ಗ್ಲೋಬಲ್ ಟಿ20: ಕಿಟಕಿ ಗಾಜುಗಳ ಪುಡಿ ಮಾಡಿದ ಪಾಕ್ ಕ್ರಿಕೆಟಿಗ-ವಿಡಿಯೋ

ಒಟ್ಟಾವಾ, ಆಗಸ್ಟ್ 10: ಗ್ಲೋಬಲ್ ಟಿ20 ಕೆನಾಡಾ ಟೂರ್ನಿಯಲ್ಲಿ ಪಾಕಿಸ್ತಾನ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿವೆ. ಆಗಸ್ಟ್ 8ರ ಗುರುವಾರದ ಪಂದ್ಯದಲ್ಲಿ ಮಲಿಕ್ ಸಿಕ್ಸ್‌ಗಳಿಗೆ ಕಿಟಕಿ ಗಾಜುಗಳು ಮುರಿದುಬಿದ್ದವು.
ಒಂಟಾರಿಯೋದ ಬ್ರಾಂಪ್ಟನ್‌ನಲ್ಲಿರುವ ಸಿಎಎ ಸೆಂಟರ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಬ್ರಾಂಪ್ಟನ್ ವೂಲ್ವ್ಸ್ ಮತ್ತು ವ್ಯಾಂಕೋವರ್ ನೈಟ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಶೋಯೆಬ್ ಮಲ್ಲಿಕ್, ವ್ಯಾಂಕೋವರ್ ಪರ 26 ಎಸೆತಗಳಿಗೆ 46 ರನ್ ಸಿಡಿಸಿದರು.
ಮಲಿಕ್ ಮೊದಲ ಸಿಕ್ಸ್‌ಗೆ ಕಿಟಕಿ ಗಾಜು ಪುಡಿಯಾಗಿದ್ದು 13ನೇ ಓವರ್‌ನಲ್ಲಿ. ಇಶ್ ಸೋಧಿ ಎಸೆತಕ್ಕೆ ಮಲಿಕ್ ಓವರ್ ಕವರ್‌ನತ್ತ ಚೆಂಡು ಅಟ್ಟಿದರು. 68 ಮೀಟರ್ ದೂರ ಚಲಿಸಿದ ಚೆಂಡು 6 ರನ್‌ಗಳನ್ನು ತಂದಿತಲ್ಲದೆ, ಎದುರು ಸಿಕ್ಕ ಕಿಟಕಿ ಗಾಜನ್ನು ಮುರಿದು ಹಾಕಿತು.
ಅನಂತರ ವಹಾಬ್ ರಿಯಾಝ್ ಓವರ್‌ನಲ್ಲೂ ಮಲಿಕ್ ಬಾರಿಸಿದ ಸಿಕ್ಸ್, ಗಾಜನ್ನು ಹಾಳುಗೆಡವಿತು. ಮಲಿಕ್ ಬ್ಯಾಟ್ ತಾಗಿದ ಚೆಂಡು ಬ್ಯಾಕ್‌ವರ್ಡ್ ಪಾಯಿಂಟ್‌ನತ್ತ ಚಿಮ್ಮಿ ಮತ್ತೊಂದು ಕಿಟಕಿ ಗಾಜನ್ನು ಮುರಿಯಿತು. ಪಂದ್ಯದ ವೇಳೆ ಮಳೆ ಬಂದಿದ್ದರಿಂದ ಆಟವನ್ನು 16 ಓವರ್‌ಗೆ ಮೊಟಕುಗೊಳಿಸಲಾಯ್ತು. ವ್ಯಾಂಕೋವರ್ ನೈಟ್ಸ್ (ಡಿಎಲ್‌ಎಸ್ ನಿಯಮದಲ್ಲಿ) 77 ರನ್ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications