ರಣಜಿ ಕ್ರಿಕೆಟ್: ತನ್ನ ಮಗುವಿನ ಅಂತ್ಯಕ್ರಿಯೆ ಮುಗಿಸಿ ಬಂದು, ಶತಕ ಸಿಡಿಸಿದ ವಿಷ್ಣು ಸೋಲಂಕಿ

ಕೆಲ ದಿನಗಳ ಹಿಂದಷ್ಟೇ ತನ್ನ ಮಗಳನ್ನ ಕಳೆದುಕೊಂಡಿದ್ದ ಬರೋಡಾ ಕ್ರಿಕೆಟರ್ ವಿಷ್ಣು ಸೋಲಂಕಿ ಚಂಡೀಗಡ ವಿರುದ್ಧದ ರಣಜಿ ಟ್ರೋಫಿ 2021-22 ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ವಿಷ್ಣುವಿನ ಮಗು ಜನಿಸಿ ಕೆಲದಿನಗಳಲ್ಲೇ ತೀರಿ ಹೋಗಿದೆ. ಆದ್ರೆ ಅಂತ್ಯಕ್ರಿಯೆ ಮುಗಿಸಿ ನೋವಿನಲ್ಲಿ ತಂಡ ಸೇರಿಕೊಂಡ ವಿಷ್ಣು ತಂಡದ ಪರ ಅಮೋಘ ಅಜೇಯ ಶತಕ ಕಲೆಹಾಕಿದ್ದಾರೆ.
ಮಗವಿನ ಅಂತ್ಯಕ್ರಿಯೆ ಮುಗಿಸಿಕೊಂಡು ನೇರವಾಗಿ ಬರೋಡಾ ತಂಡವನ್ನ ಸೇರಿಕೊಂಡ ವಿಷ್ಣು ಸೋಲಂಕಿ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.
ಭುವನೇಶ್ವರದ ವಿಕಾಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಗ್ರೂಪ್ ಬಿ ಹಂತದಲ್ಲಿ ಬರೋಡಾ ಮತ್ತು ಚಂಡೀಗಡ ಮುಖಾಮುಖಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಚಂಡೀಗಡ ಮೊದಲ ದಿನದಾಟದಲ್ಲೇ ಕೇವಲ 168 ರನ್‌ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬರೋಡಾ ಎರಡನೇ ದಿನದಾಟದಲ್ಲಿ 7 ವಿಕೆಟ್ ನಷ್ಟಕ್ಕೆ 398 ರನ್ ಕಲೆಹಾಕಿದ್ದು, 230 ರನ್‌ಗಳ ಮುನ್ನಡೆ ಸಾಧಿಸಿದೆ.

103 ರನ್ ಕಲೆಹಾಕಿದ ವಿಷ್ಣು ಸೋಲಂಕಿ
ಎರಡನೇ ದಿನದಾಟದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿಷ್ಣು ಸೋಲಂಕಿ 161 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕುವ ಮೂಲಕ ಬರೋಡಾ ತಂಡದ ಉತ್ತಮ ಲೀಡ್ ಗಳಿಸುವಂತೆ ಆಧಾರವಾದ್ರು. 63.98 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಈತ 12 ಬೌಂಡರಿಗಳನ್ನ ಸಹ ಸಿಡಿಸಿದ್ದಾನೆ.
ದಿನದಾಟದಲ್ಲಿ ಅಜೇಯರಾಗಿ ಉಳಿದ ಸೋಲಂಕಿ ಅವರು ತನ್ನ ಮಗುವನ್ನ ಕಳೆದುಕೊಂಡ ನೋವಿನಲ್ಲೂ ಧೈರ್ಯದಿಂದ ಚಂಡೀಗಡ ಬೌಲರ್‌ಗಳನ್ನ ಎದುರಿಸಿ ದಿಟ್ಟತನವನ್ನ ತೋರಿದರು.
ಸೌರಾಷ್ಟ್ರದ ವಿಕೆಟ್‌ಕೀಪರ್ ಬ್ಯಾಟರ್ ಶೆಲ್ಡನ್ ಜಾಕ್ಸನ್ ಸೋಲಂಕಿ ದಿಟ್ಟತನ ಮತ್ತು ಧೈರ್ಯವನ್ನ ಮೆಚ್ಚಿ ಟ್ವೀಟ್ ಮಾಡಿದ್ದಾರೆ.
ವಿಶ್ವಕಪ್ ತಂಡದಲ್ಲಿ ಆತ ಇರಲಿದ್ದಾನೆ: ಭಾರತದ ಅನುಭವಿ ಬೌಲರ್ ಬೆಂಬಲಕ್ಕೆ ಸುನಿಲ್ ಗವಾಸ್ಕರ್
ನನ್ನ ಜೀವನದಲ್ಲಿ ನೋಡಿದ ಅತ್ಯಂತ ಕಠಿಣ ಆಟಗಾರ: ಶೆಲ್ಡನ್ ಜಾಕ್ಸನ್
ಅಬ್ಬ ಎಂತಹ ಆಟಗಾರ, ನನಗೆ ತಿಳಿದಿರುವ ಅತ್ಯಂತ ಕಠಿಣ ಆಟಗಾರ ಈತ. ವಿಷ್ಣು ಮತ್ತು ಅವರ ಕುಟುಂಬಕ್ಕೆ ಒಂದು ದೊಡ್ಡ ನಮಸ್ಕಾರ ಇದು ಸುಲಭವಲ್ಲ. ನಿಮಗೆ ಇನ್ನೂ ನೂರಾರು ಮತ್ತು ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ" ಎಂದು 35 ವರ್ಷದ ಜಾಕ್ಸನ್ ಟ್ವೀಟ್ ಮಾಡಿದ್ದಾರೆ.
ಪ್ರೋ ಕಬಡ್ಡಿ ಫೈನಲ್: ಚಾಂಪಿಯನ್ ಪಟ್ಟಕ್ಕೆರಿದ ದಬಾಂಗ್ ಡೆಲ್ಲಿ: ರೋಚಕ ಪಂದ್ಯದಲ್ಲಿ ಪಾಟ್ನಾಗೆ ಸೋಲು
ವಿಷ್ಣು ಬದ್ದತೆಯನ್ನ ಮೆಚ್ಚಿನ ಬರೋಡಾ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಸಿಇಒ
ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಸಿಇಒ ಶಿಶಿರ್ ಹತ್ತಂಗಡಿ ಕೂಡ 29 ವರ್ಷದ ಕ್ರಿಕೆಟಿಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕೆಲವು ದಿನಗಳ ಹಿಂದೆ ತನ್ನ ನವಜಾತ ಮಗಳನ್ನು ಕಳೆದುಕೊಂಡ ಕ್ರಿಕೆಟಿಗನ ಕಥೆ. ಅವನು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು , ತಂಡಕ್ಕೆ ಹಿಂದಿರುಗಿ ಶತಕ ಸಿಡಿಸಿದ್ದಾನೆ. ಅವರ ಹೆಸರು ಸಾಮಾಜಿಕ ಮಾಧ್ಯಮದಲ್ಲಿ "ಲೈಕ್" ಮಾಡದಿರಬಹುದು, ಆದರೆ ನನಗೆ #vishnoosolanki ನಿಜ ಜೀವನದ ನಾಯಕ. ಒಂದು ಸ್ಫೂರ್ತಿ! " ಎಂದು ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಹತ್ತಂಗಡಿ ಬರೆದಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ, ಫೆಬ್ರವರಿ 11 ರ ಮಧ್ಯರಾತ್ರಿಯ ನಂತರ ಸೋಲಂಕಿ ಅವರು ತಮ್ಮ ಮಗಳ ಜನನದ ಸುದ್ದಿಯನ್ನು ಪಡೆದರು. ಆದರೆ 24 ಗಂಟೆಗಳ ಒಳಗೆ, ನವಜಾತ ಶಿಶು ಇನ್ನಿಲ್ಲ ಎಂದು ಆತನಿಗೆ ತಿಳಿಸಲಾಯಿತು. ತಮ್ಮ ರಾಜ್ಯ ತಂಡದೊಂದಿಗೆ ಭುವನೇಶ್ವರದಲ್ಲಿದ್ದ ಸೋಲಂಕಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತೆ ವಡೋದರಾಕ್ಕೆ ತೆರಳಿದರು. ಆದಾಗ್ಯೂ, ಮೂರು ದಿನಗಳಲ್ಲಿ ಆತ ವಿಮಾನ ಹತ್ತಿ ಭುವನೇಶ್ವರ್‌ಕ್ಕೆ ಹಿಂದಿರುಗಿ ತಮ್ಮ ರಾಜ್ಯ ತಂಡವನ್ನು ಸೇರಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications