ಕಳೆದೆರಡು ವಿಶ್ವಕಪ್ ಸೋಲಿಗೆ ಇದುವೇ ಪ್ರಮುಖ ಕಾರಣ: ಸತ್ಯ ಬಿಚ್ಚಿಟ್ಟ ರವಿಶಾಸ್ತ್ರಿ

ಟೀಂ ಇಂಡಿಯಾ ವಿಶ್ವಕಪ್ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಮೂರು ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾ ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದೆ. ತವರಿನಲ್ಲಷ್ಟೇ ಅಲ್ಲದೆ ಎದುರಾಳಿ ನೆಲದಲ್ಲೂ ಅನೇಕ ಸರಣಿಗಳನ್ನ ಜಯಿಸಿದೆ. ಇದಕ್ಕೆ ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯು ಉದಾಹರಣೆಗಳಲ್ಲಿ ಒಂದಾಗಿದೆ.
ಸತತ ದ್ವಿಪಕ್ಷೀಯ ಸರಣಿಗಳನ್ನ ಗೆಲ್ಲುತ್ತಿರುವ ಭಾರತ ಇತ್ತೀಚೆಗಷ್ಟೇ ಇಂಗ್ಲೆಂಡ್‌ನಲ್ಲಿ ಟಿ20 ಹಾಗೂ ಏಕದಿನ ಸರಣಿಯನ್ನ ಜಯಿಸಿತು. ವಿಂಡೀಸ್ ವಿರುದ್ಧ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನ ಮಡಿಲಿಗೆ ಹಾಕಿಕೊಂಡಿದೆ. ಇಷ್ಟಾದ್ರೂ ಭಾರತಕ್ಕೆ ಐಸಿಸಿ ಪ್ರಶಸ್ತಿ ಗೆಲ್ಲುವುದು ಸವಾಲಾಗಿಯೇ ಉಳಿದಿದೆ.
ಭಾರತ ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದಿತ್ತು. 2013ರಲ್ಲಿ ಕೊನೆಯ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಎರಡೂ ಟ್ರೋಫಿಗಳನ್ನ ಎಂ.ಎಸ್ ಧೋನಿ ನಾಯಕತ್ವದಲ್ಲಿ ಜಯಿಸಿದ ಬಳಿಕ ಭಾರತವು ಐಸಿಸಿ ಟ್ರೋಫಿಯನ್ನ ಕನಸು ನನಸಾಗಲಿಲ್ಲ.

ಕೊಹ್ಲಿ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲುವು ಕನಸಾಗಿಯೇ ಉಳಿಯಿತು
2011ರ ವಿಶ್ವಕಪ್ ಬಳಿಕ 2015ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ, 2019ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಆಡಿತು. ಆದರೆ ಪ್ರಶಸ್ತಿಯನ್ನು ತಲುಪಲು ವಿಫಲವಾಯಿತು. ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ವಿಶ್ವಕಪ್‌ನಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹೊಂದಿತ್ತು, ಆದರೆ ಆ ಕನಸು ನನಸಾಗಿಯೇ ಉಳಿಯಿತು. ಕೋಚ್ ಆಗಿದ್ದಾಗ ವಿಶ್ವಕಪ್ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣವನ್ನು ಶಾಸ್ತ್ರಿ ಈಗ ಬಹಿರಂಗಪಡಿಸಿದ್ದಾರೆ.

ತಂಡದಲ್ಲಿ ಉತ್ತಮ ಆಲ್‌ರೌಂಡರ್ ಕೊರತೆ ಇದೆ
ಉತ್ತಮ ಆಲ್‌ರೌಂಡರ್‌ನ ಕೊರತೆಯೇ ಐಸಿಸಿ ಟ್ರೋಫಿ ಗೆಲ್ಲದೇ ಇರಲು ಕಾರಣ ಎನ್ನುತ್ತಾರೆ ಶಾಸ್ತ್ರಿ. ಉತ್ತಮ ಆಲ್‌ರೌಂಡರ್‌ಗಳನ್ನು ಹುಡುಕಲು ಆಯ್ಕೆದಾರರಿಗೆ ತಿಳಿಸಲಾಗಿತ್ತು. ಆದರೆ ಅವರಿಂದ ಸಾಧ್ಯವಾಗಲಿಲ್ಲ ಎಂದು ಶಾಸ್ತ್ರಿ ಹೇಳಿದರು. "ಟಾಪ್ ಸಿಕ್ಸ್‌ನಲ್ಲಿ ಬೌಲಿಂಗ್ ಮಾಡುವ ಕನಿಷ್ಠ ಒಬ್ಬ ವ್ಯಕ್ತಿಯನ್ನು ನಾನು ಯಾವಾಗಲೂ ಕೇಳುತ್ತೇನೆ. ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಕೋಚ್ ಆಗಿ ದೊಡ್ಡ ಸಮಸ್ಯೆ ಎದುರಿಸಿದ್ದೆ'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಕಳೆದ 6 ಪಂದ್ಯಗಳಲ್ಲಿ 52ರನ್ ಕಲೆಹಾಕಿದ್ದ ಶಾಯ್ ಹೋಪ್, ಭಾರತದ ವಿರುದ್ಧ ಸೆಂಚುರಿ ಸಿಡಿಸಿದ್ದೇಗೆ?

ಹಾರ್ದಿಕ್ ಬದಲು ಯಾರನ್ನೂ ಹುಡುಕಲಿಲ್ಲ!
''ಹಾರ್ದಿಕ್ ಇಲ್ಲದೇ ತಂಡವನ್ನ ಮುನ್ನಡೆಸಿದ್ದು, ಭಾರತ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದು ವಿಶ್ವಕಪ್‌ನಲ್ಲೂ ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಏಕೆಂದರೆ ಹಾರ್ದಿಕ್ ಅನುಪಸ್ಥಿತಿಯಲ್ಲಿ ಭಾರತದ ಪರ ಬೌಲಿಂಗ್ ಮಾಡಲು ಅಗ್ರ ಸಿಕ್ಸ್‌ನಲ್ಲಿ ಯಾರೂ ಇರಲಿಲ್ಲ. ಅದೊಂದು ದೊಡ್ಡ ಸಮಸ್ಯೆ. ಯಾರನ್ನಾದರೂ ಹುಡುಕಲು ಆಯ್ಕೆದಾರರಿಗೆ ತಿಳಿಸಲಾಯಿತು. ಆದರೆ ಯಾರೂ ಬರಲಿಲ್ಲ'' ಎಂದು ಫ್ಯಾನ್‌ಕೋಡ್‌ನೊಂದಿಗೆ ಮಾತನಾಡುವಾಗ ಶಾಸ್ತ್ರಿ ಹೇಳಿದರು.
ಶಾಸ್ತ್ರಿ ಅವರ ತರಬೇತಿಯಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತು. ಅಲ್ಲದೆ ಅವರ ತರಬೇತಿಯಲ್ಲಿ ಭಾರತ ತಂಡವು ಅನೇಕ ಗಮನಾರ್ಹ ಸಾಧನೆಗಳನ್ನು ಸಾಧಿಸಿದೆ. ಭಾರತ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಳಿಸಿತು ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತು.
IND vs WI: ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ವೆಸ್ಟ್ ಇಂಡೀಸ್‌ಗೆ ತೆರಳಿದ ಸ್ಟಾರ್ ಸ್ಪಿನ್ನರ್

2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತ
2019ರ ಏಕದಿನ ವಿಶ್ವಕಪ್ ಸೆಮಿಸ್‌ನಲ್ಲಿ ಭಾರತ ಸೋತಿತ್ತು. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಈ ಪಂದ್ಯವು ಎಂಎಸ್ ಧೋನಿ ಅವರ ಕೊನೆಯ ಅಂತರಾಷ್ಟ್ರೀಯ ಪಂದ್ಯ ಎಂದು ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಕೊನೆಯದಾಗಿ ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ ಭಾರತ ಪಾಕಿಸ್ತಾನ ವಿರುದ್ಧ ಸೋತಿದ್ದಲ್ಲದೆ, ಲೀಗ್ ಹಂತದಲ್ಲೇ ಹೊರಬಿದ್ದಿತು.
ಸತತವಾಗಿ 23 ಮತ್ತು 22 ಏಕದಿನ ಪಂದ್ಯ ಸೋತ ಕಳಪೆ ತಂಡವಿದು; ಅಪಾಯದಲ್ಲಿ ವಿಂಡೀಸ್!

ಹಾರ್ದಿಕ್ ಗಾಯಗೊಂಡರೆ ಪರ್ಯಾಯ ಆಲ್‌ರೌಂಡರ್ ಇಲ್ಲ!
ಭಾರತ ಆಲ್ ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ನೆಚ್ಚಿಕೊಂಡಿದೆ. ಹಾರ್ದಿಕ್ ಗಾಯಗೊಂಡರೆ, ಇನ್ನೂ ಪರ್ಯಾಯವಿಲ್ಲ. ಭಾರತ ವೆಂಕಟೇಶ್ ಅಯ್ಯರ್ ಅವರನ್ನು ಪ್ರಯತ್ನಿಸಿತು ಆದರೆ ಅದು ನಿರೀಕ್ಷೆಗೆ ತಕ್ಕಂತೆ ಸಾಗಲಿಲ್ಲ. ಅಗ್ರ ಆರರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹೀಗೆ ಸಾಲು ಸಾಲು ಬ್ಯಾಟರ್‌ಗಳೇ ಹೊರತು, ಜೊತೆಗೆ ಬೌಲಿಂಗ್ ಮಾಡಬಲ್ಲ ಆಲ್‌ರೌಂಡರ್ ಕೊರತೆ ಭಾರತಕ್ಕಿದೆ.
ಭಾರತಕ್ಕೆ ಮುಂದಿನ ಬಹುದೊಡ್ಡ ಸವಾಲು ಟಿ20 ವಿಶ್ವಕಪ್. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಒಬ್ಬ ಉತ್ತಮ ಆಲ್‌ರೌಂಡರ್ ಇಲ್ಲದಿರುವುದು ಭಾರತದ ಮುಂದಿರುವ ಪ್ರಶ್ನೆ. ಹಾರ್ದಿಕ್ ಪಾಂಡ್ಯ ಗಾಯಗೊಂಡರೆ ತಂಡದ ಲೆಕ್ಕಾಚಾರಗಳೆಲ್ಲವೂ ತಪ್ಪುತ್ತವೆ. ಭಾರತ ಉತ್ತಮ ಆಲ್‌ರೌಂಡರ್‌ಗಳನ್ನು ಅಭಿವೃದ್ಧಿಪಡಿಸದಿದ್ದರೆ, ದೊಡ್ಡ ಹಿನ್ನಡೆ ಎದುರಿಸಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications