PAK v NED: ನೆದರ್ಲೆಂಡ್ಸ್ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಪಾಕಿಸ್ತಾನ

ರೋಟರ್ಡ್ಯಾಮ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 16 ರನ್‌ಗಳಿಂದ ಗೆದ್ದು ಬೀಗಿದ್ದು, ನೆದರ್ಲೆಂಡ್ಸ್ ವಿರೋಚಿತ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 314ರನ್ ಕಲೆಹಾಕಿತು. ಪರಿಣಾಮ 315ರನ್‌ಗಳ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಪ್ರಬಲ ಹೋರಾಟ ನೀಡಿ ಸೋಲನ್ನ ಕಂಡಿದೆ.
ನೆದರ್ಲೆಂಡ್ಸ್ ಪವರ್ ಪ್ಲೇ ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಓಪನರ್ ವಿಕ್ರಮ್‌ಜಿತ್ ಸಿಂಗ್ 65 ರನ್‌ಗಳಿಸಿ ಔಟಾದ್ರು. ಮಧ್ಯಮ ಕ್ರಮಾಂಕದಲ್ಲಿ ಟಾಮ್ ಕೂಪರ್ ತನ್ನ ಉತ್ತಮ ಫಾರ್ಮ್ ಅನ್ನು ಮುಂದುವರಿಸಿ 54 ಎಸೆತಗಳಲ್ಲಿ 65 ರನ್ ಕಲೆಹಾಕಿದರು.
ಮತ್ತೊಂದೆಡೆ ಮ್ಯಾಕ್ ಓವ್ಡ್ 1, ವೆಸ್ಲಿ ಬರೆಸ್ಸಿ 2, ಬಾಸ್ ಡಿ ಲೀಡ್ 16 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ವಿಕ್ರಮ್‌ಜಿತ್ ಸಿಂಗ್ 65 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಟಾಮ್ ಕೂಪರ್ ಮತ್ತು ನಾಯಕ ಸ್ಕಾಟ್ ಎಡ್ವರ್ಡ್ಸ್ ಅಜೇಯ 71ರನ್ ಕಲೆಹಾಕಿ ತಂಡವನ್ನ ಗೆಲುವಿನ ದಡ ತಲುಪಿಸುವ ಪ್ರಯತ್ನ ನಡೆಸಿದರು. ಆದ್ರೆ ನೆದರ್ಲೆಂಡ್ಸ್ ಪಾಕ್ ಬೌಲಿಂಗ್ ಎದುರು ಗೆಲುವಿನ ಗೆರೆ ದಾಟಲು ಸಾಧ್ಯವಾಗಲಿಲ್ಲ. 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕಿ 16ರನ್‌ಗಳ ಅಂತರದಲ್ಲಿ ಸೋಲನ್ನ ಅನುಭವಿಸಿದರು.
ಪಾಕಿಸ್ತಾನ ಪರ ಹ್ಯಾರಿಸ್ ರೌಫ್, ನಸೀಮ್ ಶಾ ತಲಾ ಮೂರು ವಿಕೆಟ್ ಪಡೆದ್ರೆ, ಮೊಹಮ್ಮದ್ ವಾಸಿಂ ಜ್ಯೂನಿಯರ್ ಹಾಗೂ ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇನ್ನು ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಓಪನರ್ ಫಖಾರ್ ಜಮಾನ್ ಅಮೋಘ ಶತಕ ಹಾಗೂ ನಾಯಕ ಬಾಬರ್ ಅಜಮ್ ಅರ್ಧಶತಕ ಹಾಗೂ ಶದಾಬ್ ಖಾನ್ ಸ್ಫೋಟಕ ಆಟದಿಂದಾಗಿ 300ರ ಗಡಿ ದಾಟಿತು. ಪಾಕ್ ಪರ ಫಖಾರ್ ಜಮಾನ್ 109, ಬಾಬರ್ ಅಜಮ್ 74, ಶದಾಬ್ ಖಾನ್ ಅಜೇಯ 48ರನ್, ಅಘಾ ಸಲ್ಮಾನ್ ಅಜೇಯ 27 ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು.
ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 314 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಲು ವಿಫಲಗೊಂಡ ಆತಿಥೇಯ ನೆದರ್ಲೆಂಡ್ಸ್ ಸೋಲನ್ನ ಒಪ್ಪಿಕೊಂಡಿತು. ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶತಕ ಸಿಡಿಸಿ ಪಾಕ್ ತಂಡದ ಗೆಲುವಿಗೆ ಕಾರಣನಾದ ಫಖಾರ್ ಜಮಾನ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದ್ರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ನೆದರ್ಲೆಂಡ್ಸ್
ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಟಾಮ್ ಕೂಪರ್, ಬಾಸ್ ಡಿ ಲೀಡ್, ಸ್ಕಾಟ್ ಎಡ್ವರ್ಡ್ಸ್ (ನಾಯಕ ಮತ್ತು ವಿಕೆಟ್ ಕೀಪರ್), ತೇಜಾ ನಿಡಮನೂರು, ಲೋಗನ್ ವ್ಯಾನ್ ಬೀಕ್, ಟಿಮ್ ಪ್ರಿಂಗಲ್, ಆರ್ಯನ್ ದತ್, ವೆಸ್ಲಿ ಬ್ಯಾರೆಸಿ, ವಿವಿಯನ್ ಕಿಂಗ್ಮಾ
ಬೆಂಚ್ : ಮೂಸಾ ಅಹ್ಮದ್, ಶರ್ನಾಜ್ ಅಹ್ಮದ್, ಶರ್ನಾಜ್ ಕ್ಲೇನ್
ಪಾಕಿಸ್ತಾನ
ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ),ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಖುಷ್ದಿಲ್ ಶಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಹಾರಿಸ್ ರೌಫ್, ನಸೀಮ್ ಶಾ
ಬೆಂಚ್: ಶಹೀನ್ ಅಫ್ರಿದಿ, ಮೊಹಮ್ಮದ್ ಮಹಮ್ಮದ್ ಹಾರಿಸ್, ಜಹಿದ್ ಶಹನವಾಜ್ ದಹಾನಿ, ಅಬ್ದುಲ್ಲಾ ಶಫೀಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications