PAK vs WI: 2ನೇ ಏಕದಿನ ಪಂದ್ಯದಲ್ಲಿ ಪಾಕ್‌ಗೆ ಭಾರೀ ಗೆಲುವು, ಸರಣಿ ಕೈವಶ

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಅಬ್ಬರದ ಬೌಲಿಂಗ್ ನಡೆಸುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 120ರನ್‌ಗಳ ಅಮೋಘ ಗೆಲುವು ಸಾಧಿಸಿದೆ. ಜೊತೆಗೆ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸಿದೆ.
ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ 276 ರನ್‌ಗಳ ಗುರಿ ನೀಡಿದ್ದ ಪಾಕಿಸ್ತಾನ, ಎದುರಾಳಿ ತಂಡವನ್ನ ಕೇವಲ 155ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭರ್ಜರಿ ಜಯ ಕಂಡಿತು. ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಅವಲಂಬಿತವಾದಂತೆ ಕಾಣುತ್ತಿರುವ ವಿಂಡೀಸ್ ಆಟಗಾರರು 32.2 ಓವರ್‌ಗಳಲ್ಲಿಯೇ ಆಲೌಟ್ ಆಗಿದ್ದು ನಿಜಕ್ಕೂ ಆಶ್ಚರ್ಯಕ್ಕೆ ಎಡೆ ಮಾಡಿತು.

ಪಾಕ್ ತಂಡಕ್ಕೆ ಮತ್ತೆ ಆಧಾರವಾದ ಬಾಬರ್, ಇಮಾಮ್
ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಫಖಾರ್ ಜಮಾನ್ ಕೇವಲ 17ರನ್‌ಗಳಿಗೆ ಆ್ಯಂಡರ್ಸಸ್ ಫಿಲಿಪ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಇಮಾಮ್ ಉಲ್ ಹಕ್ ಮತ್ತು ನಾಯಕ ಬಾಬರ್ ಅಜಮ್ ಮತ್ತೊಮ್ಮೆ ತಂಡಕ್ಕೆ ಆಧಾರವಾಗಿದ್ದಾರೆ.
ಇಮಾಮ್ ಉಲ್ ಹಕ್ 72 ಎಸೆತಗಳಲ್ಲಿ 72 ರನ್ ಕಲೆಹಾಕುವ ಮೂಲಕ ತಂಡಕ್ಕೆ ಉತ್ತಮ ಇನ್ನಿಂಗ್ಸ್ ಕಟ್ಟಿ ಕೊಟ್ಟರು. ಇವರ ಆಟದಲ್ಲಿ ಆರು ಬೌಂಡರಿ ಸಹ ಒಳಗೊಂಡಿತ್ತು. ಇನ್ನು ನಾಯಕ ಬಾಬರ್ ಅಜಮ್ 93 ಎಸೆತಗಳಲ್ಲಿ 77 ರನ್ ಕಲೆಹಾಕುವ ಮೂಲಕ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ರು.
ಎರಡನೇ ವಿಕೆಟ್‌ಗೆ 120ರನ್ ಜೊತೆಯಾಟವಾಡಿದ ಈ ಜೋಡಿ ಆರಂಭಿಕ ಆಘಾತದಿಂದ ಪಾಕ್ ತಂಡವನ್ನ ಚೇತರಿಸಿದರು. ಕೆಳಕ್ರಮಾಂಕದಲ್ಲಿ ಶದಾಬ್ ಖಾನ್ 22, ಕುಶ್ದಿಲ್ 22ರನ್‌ಗಳ ಕೊಡುಗೆಯಿಂದ ಪಾಕಿಸ್ತಾನ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 275 ರನ್ ಕಲೆಹಾಕಿತು.
ಟಿ20 ವಿಶ್ವಕಪ್‌ನಲ್ಲಿ ಭಾರತದ ಫಿನಿಶರ್ ಸ್ಥಾನ ತುಂಬಲಿದ್ದಾರೆ ಈ ಆರ್‌ಸಿಬಿ ಬ್ಯಾಟರ್; ರಿಕಿ ಪಾಂಟಿಂಗ್

ಸತತ ಆರನೇ ಬಾರಿಗೆ ಅರ್ಧಶತಕ ದಾಖಲಿಸಿದ ಬ್ಯಾಟರ್ಸ್
ಈ ಪಂದ್ಯದಲ್ಲಿ ಬಾಬರ್ ಅಜಮ್ ಮತ್ತು ಇಮಾಮ್ ಉಲ್ ಹಕ್ ಸತತ ಆರನೇ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ 50+ ಸ್ಕೋರ್ ಮಾಡಿದ್ದಾರೆ. ಅದ್ರಲ್ಲೂ ಬಾಬರ್ ಅಜಮ್ ಸತತ ಮೂರು ಶತಕ ಸಿಡಿಸಿದ ಬಳಿಕ ನಾಲ್ಕನೇ ಶತಕ ಅವಕಾಶ ಕಳೆದುಕೊಂಡರು.
77ರನ್‌ಗೆ ಔಟಾದ ಬಾಬರ್ ಶ್ರೀಲಂಕಾದ ಲೆಜೆಂಡ್ ಬ್ಯಾಟರ್ ಕುಮಾರ್ ಸಂಗಕ್ಕಾರ ಹೆಸರಿನಲ್ಲಿದ್ದ ಸತತ ನಾಲ್ಕು ಶತಕ ದಾಖಲೆಯನ್ನ ಸರಿಗಟ್ಟುವ ಅವಕಾಶ ಕಳೆದುಕೊಂಡರು. ಆದ್ರೆ ಭರ್ಜರಿ ಫಾರ್ಮ್‌ನಲ್ಲಿರುವ ಉಭಯ ಬ್ಯಾಟರ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮೌನ ಮುರಿದ ಪಾಂಟಿಂಗ್; ಸತತ ವೈಫಲ್ಯಗಳಿಗೆ ಕಾರಣ ತಿಳಿಸಿದ ರಿಕಿ!

ಎಲೈಟ್ ಲಿಸ್ಟ್ ಸೇರಿದ ಬಾಬರ್ ಮತ್ತು ಇಮಾಮ್
ಏಕದಿನ ಕ್ರಿಕೆಟ್‌ನಲ್ಲಿ ಸತತ ಆರನೇ ಅರ್ಧಶತಕ ದಾಖಲಿಸುವ ಮೂಲಕ ವಿಶೇಷ ದಾಖಲೆಯ ಪಟ್ಟಿಗೆ ಬಾಬರ್ ಮತ್ತು ಇಮಾಮ್ ಉಲ್ ಹಕ್ ಸೇರಿದ್ದಾರೆ. ಈ ಮೊದಲು ಈ ಸಾಧನೆಯನ್ನ ಮಾರ್ಕ್ ವಾ, ಗಾರ್ಡನ್ ಗ್ರೀನಿಡ್ಜ್, ಆಂಡ್ರ್ಯೂ ಜೋನ್ಸ್, ಮೊಹಮ್ಮದ್ ಯೂಸುಫ್, ಕ್ರಿಸ್ ಗೇಲ್, ಶಾಯ್ ಹೋಪ್, ಪಾಲ್ ಸ್ಟಿರ್ಲಿಂಗ್, ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ ಏಕದಿನ ಪಂದ್ಯಗಳಲ್ಲಿ 6 ಸತತ 50 ಪ್ಲಸ್ ಸ್ಕೋರ್‌ಗಳೊಂದಿಗೆ ಈ ಸಾಧನೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕೇವಲ 155ರನ್‌ಗಳಿಗೆ ವೆಸ್ಟ್ ಇಂಡೀಸ್ ಆಲೌಟ್
ಏಕದಿನ ಕ್ರಿಕೆಟ್ ಆಡುವುದನ್ನೇ ಮರೆತಂತಿರುವ ವೆಸ್ಟ್ ಇಂಡೀಸ್ ತಂಡವು ಎದುರಾಳಿ ತಂಡದ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿ 32.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 155ರನ್‌ಗಳಿಗೆ ಆಲೌಟ್ ಆಗಿದೆ. ವಿಂಡೀಸ್ ಪರ ಶಮರ್ ಬ್ರೂಕ್ಸ್ 42, ಕೈಲ್ ಮೇಯರ್ಸ್ 33, ನಿಕೋಲಸ್ ಪೂರನ್ 25ರನ್‌ಗಳಿಸಿದ್ದೇ ಹೆಚ್ಚು.
ಪಾಕ್ ಪರ ಮೊಹಮ್ಮದ್ ನವಾಜ್ 4, ಮೊಹಮ್ಮದ್ ವಾಸಿಂ ಜೂ. 3, ಶದಾಬ್ ಖಾನ್ 2, ಶಾಹಿನ್ ಅಫ್ರಿದಿ 1 ವಿಕೆಟ್ ಪಡೆದರು.
ಈಗಾಗಲೇ ಟಿ20 ಸರಣಿಯಲ್ಲಿ ವೈಟ್‌ವಾಶ್ ಆಗಿರುವ ವಿಂಡೀಸ್ ಪಡೆ, ಏಕದಿನ ಪಂದ್ಯದಲ್ಲಿ ಸತತ ಸೋಲನ್ನ ಕಂಡಿದ್ದು, ಕೊನೆಯ ಏಕದಿನ ಪಂದ್ಯದಲ್ಲಾದರೂ ಗೆಲುವು ಸಾಧಿಸುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications