For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧದ ODI, T20 ಸರಣಿಗೆ ತಂಡ ಪ್ರಕಟಿಸಿದ ಪಾಕಿಸ್ತಾನ

Pakistan team

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಸರಣಿಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಿಂಗಳ ಕೊನೆಯಲ್ಲಿ ಡಿಸೆಂಬರ್ 13 ರಿಂದ ಡಿಸೆಂಬರ್ 22 ರವರೆಗೆ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ.

ಈ ಅವಧಿಯಲ್ಲಿ, ತಂಡಗಳು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಮೂರು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ ಮತ್ತು ಸರಣಿಯ ಎಲ್ಲಾ ಪಂದ್ಯಗಳನ್ನು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ.

ಮೊದಲ ಟಿ20 ಅಂತರಾಷ್ಟ್ರೀಯ ಸರಣಿಯು ಈ ಸೋಮವಾರ, ಡಿಸೆಂಬರ್ 13, ಎರಡನೇ ಟಿ20 ಪಂದ್ಯ ಮಂಗಳವಾರ ಡಿಸೆಂಬರ್ 14 ಮತ್ತು ಮೂರನೇ ಪಂದ್ಯ ಗುರುವಾರ, ಡಿಸೆಂಬರ್ 16 ರಂದು ನಡೆಯಲಿದೆ. ಏಕದಿನ ಅಂತರಾಷ್ಟ್ರೀಯ ಸರಣಿಯು ಡಿಸೆಂಬರ್ 18 ರ ಶನಿವಾರದಿಂದ ಪ್ರಾರಂಭವಾಗಲಿದೆ. ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಸೋಮವಾರ, ಡಿಸೆಂಬರ್ 20 ರಂದು ಮತ್ತು ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಡಿಸೆಂಬರ್ 22 ರಂದು ಆಯೋಜಿಸಲಾಗಿದೆ.

ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ರಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ಸೂಪರ್ 12 ಹಂತದಲ್ಲಿ 5 ಪಂದ್ಯಗಳನ್ನು ಗೆದ್ದಿದೆ ಮತ್ತು ಗ್ರೂಪ್‌ ಸ್ಟೇಜ್‌ನಲ್ಲಿ ಅಜೇಯವಾಗಿತ್ತು. ಆದ್ರೆ ಸೆಮಿಫೈನಲ್‌ನಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋತಿತು.

ಮತ್ತೊಂದೆಡೆ, ವೆಸ್ಟ್ ಇಂಡೀಸ್ ರಾಷ್ಟ್ರೀಯ ಕ್ರಿಕೆಟ್ ತಂಡವು ಕಳಪೆ ಫಲಿತಾಂಶವನ್ನು ತೋರಿದ್ದು, ಕೇವಲ ಒಂದು ಪಂದ್ಯ ಗೆದ್ದು ಲೀಗ್ ಹಂತದಲ್ಲೇ ಹೊರಬಿದ್ದಿತು.

ಏತನ್ಮಧ್ಯೆ, ವಿಶ್ವಕಪ್ ನಂತರ, ಪಾಕಿಸ್ತಾನವು ಬಾಂಗ್ಲಾದೇಶದೊಂದಿಗೆ ಟಿ20 ಸರಣಿಯಲ್ಲಿ ಭರ್ಜರಿ ಗೆಲುವು ಕಂಡು 3-0 ರಿಂದ ಪ್ರಾಬಲ್ಯ ಸಾಧಿಸಿತು. ಇದರ ನಂತರ ಪಾಕ್‌ಗೆ ಆಗಮಿಸುವ ವಿಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಪಾಕಿಸ್ತಾನ ತಂಡದ ಸ್ಕ್ವಾಡ್ ಈ ಕೆಳಗಿದೆ.

ಪಾಕಿಸ್ತಾನ ಓಡಿಐ ಸ್ಕ್ವಾಡ್
ಬಾಬರ್ ಅಜಮ್ (ನಾಯಕ) ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್, ವಾಸಿಮ್ ಜನ್ ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾದಿರ್, ಸೌದ್ ಶಕೀಲ್, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ.

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada

ಪಾಕಿಸ್ತಾನ ಟಿ20 ಸ್ಕ್ವಾಡ್‌
ಬಾಬರ್ ಅಜಮ್ (ನಾಯಕ) ಶಾದಾಬ್ ಖಾನ್ (ಉಪನಾಯಕ) ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ಶಾಹೀನ್ ಶಾ ಆಫ್ರಿದಿ, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ಮೊಹಮ್ಮದ್ ರಿಜ್ವಾನ್) ದಹಾನಿ, ಉಸ್ಮಾನ್ ಖಾದಿರ್

Story first published: Friday, December 3, 2021, 9:34 [IST]
Other articles published on Dec 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+