ಟೀಂ ಇಂಡಿಯಾಗಿಂತ ಪಾಕಿಸ್ತಾನ ತಂಡ ಉತ್ತಮವಾಗಿದೆ: ರಶೀದ್ ಲತೀಫ್

ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಶೀದ್ ಲತೀಫ್ ಟೀಂ ಇಂಡಿಯಾಗಿಂತ ಪಾಕಿಸ್ತಾನ ತಂಡವು ಬಲಿಷ್ಠವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಭಾರೀ ಟೀಕೆಗೆ ಕಾರಣಾಗಿದ್ದಾರೆ.
ಭಾರತ ಉತ್ತಮ ತಂಡವಾಗಿದೆ ಆದರೆ ಪಾಕಿಸ್ತಾನದಷ್ಟು ಅಲ್ಲಾ ಎಂದು ಅವರು ನಂಬುತ್ತಾರೆ. ಏಕೆಂದರೆ ಪಾಕಿಸ್ತಾನವು ಇದೀಗ ಶಾಹಿನ್ ಆಫ್ರಿದಿ, ಬಾಬರ್ ಆಜಮ್, ಮೊಹಮ್ಮದ್ ರಿಜ್ವಾನ್ ಅವರಂತಹ ಅತ್ಯುತ್ತಮ ಆಟಗಾರರನ್ನು ಹೊಂದಿದೆ ಎಂಬುದು ಲತೀಫ್ ಅಭಿಪ್ರಾಯವಾಗಿದೆ.

ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ತೀವ್ರ ಸ್ಪರ್ಧೆ
ಮುಂಬರುವ ಏಷ್ಯಾಕಪ್ ಕುರಿತು ಮಾತನಾಡಿದ ಲತೀಫ್, ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಮುಖ ಸ್ಪರ್ಧೆ ನಡೆಯಲಿದೆ. ಏಷ್ಯಾಕಪ್ ಗೆಲ್ಲುವ ಭರವಸೆ ಪಾಕಿಸ್ತಾನಕ್ಕಿದೆ ಎಂದು ಲತೀಫ್ ಹೇಳಿದ್ದಾರೆ. 2022 ರ ಏಷ್ಯಾ ಕಪ್ ಆಗಸ್ಟ್ ಅಂತ್ಯದಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದೆ.
'ಟೀಮ್ ಇಂಡಿಯಾ ಉತ್ತಮ ತಂಡ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಪಾಕಿಸ್ತಾನ ತಂಡ ಅತ್ಯುತ್ತಮ ಕ್ರಿಕೆಟ್ ಆಡುತ್ತಿದೆ. ಪಾಕಿಸ್ತಾನದಲ್ಲಿ ಶಾಹೀನ್ ಶಾ ಆಫ್ರಿದಿ, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಟಾಪ್ ಆಟಗಾರರಿದ್ದಾರೆ'' ಎಂದು ರಶೀದ್ ಲತೀಫ್ ಹೇಳಿದರು.
ಟೆಸ್ಟ್ ಇತಿಹಾಸದಲ್ಲಿ 90 ವರ್ಷಗಳಿಂದ ಅಸಾಧ್ಯವಾಗಿದ್ದ ದಾಖಲೆ ಬರೆಯಲು ಭಾರತಕ್ಕೆ ಅಪೂರ್ವ ಅವಕಾಶ!

ಕಳೆದ T20 ವಿಶ್ವಕಪ್‌ನಲ್ಲಿ ಮುಗ್ಗರಿಸಿರುವ ಭಾರತ
ಪ್ರಸ್ತುತ ಐಸಿಸಿಯಿಂದ ಗುರುತಿಸಲ್ಪಟ್ಟ ಅತ್ಯುತ್ತಮ ಆಟಗಾರರಲ್ಲಿ ಬಾಬರ್ ಅಜಮ್, ರಿಜ್ವಾನ್ ಹಾಗೂ ಶಾಹಿನ್ ಅಫ್ರಿದಿ ಪ್ರಮುಖರು. ಕಳೆದ ಅಕ್ಟೋಬರ್ 2021 ರಲ್ಲಿ ಪಾಕಿಸ್ತಾನ ಮತ್ತು ಭಾರತ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾದಾಗ, ಟೀಂ ಇಂಡಿಯಾ ನೀಡಿದ್ದ ಗುರಿಯನ್ನ 17.5 ಓವರ್‌ಗಳಲ್ಲಿ 152 ರನ್‌ಗಳಿಸಿ ಪಾಕಿಸ್ತಾನ 10 ವಿಕೆಟ್‌ಗಳ ಅಮೋಘ ಜಯವನ್ನ ಕಂಡಿತು. ಹೀಗಾಗಿ ಏಷ್ಯಾಕಪ್ ಗೆಲ್ಲುವ ಅವಕಾಶ ಪಾಕಿಸ್ತಾನಕ್ಕೆ ಹೆಚ್ಚಿದೆ ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿಗೂ ಮುನ್ನ ಕೊಹ್ಲಿಗೆ ಎಚ್ಚರಿಕೆ ನೀಡಿದ ಬಾಲ್ಯದ ಕೋಚ್!

ಭಾರತ-ಪಾಕಿಸ್ತಾನ ಟಿ20 ಮುಖಾಮುಖಿ ರೆಕಾರ್ಡ್
ಭಾರತ ಮತ್ತು ಪಾಕಿಸ್ತಾನ ಒಂಬತ್ತು ಬಾರಿ ಟಿ20ಯಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಏಳರಲ್ಲಿ ಗೆದ್ದಿದ್ದರೆ, ಉಳಿದ ಎರಡರಲ್ಲಿ ಪಾಕಿಸ್ತಾನ ಗೆದ್ದಿದೆ. ಆದಾಗ್ಯೂ, ಪಾಕಿಸ್ತಾನವು ತನ್ನ ನೆರೆಹೊರೆಯ ರಾಷ್ಟ್ರದ ಮೇಲೆ ಉತ್ತಮ ದಾಖಲೆಯನ್ನೇ ಹೊಂದಿದೆ. ಪಾಕಿಸ್ತಾನ 132 ಏಕದಿನ ಪಂದ್ಯಗಳಲ್ಲಿ 73-55 ರಷ್ಟು ಮುನ್ನಡೆ ಮತ್ತು 59 ಟೆಸ್ಟ್ ಪಂದ್ಯಗಳಲ್ಲಿ 12-9 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆ ಸಾಧಿಸಿದೆ.
ಎರಡು ತಂಡಗಳು ಮುಂಬರುವ ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಕಣಕ್ಕಿಳಿಯಲಿವೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯಲಿರುವ ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಬಿಕರಿಯಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications