IPL 2022: ನಾಮ್ ತೋ ಸುನಾ ಹೋಗಾ ತೇವಾಟಿಯಾ : ಯುವರಾಜ್ ಸಿಂಗ್

ಶುಕ್ರವಾರ ಸಂಜೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂಯಲ್ಲಿ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್‌ನ ಮುಖಾಮುಖಿ ಪಂದ್ಯದಲ್ಲಿ ಕೊನೆಯ ಎರಡು ಎಸತೆಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಗುಜರಾತ ಟೈಟನ್ಸ್ ರೋಚಕ ಗೆಲುವು ತಂದುಕೊಟ್ಟಿದ್ದು ರಾಹುಲ್ ತೆವಾಟಿಯಾ. ಈ ಎಡಗೈ ಬ್ಯಾಟ್ಸ್‌ಮನ್ ಅಬ್ಬರದ ಆಟಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೊಗಳಿಕೆಯ ಸುರಿಮಳೆಗೈದಿದ್ದಾರೆ.
ಪಂಜಾಬ್ ಕಿಂಗ್ಸ್ ಅನ್ನು 189 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ನಂತರ ಗುರಿ ಬೆನ್ನಟ್ಟಿದ ಗುಜರಾತ ತಂಡದ ಪರ ಶುಭ್‌ಮನ್ ಗಿಲ್ ಅವರ ಅತ್ಯಾಕರ್ಷಕ ಬ್ಯಾಟಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. 59 ಎಸೆತಗಳಲ್ಲಿ 96 ರನ್ ಗಳಿಸಿದ ಗಿಲ್ ಕೇವಲ ನಾಲ್ಕು ರನ್‌ಗಳಿಂದ ಶತಕವಂಚಿತರಾಗಿ ಪೆವಿಲಿಯನ್‌ಗೆ ಮರಳಿದರು.
ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಕೂಡ ಕೊನೆಯ ಓವರ್‌ನಲ್ಲಿ ರನೌಟ್ ಆದರು. ಈ ವೇಳೆ ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ
ಕೊನೆಯ ಓವರ್ ಎಸೆಯಲು ಬಂದಿದ್ದ ಓಡಿಯನ್ ಸ್ಮಿತ್ ಮೊದಲು ಎಸೆದ ನಾಲ್ಕು ಬಾಲ್‌ಗಳಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟರು. ನಂತರದಲ್ಲಿ ಅನಗತ್ಯ ಓವರ್‌ಥ್ರೋ ಮಾಡಿದ್ದರಿಂದ ಸ್ಟ್ರೈಕ್ ಗೆ ಬಂದಿದ್ದ ತೇವಾಟಿಯಾ ಸತತ ಎರಡು ಸಿಕ್ಸ್ರ್‌ರ್ ಸಿಡಿಸುವ ಮೂಲಕ ತಂಡಕ್ಕೆ ವಿಜಯದ ಮಾಲೆಯನ್ನು ಹಾಕಿದರು.
ತೆವಾಟಿಯಾನನ್ನ ಗಬ್ಬರ್ ಸ್ಟೈಲ್‌ನಲ್ಲಿ ಹೊಗಳಿದ ಯುವರಾಜ್ ಸಿಂಗ್
ತೆವಾಟಿಯಾ ಅವರು ಅಸಾಧ್ಯವಾದುದನ್ನು ಸಾಧ್ಯಗೊಳಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರುವಂತೆ ಮಾಡಿದ್ದಾರೆ. ತೆವಾಟಿಯಾ ಅವರ ಪ್ರದರ್ಶನ ಕುರಿತು ಯುವರಾಜ್ ಸಿಂಗ್ ಅವರು, ನಾಮ್ ತೋ ಸುನಾ ಹೋಗಾ ರಾಹುಲ್ ತೇವಾಟಿಯಾ ಎಂದು ಗಬ್ಬರ್ ಶೈಲಿಯಲ್ಲಿ ಹಾರೈಸಿದ್ದಾರೆ.
IPLನ 'ಲಾರ್ಡ್ ತೆವಾಟಿಯಾ': ಕೊನೆಯ 2 ಎಸೆತದಲ್ಲಿ 2 ಸಿಕ್ಸರ್ ಸಿಡಿಸಿ ರೋಚಕ ಗೆಲುವು ತಂದುಕೊಟ್ಟ ಪ್ಲೇಯರ್
ತೆವಾಟಿಯಾ ಇದ್ರೆ ಟೈಟಾನಿಕ್ ಹಡಗು ಕೂಡ ಮುಳುಗುವುದಿಲ್ಲ
ಟೈಟಾನ್ಸ್ ತಂಡ ಮುಳುಗುವುದನ್ನು ಪಕ್ಕದಲ್ಲಿಡಿ, ತೇವಾಟಿಯಾ ಅವರು ಟೈಟಾನಿಕ್ ಹಡಿಗಿನಲ್ಲಿದ್ದಿದ್ದರೂ ಸಹ ಅದು ಕೂಡ ಮುಳುಗುತ್ತಿರಲಿಲ್ಲ ಎಂದು ಮೊಹ್ಮದ ಕೈಫ್ ಹೇಳಿದ್ದಾರೆ.
ಇಫಾನ್ ಪಠಾನ್ ಅವರು ಪಂಜಾಬ್ ಸೆ ಕುಚ್ ತೋ ಇಶ್ಸು ಹೇ ಎಂದು ಟ್ವೀಟ್ ಮಾಡಿದ್ದಾರೆ.
ತೆವಾಟಿಯಾ ಮಿಂಚಿನ ಆಟಗಾರ ಎಂದ ಆರ್‌ಪಿ ಸಿಂಗ್
ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಅವರು, ಯಾರು ಹೇಳಿದ್ದು ಒಂದೇ ಸ್ಥಳದಲ್ಲಿ ಮಿಂಚು ಎರಡು ಬಾರಿ ಹೊಡೆಯುವುದಿಲ್ಲ ಎಂದು ಬೇಕಿದ್ದರೇ ತೇವಾಟಿಯಾ ಅವರನ್ನು ಕೇಳಿ ಎಂದಿದ್ದಾರೆ.
ಇನ್ನೂಳಿದಂತೆ ಹರ್ಭಜನ್ ಸಿಂಗ್ ಅವರು, ಕ್ಯಾ ಕಾತಾ ಹೇ ತೆವಾಟಿಯಾ ಎಂದು ಟ್ವಿಟ್ ಮಾಡಿದ್ದಾರೆ.
ತೆವಾಟಿಯಾ ಪ್ರತಿಮೆ ಇಡಬೇಕು ಎಂದ ಸೆಹ್ವಾಗ್
ಪಂಜಾಬ್ ಕಿಂಗ್ಸ್ ಡಗೌಟ್‌ನಲ್ಲಿ ತೇವಾಟಿಯಾ ಅವರ ಪ್ರತಿಮೆ ನಿರ್ಮಿಸಬೇಕು ಎಂದು ಕ್ರಿಕೇಟಿಗೆ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
''ಲಾರ್ಡ್ ತೆವಾಟಿಯಾ , ಪಂಜಾಬ್ ಡಗೌಟ್‌ನಲ್ಲಿ ಆತನ ಪ್ರತಿಮೆ ಇಡಬೇಕಾಗಿದೆ. 2 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ ಸ್ಮಿತ್‌ರಿಂದ ಅವರಿಂದ ಓವರ್‌ಥ್ರೋ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ'' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಮಿಮ್ಸ್‌ಗಳಲ್ಲಿಯೂ ತೆವಾಟಿಯಾ
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೇವಾಟಿಯ ಅವರ ಪ್ರದರ್ಶನದ ಕುರಿತು ಮಿಮ್ಸ್ ಗಳನ್ನು ಹರಿಬಿಟ್ಟಿದ್ದಾರೆ. ಡ್ರೆಸಿಂಗ್ ರೂಮ್ ನಲ್ಲಿ ತೇವಾಟಿಯ ಅವರಿಗೆ ಬೀಸಣಿಗೆ ಬೀಸುತ್ತಿರುವ, ಮತ್ತು ಕಾಲು ಒತ್ತುತ್ತಿರುವ ವೋಡಾಪೋನ್ ಜೂಜುಗಳು, ನನ್ನ ಮುಂದಿನ ಉದ್ದೇಶ ಒಂದೇ ಪಿಬಿಕೆಎಸ್ ತಂಡ ಮತ್ತು ಕೆ.ಎಲ್ ರಾಹುಲ್ ಅವರನ್ನು ಸೋಲಿಸುವುದು ಎಂದೆಲ್ಲಾ ಮಿಮ್ಸ್ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications