ಮುಗ್ಗರಿಸಿದ ಆಸ್ಟ್ರೇಲಿಯಾ: ಪಾಕಿಸ್ತಾನಕ್ಕೆ 373 ರನ್ ಜಯ, ಸರಣಿ ವಶ
ಅಬುದಾಬಿ, ಅಕ್ಟೋಬರ್ 19: ಯುಎಇಯಲ್ಲಿ ನಡೆಯುತ್ತಿರುವ ಪಾಕಿಸ್ತಾನ-ಆಸ್ಟ್ರೇಲಿಯಾ ಸರಣಿಯ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 373 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಟೆಸ್ಟ್‌ಗಳ ಸರಣಿಯನ್ನು 1-0 ಇಂದ ವಶಪಡಿಸಿಕೊಂಡಿತು.
ಮೊದಲನೆಯ ಟೆಸ್ಟ್‌ನಲ್ಲಿ ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆಸ್ಟ್ರೇಲಿಯಾ, ಈ ಟೆಸ್ಟ್‌ನಲ್ಲಿ ಅದೇ ಹೋರಾಟದ ಮನೋಭಾವ ಪ್ರದರ್ಶಿಸುವಲ್ಲಿ ವಿಫಲವಾಯಿತು.
ಮೊದಲ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದ ಆಸ್ಟ್ರೇಲಿಯಾ, ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ತಡವರಿಸಿತು. ಪ್ರಮುಖ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಗಾಯಗೊಂಡಿದ್ದು, ಗಾಯದ ಮೇಲೆ ಉಪ್ಪು ಸವರಿದಂತಾಯಿತು.
537 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ, ವೇಗಿ ಮೊಹಮ್ಮದ್ ಅಬ್ಬಾಸ್ ಅವರ ದಾಳಿಗೆ ತತ್ತರಿಸಿತು. ಇನ್ನೂ ಒಂದು ದಿನದ ಆಟ ಬಾಕಿ ಇರುವಾಗಲೇ ಗುರಿ ತಲುಪಲಾಗದೆ ಕಾಂಗರೂ ಪಡೆ ಹೆಣಗಾಡಿತು.
ಮೊದಲ ಇನ್ನಿಂಗ್ಸ್‌ನಂತೆಯೇ ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಪಾಕ್ ಬೌಲರ್‌ಗಳನ್ನು ಎದುರಿಸಲು ಕಾಂಗರೂ ಪಡೆಯಲ್ಲಿ ಉತ್ತರವಿರಲಿಲ್ಲ. ಎರಡೂ ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದ ಯಾವ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ದಾಖಲಿಸುವಲ್ಲಿ ಸಫಲವಾಗಲಿಲ್ಲ.
ಪ್ರತಿರೋಧ ತೋರದ ಕಾಂಗರೂ
ಆರೋನ್ ಫಿಂಚ್-ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶ್ಚಗ್ನೆ-ಮಿಚೆಲ್ ಸ್ಟಾರ್ಕ್ ಜೋಡಿ ಅರ್ಧಶತಕದ ಜತೆಯಾಟ ನೀಡಿದ್ದು ಹೊರತುಪಡಿಸಿದರೆ ಆಸ್ಟ್ರೇಲಿಯಾ ತಂಡದಿಂದ ಯಾವುದೇ ಪ್ರತಿರೋಧ ಕಂಡುಬರಲಿಲ್ಲ. ಪಾಕ್ ಬೌಲಿಂಗ್‌ಗೆ ಸಂಪೂರ್ಣ ಸೋತು ತಲೆ ಬಾಗಿತು. ಇದರಿಂದ ಎರಡು ಟೆಸ್ಟ್ ಸರಣಿ ಪಾಕಿಸ್ತಾನ ವಶವಾಯಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಡ್ರಾ ಸಾಧಿಸಿಕೊಂಡಿತ್ತು.
ಏಕದಿನ ಸರಣಿ: ಕಪಿಲ್ ದಾಖಲೆ ಮುರಿಯಲು ಜಡೇಜ ಸಜ್ಜು
ಅಬ್ಬಾಸ್ ಹತ್ತು ವಿಕೆಟ್
ಮೊದಲ ಇನ್ನಿಂಗ್ಸ್‌ನಲ್ಲಿ 33 ರನ್ ನೀಡಿ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾದ ಕುಸಿತಕ್ಕೆ ಕಾರಣವಾಗಿದ್ದ ವೇಗಿ ಮೊಹಮ್ಮದ್ ಅಬ್ಬಾಸ್, ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಆಸೀಸ್ ತಂಡವನ್ನು ಕಾಡಿದರು. 62 ರನ್ ನೀಡಿ 5 ವಿಕೆಟ್ ಕಬಳಿಸಿ ಸೋಲಿಗೆ ಕಾರಣವಾದರು. ಕಳೆದ ಹತ್ತು ವರ್ಷಗಳಲ್ಲಿ ಟೆಸ್ಟ್ ಒಂದರಲ್ಲಿ ಹತ್ತು ವಿಕೆಟ್ ಪಡೆದ ಮೊದಲ ಪಾಕಿಸ್ತಾನದ ವೇಗದ ಬೌಲರ್ ಎನಿಸಿಕೊಂಡರು. ಪಾಕ್ ಗೆಲುವಿಗೆ ಮಹತ್ವದ ಕಾಣಿಗೆ ನೀಡಿದ ಅವರು ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮ್ಯಾಚ್ ಫಿಕ್ಸಿಂಗ್ ಆರೋಪ ಒಪ್ಪಿಕೊಂಡ ಪಾಕಿಸ್ತಾನಿ ಸ್ಪಿನ್ನರ್

ಖವಾಜಾಗೆ ಗಾಯ
ಎಡಗಾಲಿನ ಗಾಯಕ್ಕೆ ಒಳಗಾಗಿರುವ ಉಸ್ಮಾನ್ ಖವಾಜಾ, ಎರಡನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಬಾರಿಸಿ ಆಸ್ಟ್ರೇಲಿಯಾ ಡ್ರಾ ಸಾಧಿಸುವಲ್ಲಿ ಖವಾಜಾ ಮಹತ್ವದ ಪಾತ್ರ ವಹಿಸಿದ್ದರು. ಎರಡನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರಿಂದ ನಿರೀಕ್ಷತ ಆಟ ಕಂಡುಬರಲಿಲ್ಲ. ಆದರೆ, ಎರಡನೆಯ ಇನ್ನಿಂಗ್ಸ್‌ನಲ್ಲಿ ಅವರು ಬ್ಯಾಟಿಂಗ್‌ಗೆ ಇಳಿಯದೆ ಇದ್ದಿದ್ದು, ಆಸ್ಟ್ರೇಲಿಯಾಕ್ಕೆ ತೀವ್ರ ಹೊಡೆತ ನೀಡಿತು.
ಮೀನಖಂಡದ ಗಾಯಕ್ಕೆ ತುತ್ತಾಗಿರುವ ಖವಾಜಾ, ಎರಡನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಯಸಿದ್ದರೂ ನಿಯಮದ ಪ್ರಕಾರ ಅವರು ಏಳನೇ ಕ್ರಮಾಂಕಕ್ಕಿಂತ ಮುನ್ನ ಬ್ಯಾಟಿಂಗ್‌ಗೆ ಬರುವಂತೆ ಇರಲಿಲ್ಲ.

ಸಂಕ್ಷಿಪ್ತ ಸ್ಕೋರ್ ಕಾರ್ಡ್
ಪಾಕಿಸ್ತಾನ ಮೊದಲ ಇನ್ನಿಂಗ್ಸ್: 282/10 (81): ಫಖರ್ ಜಮಾನಾ 94, ಸರ್ಫರಾಜ್ ಖಾನ್ 94, ಯಾಸಿರ್ ಶಾ 28, ನಥಾನ್ ಲಯಾನ್ 78/4, ಮಾರ್ನಸ್ ಲಬುಶ್ಚಗ್ನೆ 45/3, ಮಿಚೆಲ್ ಸ್ಟಾರ್ಕ್ 37/2
ಎರಡನೆಯ ಇನ್ನಿಂಗ್ಸ್: 400/9 (120): ಬಾಬರ್ ಅಜಂ 99, ಸರ್ಫರಾಜ್ ಅಹ್ಮದ್ 81, ಫಖರ್ ಜಮಾನ್ 66, ಅಜರ್ ಅಲಿ 64, ನಥಾನ್ ಲಯಾನ್ 135/4, ಮಾರ್ನಸ್ ಲಬುಶ್ಚಗ್ನೆ 74/2
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 145/10 (50.4): ಆರೋನ್ ಫಿಂಚ್ 39, ಮಿಚೆಲ್ ಸ್ಟಾರ್ಕ್ 34, ಮಾರ್ನಸ್ ಲಬುಶ್ಚಗ್ನೆ 25, ಮೊಹಮ್ಮದ್ ಅಬ್ಬಾಸ್ 33/5, ಬಿಲಾಲ್ ಆಸಿಫ್ 23/3
ಎರಡನೆಯ ಇನ್ನಿಂಗ್ಸ್: 164/10 (49.4) ಆರೋನ್ ಫಿಂಚ್ 31, ಮಾರ್ನಸ್ ಲಬುಶ್ಚಗ್ನೆ 43, ಮಿಚೆಲ್ ಸ್ಟಾರ್ಕ್ 28, ಮೊಹಮ್ಮದ್ ಅಬ್ಬಾಸ್ 62/5, ಯಾಸಿರ್ ಶಾ 45/3.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications