Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs KKR: ಕೆಕೆಆರ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ

RCB

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ರೋಚಕ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಮೂರು ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಐಪಿಎಲ್ 2022ರ ಸೀಸನ್‌ನ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಅಂಕಗಳನ್ನ ಗಳಿಸಿದೆ

ಕೆಕೆಆರ್ ನೀಡಿದ 129ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಆರ್‌ಸಿಬಿ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಉಮೇಶ್ ಯಾದವ್ ದಾಳಿಗೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು.

17 ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ

17 ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ

ಮೊದಲ ಓವರ್‌ನಲ್ಲೇ ಉಮೇಶ್ ಯಾದವ್ ಬೌಲಿಂಗ್‌ ಅನುಜ್ ರಾವತ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ರು. ಇದ್ರ ಬೆನ್ನಲ್ಲೇ ನಾಯಕ ಫಾಫ್ ಡುಪ್ಲೆಸಿಸ್‌ ಕೇವಲ 5 ರನ್‌ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ಪಂಜಾಬ್‌ ವಿರುದ್ಧ 88ರನ್ ಸಿಡಿಸಿದ್ದ ಡುಪ್ಲೆಸಿಸ್ ಈ ಪಂದ್ಯದಲ್ಲಿ ಸಿಂಗಲ್ ಡಿಜಿಟ್‌ಗೆ ಔಟಾದ್ರು.

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 7 ಎಸೆತಗಳಲ್ಲಿ 12ರನ್‌ಗಳಿಸಿದ್ದ ವಿರಾಟ್ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ ಶೆಲ್ಡನ್‌ ಜಾಕ್ಸನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಔಟಾದ್ರು.

ಶೆರ್ಫೇನ್ ರುದರ್‌ಫೋರ್ಡ್-ಶಬಾಜ್ ಜೊತೆಯಾಟ

ಶೆರ್ಫೇನ್ ರುದರ್‌ಫೋರ್ಡ್-ಶಬಾಜ್ ಜೊತೆಯಾಟ

ಬಹುಬೇಗನೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್‌ಸಿಬಿಗೆ ವಿಂಡೀಸ್ ಪ್ಲೇಯರ್ ಶೆರ್ಫೇನ್ ರುದರ್‌ಫೋರ್ಡ್ ಹಾಗೂ ಆಲ್‌ರೌಂಡರ್ ಶಬಾಜ್ ಅಹ್ಮದ್ ನೆರವಾದ್ರು. ರುದರ್‌ಫೋರ್ಡ್ 28, ಶಬಾಜ್ ಮೂರು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 27ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು.

ಇಬ್ಬರು ಪ್ರಮುಖ ಬ್ಯಾಟರ್‌ಗಳು ಔಟಾದ ಬಳಿಕ ಗೆಲುವಿನ ಹೊಣೆ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತು ಹರ್ಷಲ್ ಪಟೇಲ್ ಮೇಲೆ ಇತ್ತು. ಕೆಕೆಆರ್‌ ದಿನೇಶ್ ಕಾರ್ತಿಕ್‌ ರನೌಟ್ ಮಿಸ್ ಮಾಡಿದ ಪರಿಣಾಮ ಆರ್‌ಸಿಬಿ ಮೇಲುಗೈ ಸಾಧಿಸಿತು. ಡಿಕೆ 7 ಎಸೆತಗಳಲ್ಲಿ 14 ರನ್‌ ಹಾಗೂ ಹರ್ಷಲ್ ಪಟೇಲ್ ಅಜೇಯ 10 ರನ್‌ ಕಲೆಹಾಕಿ ಆರ್‌ಸಿಬಿಗೆ ಈ ಸೀಸನ್‌ನ ಮೊದಲ ಗೆಲುವು ತಂದುಕೊಟ್ಟರು.

ಹಾರ್ದಿಕ್ ಪಾಂಡ್ಯ ಚೆನ್ನಾಗಿ ಬೌಲಿಂಗ್ ಮಾಡಿದ್ರೆ, ವಿಶ್ವಕಪ್‌ಗೆ ನೇರವಾಗಿ ಆಯ್ಕೆ: ಸುನಿಲ್ ಗವಾಸ್ಕರ್

ಹಸರಂಗ ದಾಳಿಗೆ ನಡುಗಿದ್ದ ಕೆಕೆಆರ್

ಹಸರಂಗ ದಾಳಿಗೆ ನಡುಗಿದ್ದ ಕೆಕೆಆರ್

ಇದಕ್ಕೂ ಮೊದಲು ಕೊಲ್ಕತ್ತ ನೈಟ್ ರೈಡರ್ಸ್‌ ಆರ್‌ಸಿಬಿ ದಾಳಿಗೆ ತತ್ತರಿಸಿ 128 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ. ಶ್ರೀಲಂಕಾ ಮೂಲದ ಸ್ಪಿನ್ನರ್ ವಹಿಂದು ಹಸರಂಗ, ಹರ್ಷಲ್ ಪಟೇಲ್ ಹಾಗೂ ಆಕಾಶ್ ದೀಪ್ ದಾಳಿಗೆ ಪತರುಗುಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ರನ್‌ಗಳಿಗೆ ತೃಪ್ತಿಪಟ್ಟಿತು.

ವೆಂಕಟೇಶ್ ಅಯ್ಯರ್ 10ರನ್‌ಗಳಿಗೆ ಆಕಾಶ್ ದೀಪ್‌ಗೆ ಮೊದಲು ವಿಕೆಟ್ ಬಲಿಯಾದ್ರೆ, ಅನುಭವಿ ಓಪನರ್ ಅಜಿಂಕ್ಯ ರಹಾನೆ 9 ರನ್‌ಗೆ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ರು. ನಿತಿಶ್ ರಾಣಾ 12ರನ್‌ಗೆ ಆಕಾಶ್ ದೀಪ್‌ ಬೌಲಿಂಗ್‌ನಲ್ಲಿ ಔಟಾದ್ರೆ, ಇದ್ರ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಹಸರಂಗಗೆ ಮೊದಲ ವಿಕೆಟ್ ಒಪ್ಪಿಸಿದ್ರು.

ನಾಲ್ಕು ವಿಕೆಟ್ ಉರುಳಿಸಿದ ಆರ್‌ಸಿಬಿ ಸ್ಪಿನ್ನರ್

ನಾಲ್ಕು ವಿಕೆಟ್ ಉರುಳಿಸಿದ ಆರ್‌ಸಿಬಿ ಸ್ಪಿನ್ನರ್

ತನ್ನ ಸ್ಪಿನ್ ಚಾಕಚಾಕತ್ಯೆಯಿಂದ ಲಂಕಾ ಸ್ಪಿನ್ನರ್ ಹಸರಂಗ ಸುನಿಲ್ ನರೈನ್ ಮತ್ತು ಶೆಲ್ಡನ್ ಜಾಕ್ಸನ್ ವಿಕೆಟ್ ಕೂಡ ಕಬಳಿಸಿದ್ರು. ಸ್ಯಾಮ್ ಬಿಲ್ಲಿಂಗ್ (14), ಆಂಡ್ರೆ ರಸೆಲ್ (25) ವಿಕೆಟ್ ಪಡೆಯುವಲ್ಲಿ ಚಾಂಪಿಯನ್ ಬೌಲರ್ ಹರ್ಷಲ್ ಪಟೇಲ್ ಯಶಸ್ವಿಯಾದ್ರು.

99 ರನ್‌ಗೆ 8 ವಿಕೆಟ್ ಕಳೆದುಕೊಂಡ ಕೆಕೆಆರ್ ಪರ ಉಮೇಶ್ ಯಾದವ್ 18 ರನ್ ಹಾಗೂ ಟಿಮ್ ಸೌಥಿ 10ರನ್‌ಗಳ ಕೊಡುಗೆಯಿಂದ ಕೆಕೆಆರ್ 18.5 ಓವರ್‌ಗಳಿಗೆ 128 ರನ್‌ಗಳಿಗೆ ಸರ್ವಪತನಗೊಂಡಿತು. ಕೆಕೆಆರ್ ಪರ ರಸೆಲ್ 25ರನ್‌ಗಳಿಸಿದ್ದೇ ಗರಿಷ್ಠವಾಗಿತ್ತು.

ವಹಿಂದು ಹಸರಂಗ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದ್ರೆ, ಹರ್ಷಲ್ ಪಟೇಲ್ 4 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಕಬಳಿಸಿದ್ರು. ಹರ್ಷಲ್ ಪಟೇಲ್ ಮೊದಲೆರಡು ಓವರ್ ಮೇಡನ್ ಅನ್ನೋದು ವಿಶೇಷ. ಸಿರಾಜ್ ಬಳಿಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಮೊದಲೆರಡು ವಿಕೆಟ್ ಕಬಳಿಸಿದ್ದ ಆಕಾಶ್ ದೀಪ್ 3.5 ಓವರ್‌ಗಳಲ್ಲಿ ಸ್ವಲ್ಪ ದುಬಾರಿಯಾಗಿ 45 ರನ್ ನೀಡಿ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಕೇವಲ 1 ವಿಕೆಟ್ ಉರುಳಿಸಿದರು. ನಾಲ್ಕು ಪ್ರಮುಖ ವಿಕೆಟ್ ಪಡೆದ ವಹಿಂದು ಹಸರಂಗ ಪಂದ್ಯ ಪುರುಷೊತ್ತಮ ಪ್ರಶಸ್ತಿ ಪಡೆದರು.

ಕೆಕೆಆರ್ ವಿರುದ್ಧ ಆರ್‌ಸಿಬಿ ಗೆಲುವಿನ ಬಳಿಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಯಾವ ಸ್ಥಾನ ಪಡೆದಿದೆ ಎಂಬುದನ್ನ ಕ್ಲಿಕ್ ಮಾಡುವ ಮೂಲಕ ಇಲ್ಲಿ ತಿಳಿಯಿರಿ

Story first published: Thursday, March 31, 2022, 13:27 [IST]
Other articles published on Mar 31, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+