Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2023ರ ಏಷ್ಯಾ ಕಪ್‌ಗೂ ಮುನ್ನ ನೆರೆಯ ದೇಶದೊಂದಿಗೆ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ ಪಾಕಿಸ್ತಾನ

ಬುಧವಾರ, ಜುಲೈ 19ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಬಹು ನಿರೀಕ್ಷಿತ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಇದಕ್ಕೂ ಮುನ್ನ ಪಾಕಿಸ್ತಾನ ತಂಡ ತನ್ನ ನೆರೆಯ ದೇಶದೊಂದಿಗೆ ಏಕದಿನ ಸರಣಿ ಆಡಲು ಸಿದ್ಧವಾಗಿದೆ.

ಶ್ರೀಲಂಕಾದ ಡೈಲಿ ಮಿರರ್ ವರದಿಯಂತೆ, 2023ರ ಏಷ್ಯಾ ಕಪ್‌ ಪಂದ್ಯಾವಳಿಗೆ ಮೊದಲು ಆಗಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾದಲ್ಲಿ ಆಯೋಜಿಸಲು ಸಜ್ಜಾಗಿದೆ.

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅನ್ನು ಸಂಪರ್ಕಿಸಲಾಗಿದೆ ಮತ್ತು ಅವರ ಕ್ರೀಡಾಂಗಣ ಬಾಡಿಗೆ ಪಡೆದು ಒಂದೇ ಸ್ಥಳದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಯೋಜಿಸಲು ಪ್ರಾಥಮಿಕ ಒಪ್ಪಂದವನ್ನು ನೀಡಿದೆ ಎಂದು ವರದಿಯಾಗಿದೆ.

Pakistan vs Afghanistan

ಡೈಲಿ ಮಿರರ್ ಪ್ರಕಾರ, "ಅಫ್ಘಾನಿಸ್ತಾನವು ಯಾವುದೇ ಕ್ರೀಡಾಂಗಣವನ್ನು ಹೊಂದಿಲ್ಲದ ಕಾರಣ, ಶ್ರೀಲಂಕಾದಲ್ಲಿ ಆಡುವುದರಿಂದ ಏಷ್ಯಾಕಪ್ ಮತ್ತು ಮುಂದಿನ ಏಕದಿನ ವಿಶ್ವಕಪ್‌ಗೆ ಉತ್ತಮ ತಯಾರಿಯಾಗಿದೆ," ಎಂದು ಹೇಳಿದೆ.

"ನಾವು ಈ ಪಂದ್ಯಗಳನ್ನು ಯುಎಇ ಅಥವಾ ಕತಾರ್‌ನಲ್ಲಿ ಆಯೋಜಿಸಲು ಉತ್ಸುಕರಾಗಿದ್ದೇವು. ಆದರೆ ಅಲ್ಲಿನ ಹವಾಮಾನದ ತೀವ್ರತೆಯನ್ನು ಪರಿಗಣಿಸಿ ಅದು ಕಾರ್ಯಸಾಧ್ಯವಾಗಿಲ್ಲ," ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮೂಲಗಳು ತಿಳಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಯುಎಇನ ಶಾರ್ಜಾದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಳಿಯಾದವು. ಇದರಲ್ಲಿ ಅಫ್ಘಾನಿಸ್ತಾನ 2-1 ಅಂತರದಿಂದ ಸರಣಿ ಜಯ ಗಳಿಸಿತು.

Pakistan vs Afghanistan

ಏಷ್ಯಾ ಕಪ್ 2023ರ ಪಾಕಿಸ್ತಾನ ತಂಡದ ವೇಳಾಪಟ್ಟಿ

ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜನೆಯಾಗಲಿದೆ. ಆಗಸ್ಟ್ 30ರಂದು ಪಾಕಿಸ್ತಾನ ಮುಲ್ತಾನ್‌ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದರೆ, ಫೈನಲ್ ಪಂದ್ಯ ಸೆಪ್ಟಂಬರ್ 17ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ.

2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ಎಸಿಸಿ ಪ್ರಕಟಿಸಿದ 2023ರ ಏಷ್ಯಾ ಕಪ್ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಬುಧವಾರ, ಆಗಸ್ಟ್ 30ರಂದು ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ.

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ತನ್ನ 2023ರ ಏಷ್ಯಾ ಕಪ್ ಅಭಿಯಾನದ ಎರಡನೇ ಪಂದ್ಯವನ್ನು ಶನಿವಾರ, ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ವಿರುದ್ಧ ಆಡಲಿದೆ.

Story first published: Thursday, July 20, 2023, 22:36 [IST]
Other articles published on Jul 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+