ಹೊಸ ಕೇಂದ್ರೀಯ ಒಪ್ಪಂದದಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಸಂಭಾವನೆ ಏರಿಕೆ; ಆದರೂ, ಭಾರತದ ಆಟಗಾರರಿಗೆ ಸಮವಲ್ಲ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹೊಸ ಕೇಂದ್ರೀಯ ಒಪ್ಪಂದಗಳ ಪರಿಚಯದೊಂದಿಗೆ ಪಾಕಿಸ್ತಾನ ಕ್ರಿಕೆಟ್ ಆಟಗಾರರು ತಮ್ಮ ಆಟವನ್ನು ಬದಲಾಯಿಸುವ ಹಂತದಲ್ಲಿದ್ದಾರೆ.
ವಿದೇಶಿ ಟಿ20 ಲೀಗ್‌ಗಳಲ್ಲಿ ಪಾಕಿಸ್ತಾನ ಆಟಗಾರರ ಭಾಗವಹಿಸುವಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಅದನ್ನು ಲೆಕ್ಕಿಸದೆಯೇ, ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಅಫ್ರಿದಿಯಂತಹ ಪ್ರಮುಖ ಆಟಗಾರರು ಮಾಸಿಕ ಪಾಕಿಸ್ತಾನಿ ರೂಪಾಯಿ ಲೆಕ್ಕದಲ್ಲಿ 4.5 ಮಿಲಿಯನ್ (ಅಂದಾಜು 15,900 ಯುಎಸ್ ಡಾಲರ್) ಗಳಿಸಲಿದ್ದಾರೆ. ಇದು ಕಳೆದ ವರ್ಷದ ಉನ್ನತ ಮಟ್ಟದ ಒಪ್ಪಂದಕ್ಕಿಂತ ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಹೊಸ ಕೇಂದ್ರೀಯ ಒಪ್ಪಂದಗಳು ಕಳೆದ ವರ್ಷದ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಆಟಗಾರರ ನಡುವಿನ ವಿಭಾಗವನ್ನು ತೆಗೆದುಹಾಕುತ್ತದೆ. ನಾಲ್ಕು ವಿಭಿನ್ನ ಆಟಗಾರರ ವಿಭಾಗಗಳಿಗೆ ಹಿಂತಿರುಗಿದ್ದು, ನಾಯಕ ಮತ್ತು ಎಲ್ಲ ಮಾದರಿಯ ಆಟಗಾರರಾಗಿ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ಎ ವರ್ಗದಲ್ಲಿರುತ್ತಾರೆ.
ಬಿ ವರ್ಗದ ಆಟಗಾರರು ಸುಮಾರು ಪಾಕಿಸ್ತಾನಿ ರೂಪಾಯಿ ಲೆಕ್ಕದಲ್ಲಿ 3 ಮಿಲಿಯನ್ (ಅಂದಾಜು 10,600 ಯುಎಸ್ ಡಾಲರ್) ಸ್ವೀಕರಿಸಲಿದ್ದಾರೆ. ಇನ್ನು ಸಿ ಮತ್ತು ಡಿ ವರ್ಗದಲ್ಲಿರುವ ಆಟಗಾರರು ಪಾಕಿಸ್ತಾನಿ ರೂಪಾಯಿ ಲೆಕ್ಕದಲ್ಲಿ 0.75-1.5 ಮಿಲಿಯನ್ (ಅಂದಾಜು 2,650-5,300 ಯುಎಸ್ ಡಾಲರ್) ಪಡೆಯುತ್ತಾರೆ.

ಒಟ್ಟಾರೆಯಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಪಾಕಿಸ್ತಾನ ಕ್ರಿಕೆಟಿಗರ ಆದಾಯ ಗಣನೀಯವಾಗಿ ಏರಿಕೆಯಾಗಿದೆ. ವಿಶೇಷವಾಗಿ ಎ ವಿಭಾಗದಲ್ಲಿ. ಐಸಿಸಿಯ ಹೊಸ ಆದಾಯ ಹಂಚಿಕೆ ಮಾದರಿಯು ಮುಂದಿನ ವರ್ಷ ಜಾರಿಗೆ ಬರುವ ಮುನ್ನವೇ ಪಿಸಿಬಿ ಇದನ್ನು ಜಾರಿಗೆ ತರಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾರ್ಷಿಕ ಗಳಿಕೆಯು ಪಾಕಿಸ್ತಾನಿ ರೂಪಾಯಿ ಲೆಕ್ಕದಲ್ಲಿ 9.6 ಶತಕೋಟಿ (ಅಂದಾಜು 34 ಮಿಲಿಯನ್ ಯುಎಸ್ ಡಾಲರ್) ಮೀರುವ ನಿರೀಕ್ಷೆಯಿದೆ. ಇದು ಹಿಂದಿನ ಐಸಿಸಿ ಆದಾಯ ಹಕ್ಕುಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಮುಂದಿನ ವರ್ಷ ಪಾಕಿಸ್ತಾನದ ಆಟಗಾರರು ಭಾಗವಹಿಸಲು ಅನುಮತಿಸಲಾಗುವ ವಿದೇಶಿ ಟಿ20 ಲೀಗ್‌ಗಳ ಸಂಖ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಅಗ್ರ ಎರಡು ವಿಭಾಗಗಳಲ್ಲಿನ ಆಟಗಾರರಿಗೆ ಪಿಎಸ್‌ಎಲ್ ಆಚೆ ಒಂದು ಲೀಗ್‌ಗೆ ಮಾತ್ರ ಅವಕಾಶ ನೀಡಲಾಗುವುದು. ಇನ್ನು ಕೆಳಗಿನ ವಿಭಾಗದಲ್ಲಿರುವವರು ಬಹು ಲೀಗ್‌ಗಳಲ್ಲಿ ಭಾಗವಹಿಸಬಹುದು.
ಭಾರತೀಯ ಕ್ರಿಕೆಟಿಗರಿಗೆ ಸಿಗುವ ಮೊತ್ತವೆಷ್ಟು?
ಇದೇ ವೇಳೆ ಭಾರತೀಯ ಕ್ರಿಕೆಟಿಗರಿಗೆ ಹೋಲಿಸಿದರೆ, ಪಾಕಿಸ್ತಾನ ತಂಡದ ಆಟಗಾರರಿಗೆ ಈಗಲೂ ಕಡಿಮೆ ಸಂಭಾವನೆ ಸಿಗುತ್ತಿದೆ. ಬಿಸಿಸಿಐ ನಾಲ್ಕು ಗ್ರೇಡ್‌ಗಳನ್ನು ಹೊಂದಿದ್ದು, ಎ+, ಎ, ಬಿ ಮತ್ತು ಸಿ ಗ್ರೇಡ್‌ಗಳಾಗಿವೆ.
A+ ಗ್ರೇಡ್ ಆಟಗಾರರೆಂದರೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ. ಇವರು ಬಿಸಿಸಿಐನಿಂದ ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಇದು ಹೊಸ ಪಿಸಿಬಿ ಒಪ್ಪಂದಗಳ ಪ್ರಕಾರ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ಪಡೆಯುವುದಕ್ಕಿಂತ ಸುಮಾರು ಆರು ಪಟ್ಟು ಹೆಚ್ಚಳವಾಗಿದೆ.
ಗ್ರೇಡ್ ಎ ಆಟಗಾರರು 5 ಕೋಟಿ ರೂಪಾಯಿ ಪಡೆಯುತ್ತಾರೆ ಮತ್ತು ಗ್ರೇಡ್ ಬಿ ಆಟಗಾರರು ವರ್ಷಕ್ಕೆ 3 ಕೋಟಿ ರೂಪಾಯಿ ಪಡೆಯುತ್ತಾರೆ. ಸಿ ಗ್ರೇಡ್ ಆಟಗಾರರು ತಲಾ ಒಂದು ಕೋಟಿ ರೂಪಾಯಿ ಪಡೆಯುತ್ತಾರೆ.
ಬಿಸಿಸಿಐನ ವೇತನ ಒಪ್ಪಂದಗಳು ವಿಶ್ವದಲ್ಲಿಯೇ ದೊಡ್ಡ ಮೊತ್ತವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬ್ಯಾಂಕ್ ಖಾತೆಗೆ ಬರುವ ಐಸಿಸಿ ಹಣದ ಪಾಲು, ಜಾಹೀರಾತು ಮತ್ತು ಮಾಧ್ಯಮ ಹಕ್ಕುಗಳಿಂದ ಬರುವ ಹಣವೇ ಆಟಗಾರರಿಗೆ ದೊಡ್ಡ ಸಂಭಾವನೆ ನೀಡಲು ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications