳ ಸುಲಭದ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಕೂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಪಾಕಿಸ್ತಾನ ವೇಗಿಗಳ ವಿರುದ್ಧ ನಿರುತ್ತರರಾದರು. ರಹಮಾನುಲ್ಲಾ ಗುರ್ಬಾಜ್ ಕೇವಲ 18 ರನ್ ಗಳಿಸಿ ಅಫ್ಘಾನಿಸ್ತಾನ ತಂಡದ ಪರ ಗರಿಷ್ಠ ಸ್ಕೋರರ್ ಆದರು. ಅಜ್ಮತುಲ್ಲಾ ಒಮರ್ಜಾಯ್ 16 ರನ್ ಗಳಿಸಿದ್ದು ಬಿಟ್ಟರೆ ಉಳಿದವರಾರು ಎರಡಂಕಿ ಮೊತ್ತ ದಾಟಲಿಲ್ಲ.
ಪಾಕಿಸ್ತಾನ ಪರ ಬೌಲಿಂಗ್‌ನಲ್ಲಿ ಹ್ಯಾರಿಸ್ ರೌಫ್ ಐದು ವಿಕೆಟ್ ಗೊಂಚಲು ಪಡೆದರ ಹೊರತಾಗಿ, ಶಾಹೀನ್ ಅಫ್ರಿದಿ ಎರಡು ವಿಕೆಟ್ ಪಡೆದರೆ, ನಸೀಮ್ ಶಾ ಮತ್ತು ಶಾದಾಬ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್ ಬಲ ಮುರಿದ ಹ್ಯಾರಿಸ್ ರೌಫ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications