RCB VS GT: ಬೌಲಿಂಗ್ ಮಾಡಲು ಟೇಪ್ ಹಿಡಿದು ಅಳತೆ ಮಾಡಿದ ಶಮಿಗೆ, ಅಂಪೈರ್ ಕ್ಲಾಸ್

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಗೆಲ್ಲುವ ಮೂಲಕ ಟೇಬಲ್ ಟಾಪರ್ ಆಗಿಯೇ ಮುಂದುವರಿದಿದೆ. ಆರ್‌ಸಿಬಿ ನೀಡಿದ್ದ 171 ರನ್ ಗುರಿಯನ್ನ ಹಾರ್ದಿಕ್ ಪಾಂಡ್ಯ ಪಡೆ ಮೂರು ಎಸೆತ ಬಾಕಿ ಇರುವಂತೆಯೇ ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಇದರ ಜೊತೆಗೆ ಮೈದಾನದಲ್ಲಿ ತಮಾಷೆ ತರುವಂತಹ ಘಟನೆಗೂ ಸಾಕ್ಷಿಯಾಗಿದೆ.
ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿ ಒಂದು ಎಸೆತ ಮುಗಿಯುತ್ತಿದ್ದಂತೆ, ವೇಗಿ ಮೊಹಮ್ಮದ್ ಶಮಿ ಟೇಪ್ ಹಿಡಿದುಕೊಂಡು ಬೌಲಿಂಗ್ ರನ್ ಅಪ್ ಅನ್ನು ಅಳತೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ಗೆ ಕಾರಣವಾಗಿದೆ.
ಮೊಹಮ್ಮದ್ ಶಮಿ ವಿರಾಟ್ ಕೊಹ್ಲಿಗೆ ಫುಲ್ ಲೆಂಗ್ತ್ ಎಸೆತವನ್ನು ಮಾಡಿದ ಬಳಿಕ ಒಂದೆರಡು ತಪ್ಪುಗಳನ್ನ ಮಾಡಿದರು. ಹೀಗಾಗಿ ಅವರು ತನ್ನ ಬೌಲಿಂಗ್ ರನ್-ಅಪ್‌ನಿಂದ ಸಂತೋಷಗೊಂಡಂತೆ ತೋರಲಿಲ್ಲ. ತನ್ನಿಂದ ಏನೋ ತಪ್ಪಾಗುತ್ತಿದೆ ಎಂಬುದನ್ನು ಅಂದಾಜಿಸಿದ ನಂತರ, ಶಮಿ ತನ್ನ ರನ್ ಅಪ್ ಅನ್ನು ಮತ್ತೊಮ್ಮೆ ಗುರುತಿಸಲು ಅಳತೆ ಟೇಪ್ ಅನ್ನು ಕೇಳಿದರು.
ಹೀಗಾಗಿ ಈ ಪ್ರಕ್ರಿಯೆಯು ಖಂಡಿತವಾಗಿಯೂ ಆಟದ ಮಧ್ಯದೆ ಸ್ವಲ್ಪ ಸಮಯ ತೆಗೆದುಕೊಂಡಿತು. ಅದೇ ಕಾರಣಕ್ಕಾಗಿ ಅಂಪೈರ್ ಬೌಲರ್‌ನೊಂದಿಗೆ ವಾಗ್ವಾದ ನಡೆಸಿ, ಪಂದ್ಯ ವಿಳಂಭಕ್ಕೆ ಕಾರಣವಾಗುತ್ತೀರಾ ಎಂದು ವಾರ್ನಿಂಗ್ ನೀಡಿದ್ದಾರೆ. ಆದರೆ ಶಮಿ ಅವರ ಪರಿಸ್ಥಿತಿಯನ್ನು ವಿವರಿಸಿದ್ದು, ಅವರ ರನ್-ಅಪ್ ಅನ್ನು ಮತ್ತೊಮ್ಮೆ ಗುರುತಿಸಿಕೊಂಡರು. ಹೀಗಾಗಿಯೇ ಇದು ಅವರಿಗೆ ಸ್ವಲ್ಪ ಸಮಯ ತೆಗೆದುಕೊಂಡಿತು ಮತ್ತು ಆಟದ ಮೊದಲ ಓವರ್ ಅನ್ನು ವಿಸ್ತರಿಸಲಾಯಿತು.
ಹೀಗೆ ಶಮಿ ಗಲ್ಲಿ ಟೇಪ್ ಹಿಡಿದು ತನ್ನ ಬೌಲಿಂಗ್ ರನ್‌ಅಪ್ ಅಳತೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಕಾರಣವಾಗಿದೆ.
ಗುಜರಾತ್ ಟೈಟನ್ಸ್ ಆರ್‌ಸಿಬಿ ವಿರುದ್ಧ ಆರು ವಿಕೆಟ್‌ಗಳ ಜಯಗಳಿಸುವ ಮೂಲಕ 16 ಪಾಯಿಂಟ್ಸ್‌ಗಳೊಂದಿಗೆ IPL 2022ರ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪರ್ ಆಗಿಯೇ ಉಳಿದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications