
ಲಂಡನ್, ಮೇ 31: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ 1992ರ ಚಾಂಪಿಯನ್ಸ್ ಪಾಕಿಸ್ತಾನ ಅತ್ಯಂತ ಹೀನಾಯ ಆರಂಭ ಕಂಡಿದೆ.
ಶುಕ್ರವಾರ ನಾಟಿಂಗ್‌ಹ್ಯಾಮ್‌ನಲ್ಲಿರುವ ಟ್ರೆಂಟ್‌ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 2 ಬಾರಿ ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಎದುರು 7 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ಇನ್ನು ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ, ಕೇವಲ 105 ರನ್‌ಗಳಿಗೆ ಆಲ್‌ಔಟ್ ಆಯಿತು, ಇದು ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ದಾಖಲಿಸಿದ 2ನೇ ಅತ್ಯಂತ ಕಡಿಮೆ ಮೊತ್ತವಾಗಿದೆ.
ಪಾಕ್ ವಿರುದ್ಧ ಗೆದ್ದ ಬಳಿಕ ವಿಂಡೀಸ್ ನಾಯಕ ಹೋಲ್ಡರ್ ಹೇಳಿದ್ದಿದು
ಅಂದಹಾಗೆ ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ದಾಖಲಿಸುರುವ ಕಡಿಮೆ ಮೊತ್ತವಾದರೂ ಎಷ್ಟೂ? 1992ರಲ್ಲಿ ಪಾಕ್ ತಂಡ ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 74 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆದರೂ ಆ ಟೂರ್ನಿಯಲ್ಲಿ ಇಮ್ರಾನ್ ಖಾನ್ ಸಾರಥ್ಯದಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು.
ಶುಕ್ರವಾರ ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಒಶೇನ್ ಥಾಮಸ್ 27ಕ್ಕೆ 4, ಜೇಸನ್ ಹೋಲ್ಡರ್ 42ಕ್ಕೆ 3 ಮತ್ತು ಆಂಡ್ರೆ ರಸೆಲ್ 4ಕ್ಕೆ 2 ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾದರು.
ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ದಾಖಲಿಸಿರುವ ಅತ್ಯಂತ ಕಡಿಮೆ ಮೊತ್ತಗಳ ವಿವರ ಇಲ್ಲದೆ.
1. ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ 74 ರನ್‌ಗಳಿಗೆ ಆಲ್‌ಔಟ್ (1992ರ ವಿಶ್ವಕಪ್).
2. ವೆಸ್ಟ್ ಇಂಡೀಸ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ 105ಕ್ಕೆ ಆಲ್‌ಔಟ್ (2019ರ ವಿಶ್ವಕಪ್).
3. ಆಸ್ಟ್ರೇಲಿಯಾ ವಿರುದ್ಧ ಲಂಡನ್‌ನಲ್ಲಿ ನಡೆದ ಪಂದ್ಯದಲ್ಲಿ 132ಕ್ಕೆ ಆಲ್‌ಔಟ್ (1999ರ ವಿಶ್ವಕಪ್).
4. ಐರ್ಲೆಂಡ್ ವಿರುದ್ಧ ಕಿಂಗ್ಸ್‌ಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ 132 ರನ್‌ಗಳಿಗೆ ಆಲ್‌ಔಟ್ (2007ರ ವಿಶ್ವಕಪ್) .
5. ಇಂಗ್ಲೆಂಡ್ ವಿರುದ್ಧ ಕೇಪ್ ಟೌನ್‌ನಲಲ್ಇ ನಡೆದ ಪಂದ್ಯದಲ್ಲಿ 134ಕ್ಕೆ ಆಲ್‌ಔಟ್ (2003ರ ವಿಶ್ವಕಪ್).