ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಾಹಿದ್ ಅಫ್ರಿದಿಗೆ ಕೋಕ್; ಪಾಕಿಸ್ತಾನ ತಂಡದ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥನನ್ನು ನೇಮಿಸಿದ ಪಿಸಿಬಿ

PCB Appoints Haroon Rashid As New Chief Selector For Pakistan Cricket Team Selection Committee

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಹರೂನ್ ರಶೀದ್ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರನ್ನಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೇಮಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರಾಗಿರುವ ನಜಮ್ ಸೇಥಿ ಅವರು ಸೋಮವಾರ ಲಾಹೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಪಾಕಿಸ್ತಾನ ತಂಡದ ಹೊಸ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಹರೂನ್ ರಶೀದ್‌ರನ್ನು ನೇಮಿಸಲಾಗಿದೆ. ಉಳಿದ ಸದಸ್ಯರನ್ನು ನಂತರ ನಿರ್ಧರಿಸಲಾಗುವುದು," ಎಂದು ಹೇಳಿದರು.

69 ವರ್ಷದ ಹರೂನ್ ರಶೀದ್ ಅವರನ್ನು ಡಿಸೆಂಬರ್ 22ರಂದು ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಅವರು ಪಿಸಿಬಿಯನ್ನು ನಡೆಸಲು 14 ಸದಸ್ಯರ ಕ್ರಿಕೆಟ್ ನಿರ್ವಹಣಾ ಸಮಿತಿಯಲ್ಲಿ ಹೆಸರಿಸಿದ್ದರು.

IND vs NZ 3rd ODI: ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ, ಟಿವಿ & ಲೈವ್ ಸ್ಟ್ರೀಮಿಂಗ್ ವಿವರIND vs NZ 3rd ODI: ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ, ಟಿವಿ & ಲೈವ್ ಸ್ಟ್ರೀಮಿಂಗ್ ವಿವರ

"ಹರೂನ್ ರಶೀದ್ ಅವರು ಇದೀಗ ಪಾಕಿಸ್ತಾನ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರರಾಗಿರುವ ಕಾರಣ, ಹಿತಾಸಕ್ತಿ ಸಂಘರ್ಷ ಬೇಡವೆಂದು ಕ್ರಿಕೆಟ್ ನಿರ್ವಹಣಾ ಸಮಿತಿಗೆ ರಾಜೀನಾಮೆ ನೀಡಿದ್ದಾರೆ," ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ತಿಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಪರ 23 ಟೆಸ್ಟ್ ಮತ್ತು 12 ಏಕದಿನ ಪಂದ್ಯಗಳನ್ನು ಆಡಿರುವ ಹರೂನ್ ರಶೀದ್, ಕಳೆದ ವರ್ಷ ಪಿಸಿಬಿಯ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದರು.

PCB Appoints Haroon Rashid As New Chief Selector For Pakistan Cricket Team Selection Committee

ಹರೂನ್ ರಶೀದ್ ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ, ಹಿರಿಯ ಮತ್ತು ಜೂನಿಯರ್ ತಂಡಗಳ ಮ್ಯಾನೇಜರ್, ಹಿರಿಯ ಮತ್ತು ಜೂನಿಯರ್ ತಂಡಗಳ ಮುಖ್ಯ ತರಬೇತುದಾರ ಸೇರಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅನೇಕ ಇತರ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ನಿರ್ವಹಣಾ ಸಮಿತಿ ರಚನೆಯಾದ ಕೂಡಲೇ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಹಂಗಾಮಿ ಮುಖ್ಯ ಆಯ್ಕೆಗಾರ ಎಂದು ನೇಮಿಸಿತ್ತು ಮತ್ತು ಅವರನ್ನು ದೀರ್ಘಾವಧಿಯ ಆಧಾರದ ಮೇಲೆ ಮುಂದುವರಿಸಬೇಕೆಂದು ನಜಮ್ ಸೇಥಿ ಬಯಸಿದ್ದರು. ಆದರೆ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ನಿರಾಕರಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾನು ಎದುರಿಸಿದ ಕಠಿಣ ಬೌಲರ್ ಯಾರೆಂದು ತಿಳಿಸಿದ ಚೇತೇಶ್ವರ ಪೂಜಾರಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾನು ಎದುರಿಸಿದ ಕಠಿಣ ಬೌಲರ್ ಯಾರೆಂದು ತಿಳಿಸಿದ ಚೇತೇಶ್ವರ ಪೂಜಾರ

ಮಿಕ್ಕಿ ಆರ್ಥರ್ ಅವರೊಂದಿಗಿನ ಶೇ.90ರಷ್ಟು ಮಾತುಕತೆಗಳು ಮುಗಿದಿವೆ ಮತ್ತು ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಪಾಕಿಸ್ತಾನ ತಂಡದ ಹೊಸ ಮುಖ್ಯ ಕೋಚ್ ಕುರಿತು ಅಂತಿಮ ಘೋಷಣೆ ಮಾಡಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಜಮ್ ಸೇಥಿ ಸ್ಪಷ್ಟಪಡಿಸಿದ್ದಾರೆ.

ಮಿಕ್ಕಿ ಆರ್ಥರ್ 2016ರಿಂದ 2019 ರವರೆಗೆ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2019ರ ಏಕದಿನ ವಿಶ್ವಕಪ್ ನಂತರ ಅವರ ಗುತ್ತಿಗೆಯನ್ನು ಆಗಿನ ಆಡಳಿತ ಮಂಡಳಿ ಮುಂದುವರೆಸಿರಲಿಲ್ಲ.

Story first published: Monday, January 23, 2023, 18:40 [IST]
Other articles published on Jan 23, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X