ಪಿಸಿಬಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ವಜಾ; ನಜಮ್ ಸೇಥಿ ಹೊಸ ಮುಖ್ಯಸ್ಥ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ಅವರನ್ನು ವಜಾಗೊಳಿಸಲಾಗಿದೆ ಮತ್ತು ಅವರ ಸ್ಥಾನಕ್ಕೆ ನಜಮ್ ಸೇಥಿ ಅವರನ್ನು ಮುಂದಿನ ಪಿಸಿಬಿ ಮುಖ್ಯಸ್ಥರನ್ನಾಗಿ ನೇಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಉನ್ನತ ಕ್ರಿಕೆಟ್ ಸಂಸ್ಥೆಯ ಮುಂದಿನ ಅಧ್ಯಕ್ಷರಾಗಿ ನಜಮ್ ಸೇಥಿ ಅವರನ್ನು ನೇಮಕ ಮಾಡಲು ಬುಧವಾರ (ಡಿಸೆಂಬರ್ 21) ಅನುಮೋದನೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತವರಿನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಸೋತ ನಂತರ ಪಿಸಿಬಿ ಮುಖ್ಯಸ್ಥರನ್ನೇ ಬದಲಾಯಿಸುತ್ತಿರುವುದು ದೊಡ್ಡ ಸಂಗತಿಯಾಗಿದೆ. ಈ ಹಿಂದೆ ಟೆಸ್ಟ್ ಪಂದ್ಯಗಳಿಗೆ ಪಿಚ್ ತಯಾರಿಸುವ ಬಗ್ಗೆ ರಮೀಜ್ ರಾಜಾ ವಿವಾದಾತ್ಮಕ ಹೇಳಿಕೆ ನೀಡಿದರು.
ಸೆಪ್ಟೆಂಬರ್ 2021ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ 35ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಮೀಜ್ ರಾಜಾ, ಪಿಸಿಬಿ ಮುಖ್ಯಸ್ಥರಾದ ನಾಲ್ಕನೇ ಟೆಸ್ಟ್ ಕ್ರಿಕೆಟಿಗರಾಗಿದ್ದರು. ಅವರನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇಮಿಸಿದ್ದರು.
ರಮೀಜ್ ರಾಜಾ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ, ಪಾಕಿಸ್ತಾನದ ಪುರುಷರ ತಂಡವು 2022ರ ಟಿ20 ವಿಶ್ವಕಪ್ ಮತ್ತು 2022ರ ಏಷ್ಯಾ ಕಪ್ ಫೈನಲ್‌ಗೆ ತಲುಪಿದಾಗ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿತ್ತು. ಅದಕ್ಕೂ ಮುನ್ನ 2021ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತ್ತು. ಆದರೆ ಟ್ರೋಫಿ ಗೆಲ್ಲಲು ವಿಫಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications