ಭಾರತ vs ಐರ್ಲೆಂಡ್ ಪ್ರಥಮ ಟಿ20: ಈ ಮೈಲಿಗಲ್ಲುಗಳ ಮೇಲೆ ಪಾಂಡ್ಯ, ಡಿಕೆ ಮತ್ತು ರಾಹುಲ್ ತ್ರಿಪಾಠಿ ಕಣ್ಣು

ಇತ್ತೀಚಿಗಷ್ಟೆ ಭಾರತ ಪ್ರವಾಸ ಕೈಗೊಂಡಿದ್ದ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಆಡಿ 2-2 ಅಂತರದಲ್ಲಿ ಸರಣಿಯನ್ನು ಸಮಬಲ ಮಾಡಿಕೊಂಡ ಟೀಂ ಇಂಡಿಯಾ ತನ್ನ ಮುಂದಿನ ಅಂತರರಾಷ್ಟ್ರೀಯ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಹಾಗೂ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸುತ್ತಿದೆ.
ರೋಹಿತ್ ಶರ್ಮಾ ನಾಯಕತ್ವದ ಅನುಭವಿ ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಕಳೆದ ವರ್ಷದಿಂದ ಮುಂದೂಡಲ್ಪಟ್ಟಿರುವ ಏಕೈಕ ಟೆಸ್ಟ್ ಪಂದ್ಯ, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದೆ. ಹೀಗಾಗಿ ಐರ್ಲೆಂಡ್ ಪ್ರವಾಸಕ್ಕಾಗಿ ಬಿಸಿಸಿಐ ಪ್ರತ್ಯೇಕ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದು, ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾದಲ್ಲಿ ಟೀಮ್ ಇಂಡಿಯಾಗೆ ಮರಳಿರುವ ಹಲವು ಅನುಭವಿ ಆಟಗಾರರ ಜತೆ ಯುವ ಕ್ರಿಕೆಟಿಗರ ದಂಡೇ ಇದೆ. ಇನ್ನು ಈ ಟಿ ಟ್ವೆಂಟಿ ಸರಣಿ ಮೇಲೆ ಬಿಸಿಸಿಐ ಆಯ್ಕೆಗಾರರ ಸಮಿತಿಯ ಕಣ್ಣಿರಲಿದ್ದು ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮುಂಬರುವ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ದೊರಕುವ ಸಾಧ್ಯತೆಗಳಿವೆ. ಹೀಗಾಗಿ ಈ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿದ್ದು, ಪಂದ್ಯದಲ್ಲಿ ಆಟಗಾರರು ಈ ಕೆಳಕಂಡ ಮೈಲಿಗಲ್ಲುಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ.

ಪಾಂಡ್ಯ ಮುಟ್ಟಬಹುದಾದ ಮೈಲಿಗಲ್ಲುಗಳು
ಐರ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಲಿರುವ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 7 ಬೌಂಡರಿ ಬಾರಿಸಿದರೆ 250 ಟಿ ಟ್ವೆಂಟಿ ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ. ಹಾಗೂ 6 ಬೌಂಡರಿ ಬಾರಿಸಿದರೆ 50 ಅಂತರರಾಷ್ಟ್ರೀಯ ಟಿ ಟ್ವೆಂಟಿ ಬೌಂಡರಿ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಈ ಮೈಲಿಗಲ್ಲು ನಿರ್ಮಿಸುತ್ತಾರಾ ಇಶಾನ್ ಕಿಶನ್?
ಟೀಮ್ ಇಂಡಿಯಾ ಆರಂಭಿಕ ಆಟಗಾರ ಇಶಾನ್ ಕಿಶನ್ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 495 ರನ್ ದಾಖಲಿಸಿದ್ದು, ಈ ಪಂದ್ಯದಲ್ಲಿ 5 ರನ್ ಬಾರಿಸಿದರೆ 500 ಅಂತರರಾಷ್ಟ್ರೀಯ ಟಿ ಟ್ವೆಂಟಿ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ. ಇಶಾನ್ ಕಿಶನ್ ಈ ಪಂದ್ಯದಲ್ಲಿ 6 ಬೌಂಡರಿ ಬಾರಿಸಿದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 350 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಈ ಮೈಲಿಗಲ್ಲುಗಳ ಮೇಲೆ ಡಿಕೆ ಮತ್ತು ಇತರೆ ಆಟಗಾರರ ಕಣ್ಣು
• ರಾಹುಲ್ ತ್ರಿಪಾಠಿ ಈ ಪಂದ್ಯದಲ್ಲಿ 2 ಬೌಂಡರಿ ಬಾರಿಸಿದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 250 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ರಾಹುಲ್ ತ್ರಿಪಾಠಿ ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 100 ಸಿಕ್ಸ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ 9 ರನ್ ಬಾರಿಸಿದರೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 500 ರನ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications