BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿಯನ್ನ ಬೆಂಬಲಿಸಿದ ರವಿಶಾಸ್ತ್ರಿ: ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಬಲ!

ಭಾರತದ ಮಾಜಿ ಆಟಗಾರ, ಮಾಜಿ ಮುಖ್ಯ ಕೋಚ್ ಮತ್ತು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ತಮ್ಮ ಮಾಜಿ ಸಹ ಆಟಗಾರ ರೋಜರ್ ಬಿನ್ನಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಂದಿನ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಆ ಜಾಗಕ್ಕೆ 1983ರ ವಿಶ್ವಕಪ್ ವಿಜೇತ ತಂಡದ ಆಟಗಾರ ರೋಜರ್ ಬಿನ್ನಿ ಅಧ್ಯಕ್ಷರಾಗಲಿದ್ದಾರೆ ಎಂದು ಕಳೆದ ಕಲೆವು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದೇ ಇದೆ.

ಮೊದಲ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಲಿರುವ ಆಟಗಾರ
''ಬಿಸಿಸಿಐ ಅಧ್ಯಕ್ಷರ ಚುನಾವಣೆಗೆ ರೋಜರ್ ಹೆಸರು ಕೇಳಿ ಬಂದಿರುವುದು ಖುಷಿ ತಂದಿದೆ. 1983ರ ವಿಶ್ವಕಪ್‌ನಲ್ಲಿ ಅವರು ನನ್ನ ಸಹ ಆಟಗಾರರಾಗಿದ್ದರು. ಅವರು ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಉತ್ತಮ ಅವಕಾಶವಿದೆ. ಈಗ ಅವರು ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡರೆ ಬಿಸಿಸಿಐ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ವಿಜೇತ ತಂಡದ ಆಟಗಾರನನ್ನು ಹೊಂದಲು ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಮುಂಬೈ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಸ್ಟಾರ್ ಸ್ಪೋರ್ಟ್ಸ್ ಸಂವಾದದಲ್ಲಿ ರವಿಶಾಸ್ತ್ರಿ ಅವರು ಈ ವಿಷಯಗಳ ಕುರಿತು ಮಾತನಾಡಿದರು.
ಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ, ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆ

ತೀವ್ರ ಟೀಕೆಗೆ ಗುರಿಯಾಗಿರುವ ಸೌರವ್ ಗಂಗೂಲಿ
ತನ್ನ ಮಾತು ಮುಂದುವರಿಸಿರುವ ರವಿಶಾಸ್ತ್ರಿ, ಬಿನ್ನಿ ಬಿಸಿಸಿಐನಲ್ಲಿ ಹೊಸ ಚೈತನ್ಯ ತರಬಲ್ಲರು ಮತ್ತು ಅವರ ಅಧಿಕಾರಾವಧಿಯಲ್ಲಿ ಹಲವು ಹೊಸ ಕೆಲಸಗಳನ್ನು ಮಾಡಬಹುದು ಎಂದು ಹೇಳಿದ್ದಾರೆ. ಇದೇ ವೇಳೆಯಲ್ಲಿ ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್ ಅನ್ನು ನಿಭಾಯಿಸಿದ ರೀತಿಗೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಅವರ ಅಧಿಕಾರಾವಧಿಯು ಕೆಲವು ಅರ್ಹತೆಗಳು ಮತ್ತು ಕೆಲವು ನ್ಯೂನತೆಗಳಿಂದ ಗುರುತಿಸಲ್ಪಟ್ಟಿದೆ.
ಆದ್ರೆ ಗಂಗೂಲಿ ಮತ್ತು ಜೈ ಶಾ ಅವರ ಅವಧಿಯಲ್ಲಿ ಬಿಸಿಸಿಐ ಮುಂದಿನ 5 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳನ್ನು ದಾಖಲೆ ಮೊತ್ತದಲ್ಲಿ ಮಾರಾಟ ಮಾಡಿರುವುದು ಪ್ರಮುಖ ಹೈಲೈಟ್ ಆಗಿದೆ.
ಟಿ20 ವಿಶ್ವಕಪ್: ಬೆಂಗಳೂರಿನಿಂದ ಬ್ರಿಸ್ಬೇನ್‌ಗೆ ಹಾರಿದ ಶಮಿ, ಬುಮ್ರಾ ಸ್ಥಾನಕ್ಕೆ ಆಯ್ಕೆ ಸಾಧ್ಯತೆ!

ಬದಲಾವಣೆ ಅಗತ್ಯವಿತ್ತು ಎಂದ ರವಿಶಾಸ್ತ್ರಿ!
'ರೋಜರ್ ಬಿನ್ನಿ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಓದಿದ್ದೆ. ಆದರೆ ಬಿಸಿಸಿಐ ಅಧ್ಯಕ್ಷರು ಯಾರೂ ಎರಡನೇ ಬಾರಿಗೆ ಅಧ್ಯಕ್ಷರಾಗಲಿಲ್ಲ. ಹಾಗಾಗಿ ಗಂಗೂಲಿ ಸ್ಥಾನವನ್ನ ಬಿನ್ನಿಗೆ ನೀಡುವುದು ಬಹುತೇಕ ಔಪಚಾರಿಕವಾಗಿದ್ದು, ಇದು ಒಳ್ಳೆಯದಿದೆ. ಏಕೆಂದರೆ ಆ ಸ್ಥಾನದಲ್ಲಿ ಕೆಲಸ ಮಾಡುವ ಅವಕಾಶ ಮತ್ತೊಬ್ಬ ಕ್ರಿಕೆಟಿಗನಿಗೆ ಸಿಗಲಿದೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನೀವು ವರ್ಷಗಳವರೆಗೆ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬಹುದು. ತದನಂತರ ನೀವು ಆ ಜವಾಬ್ದಾರಿಗಳಿಂದ ಮುಂದುವರಿಯಬೇಕು. ಇವತ್ತು ಡ್ಯೂಟಿ ಮಾಡ್ತಾ ಇದ್ದೀನಿ.. ಅಂದರೆ ಇನ್ನೂ ಮೂರು ವರ್ಷ ಆದ್ರೂ ಅದೇ ಡ್ಯೂಟಿಗೆ ಕಟ್ಟೋಕೆ ಆಗಲ್ಲ.. ಹೊಸ ಜನ ಬರ್ತಾರೆ, ಹೊಸ ಜನ ಕೂಡ ಜವಾಬ್ದಾರಿ ತೆಗೆದುಕೊಳ್ಳ್ತಾರೆ. ಇದೊಂದು ರೀತಿಯ ಆರೋಗ್ಯಕರ ವಿಚಾರ. ಅದಕ್ಕೇ ಬದಲಾವಣೆ ಆಗಬೇಕು'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ದೇಶೀಯ ಕ್ರಿಕೆಟ್ ಬೆಳವಣಿಗೆಯತ್ತ ರೋಜರ್ ಗಮನ ಹರಿಸಲಿ
''ರೋಜರ್ ಬಿನ್ನಿ ಸ್ವತಃ ಕ್ರಿಕೆಟಿಗರಾಗಿರುವುದರಿಂದ, ಅವರು ಪ್ರಾಥಮಿಕವಾಗಿ ಕ್ರಿಕೆಟಿಗರ ಹಿತದೃಷ್ಟಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬಹುದು. ಅವರು ಉತ್ತಮ ಆಡಳಿತದಿಂದ ತನ್ನನ್ನು ಮೆಚ್ಚಿಸಲು ಪ್ರಯತ್ನಿಸಬಹುದು. ನನ್ನ ಪ್ರಕಾರ , ನಮಗೆ ತಳಮಟ್ಟದಿಂದ ಪ್ರಗತಿ ಬೇಕು. ಕೇವಲ ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲದೇ ದೇಶೀಯ ಕ್ರಿಕೆಟ್ ಕಡೆಗೂ ಗಮನ ಹರಿಸಬೇಕು'' ಎಂದು ರವಿಶಾಸ್ತ್ರಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications