PSL: ಪಾಕಿಸ್ತಾನದ ಪಿಎಸ್ಎಲ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಸಿಸಿಟಿವಿ ಕ್ಯಾಮೆರಾ ಕಳವು; ಪಿಸಿಬಿಗೆ ಮುಖಭಂಗ

2023ರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರಂಭವಾಗಿದ್ದು, ಪಂದ್ಯಗಳು ನಡೆಯುತ್ತಿರುವ ವೇಳೆಯೇ ಪಾಕಿಸ್ತಾನ ಕ್ರಿಕೆಟ್‌ಗೆ ಅವಮಾನಕರವಾದ ಘಟನೆ ನಡೆದಿದೆ. ಸ್ಟೇಡಿಯಂಗೆ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಿಸಿಟಿವಿ ಕ್ಯಾಮೆರಾಗಳನ್ನು ಕಳವು ಮಾಡಲಾಗಿದೆ.
ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಬೆಳಕಿಗಾಗಿ ಅಳವಡಿಸಿದ್ದ ಜನರೇಟರ್‌ಗಳ ಬ್ಯಾಟರಿಗಳೂ ನಾಪತ್ತೆಯಾಗಿವೆ ಎಂದು ವರದಿಯಾಗಿದೆ.
ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳಿಗಾಗಿ ಫೈಬರ್ ಕೇಬಲ್‌ಗಳು ಸೇರಿದಂತೆ ಕಳವು ಮಾಡಲಾಗಿರುವ ಕೆಲವು ವಸ್ತುಗಳು ಪಾಕಿಸ್ತಾನ ರೂಪಾಯಿ ಲೆಕ್ಕದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಮೌಲ್ಯದ್ದಾಗಿದೆ. ಎಆರ್‌ವೈ ಸುದ್ದಿ ಪ್ರಕಾರ, ಗುಲ್‌ಬರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಕ್ರೀಡಾಂಗಣದಲ್ಲಿನ ಕಳವು ಘಟನೆಯು ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಾವಳಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಭದ್ರತಾ ವೈಫಲ್ಯ ಕಾರಣಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನದ ಪಂಜಾಬ್ ಸರ್ಕಾರದ ನಡುವೆ ಈಗಾಗಲೇ ತಿಕ್ಕಾಟ ಆರಂಭವಾಗಿದೆ.

ಪಿಸಿಬಿ ಮತ್ತು ಮಧ್ಯಂತರ ಪಂಜಾಬ್ ಸರ್ಕಾರದ ನಡುವಿನ ಬಿಗುವಿನ ವಾತಾವರಣ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಪಂದ್ಯಗಳು ನಡೆಯುವ ಸ್ಟೇಡಿಯಂನಲ್ಲಿ ಭದ್ರತಾ ವ್ಯವಸ್ಥೆಗಳಿಗಾಗಿ ಪಾಕಿಸ್ತಾನ ರೂಪಾಯಿ ಲೆಕ್ಕದಲ್ಲಿ ಒಟ್ಟು 500 ಮಿಲಿಯನ್ ವೆಚ್ಚ ಮಾಡಬೇಕಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಪಂಜಾಬ್ ಸರ್ಕಾರವು 250 ಮಿಲಿಯನ್ ಪಾವತಿಸಲು ಸಿದ್ಧವಾಗಿದೆ ಮತ್ತು ಉಳಿದ 50 ಪ್ರತಿಶತ ವೆಚ್ಚವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೋಡಿಕೊಳ್ಳಬೇಕಿದೆ.
ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭದ್ರತಾ ವೆಚ್ಚಗಳನ್ನು ಭರಿಸುವುದು ದೊಡ್ಡ ಸವಾಲಾಗಿದೆ. ಕ್ರೀಡಾಂಗಣಗಳ ಭದ್ರತಾ ವೆಚ್ಚಗಳನ್ನು ಭರಿಸುವುದು ಪ್ರಾಂತೀಯ ಸರ್ಕಾರದ ಕರ್ತವ್ಯವಾಗಿದೆ ಎಂದು ಪಿಸಿಬಿ ವಾದಿಸುತ್ತಿದೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಅಂತಹ ಬದಲಾವಣೆ ನಡೆದರೆ, ಅದು ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.
"ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಿಎಸ್‌ಎಲ್ ಸೀಸನ್ 8ರ ಪಂದ್ಯಗಳನ್ನು ಆಡದಿರುವುದು ದೊಡ್ಡ ನಷ್ಟವಾಗಲಿದೆ. ಪಿಎಸ್‌ಎಲ್ ಅನ್ನು ಕೇವಲ ಒಂದು ನಗರದಲ್ಲಿ ಆಡುವುದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಪಂದ್ಯಾವಳಿಯ ಉತ್ಸಾಹವನ್ನು ಕೊಲ್ಲುತ್ತದೆ," ಎಂದು ರಮೀಜ್ ರಾಜಾ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications