
ಕೊನೆಯ ಓವರ್‌ನಲ್ಲಿ ಬೇಕಿತ್ತು 19 ರನ್!
ಅಂತಿಮ ಓವರ್‌ನಲ್ಲಿ 6 ಎಸೆತಗಳಲ್ಲಿ 19 ರನ್‌ಗಳ ಅವಶ್ಯಕತೆ ಇತ್ತು. ಪಂಜಾಬ್ ಪರ ಆಲ್‌ರೌಂಡರ್ ಓಡಿಯನ್ ಸ್ಮಿತ್ ಬೌಲಿಂಗ್ ಇಳಿದರು. ಹೀಗಿದ್ದ ವೇಳೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ರನೌಟ್‌ಗೆ ಬಲಿಯಾದ್ರು 18 ಎಸೆತಗಳಲ್ಲಿ 27 ರನ್‌ಗಳಿಸಿ ಉತ್ತಮವಾಗೇ ಆಡ್ತಿದ್ದ ಪಾಂಡ್ಯ ರನೌಟ್ ಆಗಿದ್ದು ತಂಡವನ್ನ ಸೋಲಿನ ದವಡೆಗೆ ದೂಕಿತು.
ಹಾರ್ದಿಕ್ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಆಗಮಿಸಿದ ಎಡಗೈ ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ ಕ್ರೀಸ್‌ನಲ್ಲಿ ಮ್ಯಾಜಿಕ್ ಅನ್ನೇ ಸೃಷ್ಟಿಸಿಬಿಟ್ಟರು. ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡಿದ್ದ ತೆವಾಟಿಯಾ, ಅತ್ಯಂತ ತಾಳ್ಮೆಯಾಗಿಯೇ ಕಾಣಿಸಿಕೊಂಡರು. ಮೂರನೇ ಎಸೆತಗಳಲ್ಲಿ ಡೇವಿಡ್ ಮಿಲ್ಲರ್ ಬೌಂಡರಿ ಸಿಡಿಸಿದ್ರು. ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಂಡು ತೆವಾಟಿಯಾ ಸ್ಟ್ರೈಕ್ ಬಿಟ್ಟರು.

ಗೆಲುವಿಗೆ 2 ಎಸೆತಗಳಲ್ಲಿ 2 ಸಿಕ್ಸರ್ ಬೇಕಿತ್ತು!
ಗುಜರಾತ್ ಟೈಟನ್ಸ್ ಈ ಪಂದ್ಯ ಗೆಲ್ಲಲೇ ಬೇಕಾದ್ರೆ ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳು ಬೇಕಿತ್ತು. ಇದು ಒಂದು ರೀತಿಯ ಅಸಾಧ್ಯದ ಟಾಸ್ಕ್ ಆಗಿ ಕಾಣಿಸಿಕೊಂಡಿತ್ತು. ಆದ್ರೆ ಕಳೆದ ಸೀಸನ್‌ಗಳಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಿ ಮಿಂಚಿದ್ದ ತೆವಾಟಿಯಾ, ಐದನೇ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್ ಕಡೆಗೆ ಸಿಕ್ಸರ್ ಸಿಡಿಸಿದ್ರು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ ಸಿಕ್ಸರ್ ಬೇಕಿತ್ತು. ಆದ್ರೆ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನ ಹುಸಿ ಮಾಡದ ರಾಹುಲ್ ತೆವಾಟಿಯಾ ಕೊನೆಯ ಎಸೆತದಲ್ಲೂ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಬೌಲರ್ ಓಡಿಯನ್ ಸ್ಮಿತ್ ಓವರ್ ಥ್ರೋ ಮಾಡದಿದ್ರೆ, ತೆವಾಟಿಯ ಸ್ಟ್ರೈಕ್‌ಗೆ ಬರುತ್ತಲೇ ಇರಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ಸ್ಮಿತ್ ಎರಡು ಸಿಕ್ಸರ್ ಬಿಟ್ಟುಕೊಟ್ಟು ಪಂಜಾಬ್ ಟೀಂ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರು.
GT vs PBKS: ಲಾಸ್ಟ್ ಬಾಲ್ ಥ್ರಿಲ್ಲರ್! ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್‌ಗೆ ರೋಚಕ ಗೆಲುವು
ತೆವಾಟಿಯಾ ಬ್ಯಾಟಿಂಗ್‌ಗೆ ಲಾರ್ಡ್ ಎಂದ ಹೊಗಳಿದ ವೀರೇಂದ್ರ ಸೆಹ್ವಾಗ್
ರಾಹುಲ್ ತೆವಾಟಿಯಾ ಕೊನೆಯ ಕ್ಷಣಗಳಲ್ಲಿ ಮಾಡಿದ ಮ್ಯಾಜಿಕ್‌ಗೆ ಇಡೀ ಕ್ರಿಕೆಟ್ ಲೋಕವೇ ಭೇಷ್ ಎಂದು ಕರೆದಿದೆ. ಹಲವು ಮಾಜಿ ಕ್ರಿಕೆಟಿಗರು ತೆವಾಟಿಯಾ ಸಿಕ್ಸರ್ ಹೊಡೆಯುವ ರೀತಿಗೆ ಸೆಲ್ಯೂಟ್ ಎಂದಿದ್ದಾರೆ. ಟೀಂ ಇಂಡಿಯಾ ಸ್ಪೋಟಕ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಕೂಡ ತೆವಾಟಿಯಾ ಆಟಕ್ಕೆ ಮೆಚ್ಚಿ ಟ್ವೀಟ್ ಮಾಡಿದ್ದು,
''ಲಾರ್ಡ್ ತೆವಾಟಿಯಾ , ಪಂಜಾಬ್ ಡಗೌಟ್‌ನಲ್ಲಿ ಆತನ ಪ್ರತಿಮೆ ಇಡಬೇಕಾಗಿದೆ. 2 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ ಸ್ಮಿತ್‌ರಿಂದ ಅವರಿಂದ ಓವರ್‌ಥ್ರೋ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ'' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಕೊನೆಯ ಎಸೆತದಲ್ಲಿ 5/6 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಗೆಲ್ಲಿಸಿದ ಪ್ಲೇಯರ್ಸ್(IPL)
ಡ್ವೇನ್ ಬ್ರಾವೋ vs ರಜತ್ ಭಾಟಿಯಾ, ಕೋಲ್ಕತ್ತಾ 2012
MS ಧೋನಿ vs ಅಕ್ಷರ್ ಪಟೇಲ್, ವೈಜಾಗ್ 2016
KS ಭರತ್ vs ಅವೇಶ್ ಖಾನ್, ದುಬೈ 2021
ರಾಹುಲ್ ತೆವಾಟಿಯಾ vs ಓಡಿಯನ್ ಸ್ಮಿತ್, ಮುಂಬೈ 2022
ಐಪಿಎಲ್ 2022: ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರ ಪೈಕಿ ಶಿಖರ್ ಧವನ್ ದಾಖಲೆ

ಸೋಲನ್ನೇ ಕಾಣದ ಏಕೈಕ ತಂಡ ಗುಜರಾತ್ ಟೈಟನ್ಸ್
ಐಪಿಎಲ್ 2022ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಈ ರೋಚಕ ಗೆಲುವಿನ ಮೂಲಕ ಗುಜರಾತ್ ಟೈಟನ್ಸ್ ಐಪಿಎಲ್ 2022ರ ಸೀಸನ್‌ನಲ್ಲಿ ಸೋಲನ್ನೇ ಕಾಣದ ಏಕೈಕ ತಂಡವಾಗಿ ಹೊರಹೊಮ್ಮಿದೆ. ಒಟ್ಟು 10 ತಂಡಗಳಲ್ಲಿ 9 ತಂಡಗಳು ಕನಿಷ್ಠ ಒಂದು ಪಂದ್ಯವನ್ನಾದ್ರೂ ಸೋಲನ್ನ ಕಂಡಿವೆ. ಆದ್ರೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಒಂದು ಪಂದ್ಯದಲ್ಲೂ ಸೋಲನ್ನ ಕಾಣದೆ ಮಿಂಚಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಮೂರು ಜಯಿಸಿ 6 ಪಾಯಿಂಟ್ಸ್‌ನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.


Click it and Unblock the Notifications













