ಕರುಣ್ ನಾಯರ್ ದಾಖಲೆ ತ್ರಿಶತಕ, ತಮಿಳರಿಗೆ ಪುಕ ಪುಕ
ಮುಂಬೈ, ಮಾ.10: ಕರುಣ್ ನಾಯರ್ ಅವರ ಅಮೋಘ ತ್ರಿಶತಕ ಹಾಗೂ ಕೆಎಲ್ ರಾಹುಲ್ ಅವರ ಶತಕದ ನೆರವಿನಿಂದ ತಮಿಳುನಾಡು ವಿರುದ್ಧ ಕರ್ನಾಟಕ ಬೃಹತ್ ಮೊತ್ತ ದಾಖಲಿಸಿದೆ. ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕ 189 ಓವರ್ ಗಳಲ್ಲಿ 618/7 ಸ್ಕೋರ್ ಮಾಡಿದ್ದು, 484ರನ್ ಮುನ್ನಡೆ ಪಡೆದುಕೊಂಡಿದೆ.
ಎರಡನೇ ದಿನದ ಅಂತ್ಯಕ್ಕೆ ವಾಂಖೆಡೆ ಮೈದಾನದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 99 ಓವರ್ ಗಳಲ್ಲಿ 323/5, 189ರನ್ ಮುನ್ನಡೆ ಪಡೆದುಕೊಂಡಿತ್ತು. ಕೆಎಲ್ ರಾಹುಲ್ 131, ಕರುಣ್ ನಾಯರ್ 130. 239 ರನ್ ಜೊತೆಯಾಟ ಪ್ರದರ್ಶಿಸಿದ್ದರು. ಮಂಗಳವಾರ ಆಟ ಮುಂದುವರೆಸಿದ ಈ ಕ್ರಿಕೆಟ್ ಕಲಿಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಮಿಳುನಾಡು ಬೌಲರ್ ಗಳ ಬೆವರಿಳಿಸಿದರು. [ರಣಜಿ 2ನೇ ದಿನ: ರಾಹುಲ್, ಕರುಣ್ ಶತಕ]
ರಣಜಿ ಇತಿಹಾಸದಲ್ಲೇ ಫೈನಲ್ ನಲ್ಲಿ ತ್ರಿಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಕರುಣ್ ನಾಯರ್ ಪಾತ್ರರಾಗಿದ್ದಾರೆ. ಅದರಲ್ಲೂ ದೇಶಕ್ಕೆ ಸ್ವಾತಂತ್ಯ ಬಂದ ನಂತರ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯದಲ್ಲಿ ಆಟಗಾರನೊಬ್ಬ ತ್ರಿಶತಕ ಸಿಡಿಸಿದ್ದಾರೆ. [ಪ್ರಥಮ ದರ್ಜೆ ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್]
ಇದಕ್ಕೂ ಮೊದಲು ಗುಲಾಂ ಅಹ್ಮದ್ ಅವರು 319 ರನ್ ಗಳಿಸಿದ್ದರು. ಈ ದಾಖಲೆ ಮುರಿಯಲು ಕರುಣ್ ನಾಯರ್ ಗೆ ಇನ್ನೂ 10 ರನ್ ಬೇಕಿದೆ. ಮೂರನೇ ದಿನದ ಮುಖ್ಯಾಂಶಗಳು ಹಾಗೂ ಚಿತ್ರಗಳು ಮುಂದೆ ನೋಡಿ. ಚಿತ್ರಕೃಪೆ: ಶಶಾಂಕ್ ಪಿ, ಪಿಟಿಐ.

ಉತ್ತಮ ಜೊತೆಯಾಟದ ಲಾಭ ಕರ್ನಾಟಕಕ್ಕೆ
ಮೂರನೇ ದಿನದ ಭೋಜನ ವಿರಾಮದ ವೇಳೆಗೆ 446/5 ಸ್ಕೋರ್ ಮಾಡಿ 312ರನ್ ಲೀಡ್ ಪಡೆದುಕೊಂಡಿತ್ತು. ಕರುಣ್ ನಾಯರ್ ತಮ್ಮ ವೈಯಕ್ತಿಕ ಮೊತ್ತ 70ರನ್ ಸೇರಿಸಿ 5ನೇ ಶತಕ ದಾಖಲಿಸಿದ್ದರು(200), ಕೆಎಲ್ ರಾಹುಲ್ 183ರನ್. 639 ಎಸೆತಗಳಲ್ಲಿ 362ರನ್ ಜೊತೆಯಾಟ ಹೊಂದಿದ್ದರು.

ನೋವಿನ ನಡುವೆ ನಲಿವು: ಕೆಎಲ್ ರಾಹುಲ್
ಕೆಎಲ್ ರಾಹುಲ್ ಅವರು ಭೋಜನ ವಿರಾಮ ನಂತರ ತಮ್ಮ್ ಮೊತ್ತಕ್ಕೆ 5 ರನ್ ಸೇರಿಸಿ ಔಟ್ ಆದರು. ಮೊಣಕೈ, ಮೊಣಕಾಲು ನೋವಿನಿಂದ ಬಳಲುತ್ತಿರುವ ರಾಹುಲ್ ಅವರು ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿ ತಂಡಕ್ಕಾಗಿ ಕಣಕ್ಕಿಳಿದು ದಿಟ್ಟ ಪ್ರದರ್ಶನ ನೀಡಿದರು. ತಂಡದ ಮೊತ್ತ 470ರನ್‌ಗಳಾಗಿದ್ದಾಗ ಈ ಜೋಡಿಯನ್ನು ತಮಿಳುನಾಡು ಬೌಲರ್ ರಂಗರಾಜನ್ ಮುರಿದರು. ಕೆಎಲ್ ರಾಹುಲ್ 188ರನ್ (320ಎ, 17X4, 3X6) ಗಳಿಸಿ ಪೆವಿಲಿಯನ್ ತಲುಪಿದರು.

ಶ್ರೇಯಸ್ ಗೋಪಾಲ್ ಅಚ್ಚರಿ ಸೋಲು
ಈ ನಡುವೆ ಕರ್ನಾಟಕದ ಕೆಳಕ್ರಮಾಂಕದ ಆಟಗಾರರನ್ನು ಬೇಗ ಔಟ್ ಮಾಡಲು ಸಾಕಷ್ಟು ತಂತ್ರ ನಡೆಸಿದರೂ ಫಲ ನೀಡಲಿಲ್ಲ. ಮಿಥುನ್ 39ರನ್ ಗಳಿಸಿದರೆ ನಂತರ ಬಂದ ಶ್ರೇಯಸ್ ಗೋಪಾಲ್ 11 ರನ್ ಗಳಿಸಿ ಔಟಾಗಿದ್ದು ಅಚ್ಚರಿ ಮೂಡಿಸಿತು. ಶ್ರೇಯಸ್ ಗೋಪಾಲ್ 10 ಪಂದ್ಯಗಳಲ್ಲಿ 652 ರನ್ ಗರಿಷ್ಠ 145, ಸರಾಸರಿ 59.27, 2 ಸೆಂಚುರಿ, 3 ಅರ್ಧಶತಕ.ಗಳಿಸಿರುವ ಶ್ರೇಯಸ್ ಫೈನಲ್ ಪಂದ್ಯದಲ್ಲಿ ಹೆಚ್ಚಿನ ಕೊಡುಗೆ ನೀಡಲಾಗಿಲ್ಲ.

ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾದಿದೆ
ನಾಯಕ ವಿನಯ್ ಕುಮಾರ್ ಅವರು 175ಎಸೆತಗಳಲ್ಲಿ 41ರನ್ ಗಳಿಸಿ ಅಜೇಯರಾಗಿ ಉಳಿದು ಕರುಣ್ ನಾಯರ್ ಅವರಿಗೆ ಉತ್ತಮ ಸಾಥ್ ನೀಡಿದ್ದಾರೆ.. ದಿನದ ಅಂತ್ಯಕ್ಕೆ 484ರನ್ ಮುನ್ನಡೆಯೊಂದಿಗೆ 618/7ಸ್ಕೋರ್ ಮಾಡಿರುವ ಕರ್ನಾಟಕ ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾದಿದೆ. ಕರುಣ್ ನಾಯರ್310 ರನ್(533 ಎ, 45x4, 1x6) ಗಳಿಸಿದ್ದಾರೆ. ಇನ್ನಷ್ಟು ದಾಖಲೆ ಮುರಿಯುವ ಉತ್ಸಾಹದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications