ರಣಜಿ: ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಬೆಂಗಳೂರು, ಜ.30: ಕರ್ನಾಟಕದ ಕ್ರಿಕೆಟ್ ಕಲಿ ಕೆಎಲ್ ರಾಹುಲ್ ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಮೂಲಕ ನಾಡಿನ ಹೆಮ್ಮೆಯ ಪುತ್ರ ಎನಿಸಿಕೊಂಡಿದ್ದಾರೆ. ಉತ್ತರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ತ್ರಿಶತಕ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮುನ್ನೂರು ರನ್ ಗಡಿ ದಾಟಿದ ಪ್ರಪ್ರಥಮ ಕನ್ನಡಿಗ ಎಂಬ ಕೀರ್ತಿ ರಾಹುಲ್ ಗೆ ಸಲ್ಲುತ್ತದೆ.
ಉತ್ತರಪ್ರದೇಶದ ವಿರುದ್ಧದ ರಣಜಿ ಪಂದ್ಯದ ಎರಡನೇ ದಿನವಾದ ಶುಕ್ರವಾರ ಕೆಎಲ್ ರಾಹುಲ್ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ 300 ರನ್ ಮೈಲಿಗಲು ದಾಟಿದರು. ಚಹಾ ವಿರಾಮದ ವೇಳೆ 317 ರನ್ (422 ಎಸೆತ, 45X4, 3X6) ಸಿಡಿಸಿ ಕ್ರೀಸ್ ನಲ್ಲಿದ್ದಾರೆ. ಕರ್ನಾಟಕ 154 ಓವರ್ ಗಳಲ್ಲಿ 633/6 ಸ್ಕೋರ್ ಮಾಡಿದೆ. [ಮೊದಲ ದಿನದ ವರದಿ ನೋಡಿ]

ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ ತಂಡ 326/4 ಸ್ಕೋರ್ ಮಾಡಿತ್ತು. 150 ರನ್ ಗಳಿಸಿದ್ದ ರಾಹುಲ್ ಅವರು ಇಂದು ತ್ರಿಶತಕ ಬಾರಿಸಿದ್ದಾರೆ. 31 ನೇ ಪ್ರಥಮ ದರ್ಜೆ ಪಂದ್ಯದಲ್ಲಿ 8ನೇ ಶತಕ ದಾಖಲಿಸಿದರು.
ರಾಹುಲ್ ಗೆ ನಿನ್ನೆ ಸಾಥ್ ನೀಡಿದ್ದ ಶ್ರೇಯಸ್ ಗೋಪಾಲ್ ನಿನ್ನೆ ಸ್ಕೋರಿಗೆ 2 ರನ್ ಸೇರಿ 90 ರನ್ ಗಳಿಸಿ ಪ್ರವೀಣ್ ಕುಮಾರ್ ಗೆ ಬೋಲ್ಡ್ ಆದರು. ವಿಕೆಟ್ ಕೀಪರ್ ಸಿಎಂ ಗೌತಮ್ ಅರ್ಧಶತಕ (57 ರನ್) ಹಾಗೂ ಅಬ್ರಾರ್ ಖಾಜಿ 71 ನಾಟೌಟ್ ಆಗಿ ತಂಡದ ಮೊತ್ತವನ್ನು ಹೆಚ್ಚಿಸಿದ್ದಾರೆ. [ಗವಾಸ್ಕರ್ ಸಮಕ್ಕೆ ನಿಂತ ಕೆಎಲ್ ರಾಹುಲ್ ]
337 ರನ್ ಗಳಿಸಿ ಔಟ್: ಕರ್ನಾಟಕದ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆಯೊಂದಿಗೆ ಕೆಎಲ್ ರಾಹುಲ್ ಅವರು ಪೆವಿಲಿಯನ್ ಸೇರಿದ್ದಾರೆ. ಅಲಿ ಮುರ್ತಜಾ ಬೌಲಿಂಗ್ ನಲಿ ಪರ್ವಿಂದರ್ ಸಿಂಗ್ ಗೆ ಕ್ಯಾಚಿತ್ತು ಔಟಾದರು. ಎರಡನೇ ದಿನದ ಅಂತ್ಯಕ್ಕೆ ರಾಹುಲ್ ಅವರ 11 ಗಂಟೆಗಳ ಸುದೀರ್ಘ ಇನ್ನಿಂಗ್ಸ್ ಅಂತ್ಯಕೊಂಡಿತು.
ಅಬ್ರಾಬ್ ಖಾಜಿ 117 ಬಾರಿಸಿ ಅಜೇಯರಾಗಿ ಉಳಿದಿದ್ದು ಮತ್ತೊಂದು ವಿಶೇಷ. 175 ಓವರ್ ಗಳಲ್ಲಿ 719/9 ಸ್ಕೋರ್ ಮಾಡಿ ಕರ್ನಾಟಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ ನಲ್ಲಿ 3 ಓವರ್ ಗಳಲ್ಲಿ 10/0 ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರನಾಗಿ ಆಡಿ ಭರ್ಜರಿ ಶತಕ ದಾಖಲಿಸಿದ ಕನ್ನಡಿಗ ಕೆ.ಎಲ್.ರಾಹುಲ್ ಅವರು ರಾಜ್ಯ ತಂಡಕ್ಕೆ ಮರಳಿ ಬರೋಡಾ ವಿರುದ್ಧ ಪಂದ್ಯವನ್ನು ಆಡಿದ್ದರು. ಅದರೆ, ಉತ್ತರಪ್ರದೇಶ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದಾರೆ.
ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
* 337- ಕೆಎಲ್ ರಾಹುಲ್
* 283- ಬ್ಯಾರಿಂಗ್ಟನ್ ರೋಲ್ಯಾಂಡ್
* 267- ವಿ ಅರುಣ್ ರಾಜ
* 264*- ಸಿಎಂ ಗೌತಮ್
* 259*- ಕೆ ಜೆಸ್ವಂತ್
ಒನ್ ಇಂಡಿಯಾ ಸುದ್ದಿ
Story first published: Wednesday, January 3, 2018, 10:12 [IST]
Other articles published on Jan 3, 2018
Read in English: Record: KL Rahul hits triple century
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications